ಖ್ಯಾತ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿ ಅಂಜನಾ ಓಂ ಕಶ್ಯಪ್ ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿ. ಆಜ್ ತಕ್ ಎಂಬ ಸುದ್ದಿ ವಾಹಿನಿಯಲ್ಲಿದ್ದು, ಅದರ ವ್ಯವಸ್ಥಾಪಕ ಸಂಪಾದಕರೂ ಆಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಈಕೆಗೆ Instagram ಹ್ಯಾಂಡಲ್‌ನಲ್ಲಿ 621K ಅನುಯಾಯಿಗಳಿದ್ದಾರೆ. ಮುಖ್ಯವಾಹಿನಿಯಲ್ಲಿರುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಟಿವಿ ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಗೆ ವಾರ್ಷಿಕ ವೇತನ ಅಂದಾಜು ರೂ. 4 ಕೋಟಿ ಎನ್ನಲಾಗಿದೆ.
2008 ರಲ್ಲಿ ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಭಾರತದ ಕೆಲವೇ ಪತ್ರಕರ್ತರಲ್ಲಿ ಒಬ್ಬರಾಗಿರುವ ರಾಜ್‌ದೀಪ್ ಸರ್ದೇಸಾಯಿ ಅವರು ಪ್ರಸಿದ್ಧ ಪತ್ರಕರ್ತ , ಸುದ್ದಿ ನಿರೂಪಕ. ದೇಶಾದ್ಯಂತ ಲಕ್ಷಾಂತರ ಮಹತ್ವಾಕಾಂಕ್ಷಿ ಪತ್ರಕರ್ತರು ಇವರನ್ನು ಮೆಚ್ಚಿದ್ದಾರೆ. ಪತ್ರಿಕೋದ್ಯಮದಲ್ಲಿ 26ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ರಾಜ್‌ದೀಪ್ ಸರ್ದೇಸಾಯಿ ಭಾರತದ ಅತ್ಯಂತ ಪ್ರಸಿದ್ಧ ಸುದ್ದಿ ನಿರೂಪಕರಲ್ಲಿ ಒಬ್ಬರು. ಪ್ರಸ್ತುತ, ಅವರು ಟಿವಿ ಟುಡೆಯಲ್ಲಿ ಅಂಕಣಕಾರ ಮತ್ತು ಸಲಹಾ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್‌ದೀಪ್ ಸರ್ದೇಸಾಯಿ ಅವರ ನಿವ್ವಳ ಮೌಲ್ಯ 40 ಕೋಟಿ ರೂ. ಎನ್ನಲಾಗಿದೆ.
ಅಪ್ರತಿಮ ಪತ್ರಕರ್ತ ಮತ್ತು ನಿರೂಪಕ, ರಜತ್ ಶರ್ಮಾ ಅವರು ಪ್ರಸಿದ್ಧ ಸುದ್ದಿ ವಾಹಿನಿ, ಇಂಡಿಯಾ ಟಿವಿಯ ಮುಖ್ಯ ಸಂಪಾದಕ ಮತ್ತು ಅಧ್ಯಕ್ಷರಾಗಿದ್ದಾರೆ. ತಮ್ಮ ಐಕಾನಿಕ್ ಶೋ ಆಪ್ ಕಿ ಅದಾಲತ್ ತುಂಬಾ ಹೆಸರು ತಂದು ಕೊಟ್ಟಿತು. ಇದು ಸಾರ್ವಕಾಲಿಕ ಶ್ರೇಷ್ಠ ದೂರದರ್ಶನ ಸಂದರ್ಶನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ರಜತ್ ಶರ್ಮಾ ವಾರ್ಷಿಕ ವೇತನ 5 ಕೋಟಿ ರೂ. ಎನ್ನಲಾಗಿದೆ.
ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿಯಾಗಿ ಪ್ರಸಿದ್ದಿ ಪಡೆದ ಬರ್ಖಾ ದತ್ , ವೃತ್ತಿಜೀವನದಲ್ಲಿ ಅನೇಕ ವಿವಾದಗಳಿಗೂ ತುತ್ತಾದರೂ ಪತ್ರಕರ್ತೆಯಾಗಿ ದಿಟ್ಟ ಹೆಣ್ಣು, ಕಾರ್ಗಿಲ್ ಯುದ್ಧದ 1999 ರ ನಾಯಕ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರನ್ನು ಸಂದರ್ಶನ ಮಾಡಲು ಹೋದಾಗ ಪತ್ರಕರ್ತೆ ತುಂಬಾ ಖ್ಯಾತಿಯನ್ನು ಗಳಿಸಿದರು. ಮಹಿಳಾ ಪತ್ರಕರ್ತರಿಗೂ ಅಂತಹ ಕಷ್ಟಕರವಾದ ಕಥೆಗಳನ್ನು ವರದಿ ಮಾಡುವ ಶಕ್ತಿಯಿದೆ ಎಂದು ತೋರಿಸಿಕೊಟ್ಟಾಕೆ. ಸದ್ಯಕ್ಕೆ, ಅವರು ತಮ್ಮ ಸ್ವಂತ ಉದ್ಯಮವಾದ ಮೋಜೋ ಸ್ಟೋರಿಯನ್ನು ಮುನ್ನಡೆಸುತ್ತಿದ್ದಾರೆ. ಅವರ ವಾರ್ಷಿಕ ಆದಾಯ 5 ಕೋಟಿ ರೂ ಎನ್ನಲಾಗಿದೆ.
ಸುಧೀರ್ ಚೌಧರಿ ಭಾರತದ ಮಾಧ್ಯಮ ಲೋಕದಲ್ಲಿ ಮತ್ತೊಂದು ಹೆಸರು. ಏಕಾಂಗಿಯಾಗಿ ಡಿಎನ್ಎ ಯಲ್ಲಿ ವಿಶ್ಲೇಷಣೆಯ ಸುದ್ದಿ ಮಾಡಿ ಹೆಸರುವಾಸಿಯಾದರು. ಜುಲೈ 2022 ರಲ್ಲಿ, ಅವರು ಝೀ ನ್ಯೂಸ್‌ನೊಂದಿಗಿನ ಅವರ ಸುದೀರ್ಘ ಒಡನಾಟಕ್ಕೆ ವಿದಾಯ ಹೇಳಿದರು. ಬಳಿಕ ಆಜ್ ತಕ್ ಜೊತೆ ಕೈಜೋಡಿಸಿ ಪ್ರೈಮ್-ಟೈಮ್ ಶೋ, ಬ್ಲ್ಯಾಕ್ & ವೈಟ್ ಶೋನ ಪ್ರಮುಖ ವ್ಯಕ್ತಿಯಾದರು. ಸುಧೀರ್ ಚೌಧರಿ ಅವರ ವಾರ್ಷಿಕ ಆದಾಯ 4 ಕೋಟಿ ರೂ.
ಶ್ವೇತಾ ಸಿಂಗ್ ಆಜ್ ತಕ್‌ನಲ್ಲಿ ವಿಶೇಷ ಕಾರ್ಯಕ್ರಮಗಳ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಮಾಧ್ಯಮ ಲೋಕದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಭಾರತದ ಅತ್ಯಂತ ಜನಪ್ರಿಯ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದು, ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳುವುದರಿಂದ ಹಿಡಿದು ರಾಜಕಾರಣಿಗಳಿಂದ ಫಿಲ್ಟರ್ ಮಾಡದ ಪ್ರಶ್ನೆಗಳನ್ನು ಕೇಳುವವರೆಗೆ, ಶ್ವೇತಾ ಸಿಂಗ್ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಆಂಕರ್‌ಗಳಲ್ಲಿ ಒಬ್ಬರು. ಅಂದಾಜು ವರ್ಷಕ್ಕೆ 3 ಕೋಟಿ ರೂ. ವೇತನ ಪಡೆಯುತ್ತಾರೆ.
ಅರ್ನಾಬ್ ಗೋಸ್ವಾಮಿ, ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಅನೇಕರಿಗೆ ಸ್ಫೂರ್ತಿಯಾದ ಪತ್ರಕರ್ತ. ರಿಪಬ್ಲಿಕ್ ಟಿವಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಡಿಟರ್-ಇನ್-ಚೀಫ್, ಅರ್ನಾಬ್ ಗೋಸ್ವಾಮಿ ವಾರ್ಷಿಕ 12 ಕೋಟಿ ರೂ. ವೇತನ ಪಡೆಯುತ್ತಾರೆ.
ಭಾರತದಲ್ಲಿ ಪತ್ರಿಕೋದ್ಯಮವನ್ನು ಹೇಗೆ ಬಳಸಿಕೊಳ್ಳಬೇಕೆಂದು ಚೆನ್ನಾಗಿ ಅರಿತು ಹೆಸರುವಾಸಿಯಾದವರು ರವೀಶ್ ಕುಮಾರ್, ಅತ್ಯಂತ ಮೆಚ್ಚುಗೆ ಪಡೆದ, ಪ್ರೀತಿಸಿದ, ವೀಕ್ಷಿಸಿದ ಮತ್ತು ವಿಶ್ವಾಸಾರ್ಹತೆ ಪಡೆದ ಪತ್ರಕರ್ತರಲ್ಲಿ ಒಬ್ಬರಾದ ರವೀಶ್ ಕುಮಾರ್ ಮಾಜಿ NDTV ಸುದ್ದಿ ನಿರೂಪಕ. 2019 ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದುಕೊಂಡರು. ಸದ್ಯಕ್ಕೆ, ರವೀಶ್ ಕುಮಾರ್ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ ಮತ್ತು ಅವರ ವಾರ್ಷಿಕ ಆದಾಯ 3 ಕೋಟಿ ರೂ ಎನ್ನಲಾಗಿದೆ.