ಜಾಗತಿಕ ಹಡಗು ಮಾರ್ಗಗಳು ಸರಕು ಸಾಗಣೆ ದರಗಳಿಂದ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಂತೆಯೇ, ಕೇಪ್ ಆಫ್ ಗುಡ್ ಹೋಪ್‌ನ ಉದ್ದವಾದ ಮಾರ್ಗದಿಂದ ಹಡಗುಗಳು ಮರಳಿ ಮತ್ತೆ ಕೆಂಪು ಸಮುದ್ರ ಮಾರ್ಗಕ್ಕೆ ವಾಪಸ್ಸಾಗುತ್ತಿದ್ದಂತೆಯೇ, ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷ ತೈಲ ಬೆಲೆಗಳು ಹಾಗೂ ವ್ಯಾಪಾರದ ಅಡಚಣೆಗಳ ಭೀತಿಯನ್ನು ಮತ್ತೆ ಹುಟ್ಟುಹಾಕಿದೆ. ಇದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಪ್ರಭಾವ ಬೀರಿದ್ದು, ಭಾರತೀಯ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 573 ಅಂಕಗಳ ಕುಸಿತ ದಾಖಲಿಸಿತು.