ಇನ್ನೊಬ್ಬರ ಫೋಟೋವನ್ನು ತಿರುಚುವುದು ಸಾಮಾನ್ಯ
ಇಂದಿನ ಕಾಲದಲ್ಲಿ, ಯಾವುದೇ ವ್ಯಕ್ತಿಯ ಫೋಟೋವನ್ನು ತಿರುಚುವುದು ಸಾಮಾನ್ಯವಾಗಿದೆ. ಪ್ರತಿದಿನ ಮೊಬೈಲ್ ನೋಡೋವಾಗ, ಅಂತಹ ಅನೇಕ ಚಿತ್ರಗಳನ್ನು ನಾವು ನೋಡುತ್ತೇವೆ, ಈವಾಗಂತೂ ಎಐ ಯಿಂದ ಏನು ಬೇಕಾದರೂ ಮಾಡೋದಕ್ಕೆ ಸಾಧ್ಯವಾಗಿದೆ. ಆದರೆ ಇದು ತಪ್ಪು.
ಚಿತ್ರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಶಿಕ್ಷೆ
ಯಾವುದೇ ವ್ಯಕ್ತಿಯ ಫೋಟೋವನ್ನು ತಿರುಚಿದರೆ (miss usinig) ಕಠಿಣ ಶಿಕ್ಷೆ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? ವಿಶೇಷವಾಗಿ ಭಾರತದ ಪ್ರಧಾನಿ ಅಥವಾ ರಾಷ್ಟ್ರಪತಿಗಳ ಚಿತ್ರವನ್ನು ತಿರುಚಿದರೆ ಅಥವಾ ತಪ್ಪಾಗಿ ಬಳಕೆ ಮಾಡಿದ್ರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪ್ರಧಾನಿ ಅಥವಾ ರಾಷ್ಟ್ರಪತಿಗಳ ಫೋಟೋವನ್ನು ತಿರುಚಿದ್ದಕ್ಕಾಗಿ ಒಬ್ಬ ವ್ಯಕ್ತಿಗೆ ಎಷ್ಟು ಶಿಕ್ಷೆ ಸಿಗುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ? ಮತ್ತು ಈ ರೀತಿಯ ಪ್ರಕರಣದ ಬಗ್ಗೆ ಕಾನೂನು ಏನು ಹೇಳುತ್ತದೆ? ಅನ್ನೋದನ್ನು ಸಹ ನಾವಿಲ್ಲಿ ನಿಮಗೆ ಸ್ಪಷ್ಟವಾಗಿ ತಿಳಿಸಿದ್ದೇವೆ.
ಕಾನೂನು ಏನು ಹೇಳುತ್ತದೆ ಎಂದು ನಿಮಗೆ ತಿಳಿದಿದೆಯೇ?
ದೇಶದ ರಾಷ್ಟ್ರೀಯ ಚಿಹ್ನೆಗಳು, ಲಾಂಛನಗಳು ಅಥವಾ ಹೆಸರುಗಳ ದುರುಪಯೋಗವನ್ನು ತಡೆಗಟ್ಟಲು ಚಿಹ್ನೆಗಳು ಮತ್ತು ಹೆಸರುಗಳ ಅನುಚಿತ ಬಳಕೆ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ, 1950 ಅನ್ನು ಜಾರಿಗೆ ತರಲಾಗಿದೆ. ಪ್ರಧಾನಿ ಅಥವಾ ರಾಷ್ಟ್ರಪತಿಗಳ (president) ಭಾವಚಿತ್ರವನ್ನು ಹಾಳು ಮಾಡುವವರಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
ಪ್ರಧಾನಿ ಅಥವಾ ರಾಷ್ಟ್ರಪತಿಗಳ ಫೋಟೋವನ್ನು ತಿರುಚಿದರೆ ಏನು ಶಿಕ್ಷೆ ಇದೆ?
ಕಾನೂನಿನ ಪ್ರಕಾರ, ಭಾರತದ ರಾಷ್ಟ್ರಪತಿ ಅಥವಾ ಪ್ರಧಾನಿಯ ಚಿತ್ರವನ್ನು ಯಾರಾದರೂ ತಿರುಚಿರುವುದು ಕಂಡುಬಂದರೆ 5 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.
ಭಾರತ ಸರ್ಕಾರವು ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಿದೆ.
ಪ್ರಧಾನಿ ಅಥವಾ ರಾಷ್ಟ್ರಪತಿಗಳ ಫೋಟೋವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ 1 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗುತ್ತಿತ್ತು. ಇದೀಗ, ಕಾನೂನಿನ ಬದಲಾವಣೆಯ ನಂತರ, ಅದನ್ನು 5 ಲಕ್ಷಕ್ಕೆ (5 lakh fine) ಹೆಚ್ಚಿಸಲಾಯಿತು.
ನೀವು ಏನನ್ನಾದರೂ ಮಾಡುವ ಮೊದಲು ಜಾಗರೂಕರಾಗಿರಿ
ನೀವು ಎಂದಾದರೂ ಪ್ರಧಾನಿ ಅಥವಾ ರಾಷ್ಟ್ರಪತಿಗಳ ಚಿತ್ರವನ್ನು ಹಾಳು ಮಾಡಿದ್ದರೆ ಅಥವಾ ಹಾಗೆ ಮಾಡಲು ಯೋಚಿಸುತ್ತಿದ್ದರೆ, ಜಾಗರೂಕರಾಗಿರಿ. ಏಕೆಂದರೆ ಈ ಸಣ್ಣ ಕೆಲಸ ನಿಮ್ಮನ್ನು ಜೈಲಿಗೆ ತಳ್ಳಬಹುದು.