ದಶಕದ ನೆನಪು- ಕಾಯಿನ್ ಬೂತ್ ಸಂಪೂರ್ಣ ಮಾಯ: ನೋಟುಗಳ ಗಾತ್ರ ಚಿಕ್ಕ!

First Published Jan 1, 2020, 10:45 AM IST

ದಶಕದ ನೆನಪು... ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ 2020 ಬಂದೇ ಬಿಟ್ಟಿದೆ. 2019ಕ್ಕೆ ಗುಡ್‌ಬೈ ಹೇಳಿ, ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಿದ್ದೇವೆ. ಆದರೆ ಇದು ಬರಿಯ ಹೊಸ ವರ್ಷದ ಆರಂಭವಲ್ಲ. ದಶದಶಮಾನಗಳಿಂದ ನಿರೀಕ್ಷಿಸುತ್ತಿದ್ದ ದಶಕದ ಶುರುವಾತು. 2010 ರಿಂದ 2020 ತಲುಪುವಷ್ಟರಲ್ಲಿ ಹಲವಾರು ವಿಚಾರಗಳು ಬಂದು ಮರೆಯಾಗಿವೆ. ಕಾಯಿನ್ ಫೋನ್‌ಗಳು ಮಾಯವಾಗಿವೆ. ಬಸ್‌ಗಳು ಹೊಸ ರೂಪ ಪಡೆದಿವೆ. ಕೀ ಪ್ಯಾಡ್ ಮೊಬೈಲ್‌ಗಳು ಕಾಣುವುದೇ ಅಪರೂಪ. ನೋಟುಗಳ ಸೈಜೂ ಬದಲಾಗಿದೆ. ಹಾಗಾದ್ರೆ 2010ರ ಆರಂಭದಲ್ಲಿ ಹೇಗಿತ್ತು? ಈಗ ಹೇಗಾಗಿದೆ? ಇಲ್ಲಿದೆ ಚಿತ್ರ ನೋಟ

ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.
undefined
ವಿಮಾನ ಹತ್ತಲು ಬೆಂಗ್ಳೂರಿಗೇ ಬರಬೇಕಿಲ್ಲ: ಬೆಂಗಳೂರು, ಮಂಗಳೂರಿಗೆ ಮಾತ್ರ ಸಾಕಷ್ಟು ವಿಮಾನ ಸೌಕರ್ಯ ಇತ್ತು. ಆದರೆ ಈಗ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿಯಲ್ಲೂ ವಿಮಾನಗಳು ಹಾರಾಡುತ್ತಿವೆ. ಶೀಘ್ರದಲ್ಲೇ ಬೀದರ್‌ನಲ್ಲೂ ಸಂಚಾರ ಶುರುವಾಗಲಿದೆ.
undefined
ಕೀಪ್ಯಾಡ್ ಮೊಬೈಲ್ ಈಗ ಇಲ್ಲ: ದಶಕದ ಹಿಂದೆ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿರಲಿಲ್ಲ. ಕೀ ಪ್ಯಾಡ್ ಫೋನ್ ಎಲ್ಲರ ಕೈಯಲ್ಲಿದ್ದವು. ನಿಧಾನವಾಗಿ ಕ್ವರ್ಟಿ ಕೀಬೋ ರ್ಡ್ ಫೋನ್ ಬಂದವು. ತದನಂತರ ಸ್ಮಾರ್ಟ್‌ಫೋನ್ ಹವಾ ಆರಂಭವಾಯಿತು. ಈಗ ಸ್ಮಾರ್ಟ್‌ಫೋನ್ ಇಲ್ಲದ ಜನರೇ ಕಾಣದಂತಾಗಿದೆ.
undefined
ಜಾಗತಿಕ ಕಂಪನಿಗಳಿಗೆ ಭಾರತೀಯ ಬಾಸ್‌ಗಳು: ಉದ್ಯೋಗ ಅರಸಿ ವಿದೇಶಕ್ಕೆ ಹೋಗುತ್ತಿದ್ದ ಭಾರತೀಯರು ಅಲ್ಲಿನ ಕಂಪನಿಗಳಿಗೇ ಬಾಸ್ ಆದರು. ಮೈಕ್ರೋಸಾಫ್ಟ್‌ಗೆ ಸತ್ಯ ನಾದೆಳ್ಲ, ಗೂಗಲ್‌ಗೆ ಸುಂದರ್ ಪಿಚೈ ಸಿಇಒ ಆದರು. ಸುಂದರ್ ಇನ್ನೂ ಅತ್ಯುನ್ನತ ಸ್ಥಾನಕ್ಕೇರಿದರು
undefined
ಕ್ರಿಪ್ಟೋ ಎಂಬ ಡಿಜಿಟಲ್ ಕರೆನ್ಸಿ: ಕರೆನ್ಸಿ ಎಂದರೆ ನಗದು ಎಂದು ಭಾವಿಸಿದ್ದ ಕಾಲ ಹೋಯಿತು. ಡಿಜಿ ಟಲ್ ಕರೆನ್ಸಿ ಯುಗ ಪ್ರಾರಂಭವಾಗಿದೆ. ಬಿಟ್‌ಕಾಯಿನ್ ಜನಪ್ರಿಯ ವಾಗಿದೆ. ಅದೇ ರೀತಿಯ ಡಿಜಿಟಲ್ ಕರೆನ್ಸಿಯನ್ನು ಫೇಸ್‌ಬುಕ್ ಬಿಡು ಗಡೆ ಮಾಡಿದೆ. ರಿಸರ್ವ್ ಬ್ಯಾಂಕ್ ಕೂಡ ಸಿದ್ಧತೆಯಲ್ಲಿ ತೊಡಗಿದೆ.
undefined
ದಾರಿ ತೋರಿಸಲು ಗೂಗಲ್ ಮ್ಯಾಪ್ ಗುರು: ಗೊತ್ತಿಲ್ಲದ ಊರಿಗೆ, ಸ್ಥಳಕ್ಕೆ ಪ್ರಯಾಣಿಸುವಾಗ ಹಾದಿಬೀದಿಯಲ್ಲಿ ಸಿಕ್ಕವರ ಮಾರ್ಗದರ್ಶನ ಪಡೆಯುವ ಅಗತ್ಯ ಈಗಿಲ್ಲ. ಆ ಕೆಲಸ ಮಾಡಲಿಕ್ಕೆ ಗೂಗಲ್ ಮ್ಯಾಪ್ ಇದೆ. ಅಪರಿಚಿತ ಊರು, ಪ್ರದೇಶದಲ್ಲೂ ಸರ್ವ ಮಾಹಿತಿ ನೀಡಿ ದಾರಿ ತೋರಿಸುವ ಗುರು ಇದಾಗಿದೆ.
undefined
ರಾಜಕೀಯ ಸ್ಥಿತ್ಯಂತರ: ಎನ್‌ಡಿಎ ದರ್ಬಾರ್: ದಶಕದ ಹಿಂದೆ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಇತ್ತು. ಆದರೆ ಈಗ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪ್ರಬಲವಾಗಿದೆ. ಕಾಂಗ್ರೆಸ್ ದುರ್ಬಲವಾಗಿದೆ. ಚೇತರಿಸಿಕೊಳ್ಳಲು ಯತ್ನಿಸುತ್ತಿದೆ.
undefined
ಮನರಂಜನೆಗೆ ಟೀವಿಯೇ ಬೇಕಿಲ್ಲ: ಮನರಂಜನೆಗಾಗಿ ಸಿನಿಮಾಗೆ ಹೋಗುವ, ಟೀವಿ ಮುಂದೆ ಕೂರುವ ಅನಿವಾರ್ಯತೆ ಈಗಿಲ್ಲ. ಯುಟ್ಯೂಬ್ ಇದೆ, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ವೆಬ್‌ಸೀರೀಸ್, ವಿವಿಧ ಆ್ಯಪ್ ಬಂದಿವೆ. ಜತೆಗೆ ಫೇಸ್‌ಬುಕ್‌ನಲ್ಲೂ ಬೇಸರ ತಣಿಸುವ ಎಲ್ಲ ಬಗೆಯ ಚುಟುಕು ವಿಡಿಯೋಗಳು ಸಿಗುತ್ತಿವೆ.
undefined
ಎಲ್ಲೆಲ್ಲೂ ಗಡ್ಡಪ್ಪಗಳೇ..!: ಮದುವೆ ವೇಳೆ ವರ ನೀಟಾಗಿ ಶೇವ್ ಮಾಡಿರಬೇಕು ಎಂಬ ಅಲಿಖಿತ ಸಂಪ್ರದಾಯ ವೊಂದಿತ್ತು. ಆದರೆ ಈಗ ಗಡ್ಡ ಬಿಟ್ಟ ವರರ ಸಂಖ್ಯೆ ಹೆಚ್ಚಾಗಿದೆ. ಕ್ರಿಕೆಟ್, ಸಿನಿಮಾ, ಉದ್ಯಮ ಸೇರಿ ಎಲ್ಲೆಡೆ ಗಡ್ಡ ಬಿಟ್ಟವರು ಕಾಣಸಿಗುತ್ತಾರೆ.
undefined
ಮಿಸ್ಡ್ ಕಾಲ್ ‘ಹಾವಳಿ’ ಮಾಯ: ದಶಕದ ಹಿಂದೆ ಮಿಸ್ಡ್ ಕಾಲ್ ‘ಹಾವಳಿ’ ಇತ್ತು. ಫೋನ್ ಕರೆ ಮಾಡಿದರೆ ಶುಲ್ಕ ಬೀಳುತ್ತೆ ಎಂದು ಮಿಸ್ಡ್ ಕಾಲ್ ನೀಡುವ ಸಾಕಷ್ಟು ಜನರಿದ್ದರು. ಫೋನ್ ಕರೆ ಉಚಿತವಾಗಿದ್ದರಿಂದ ಈ ದಶಕದಲ್ಲಿ ಆ ಸಮಸ್ಯೆ ನಿವಾರಣೆಯಾಯಿತು. ಇಂಟರ್ನೆಟ್ ಕೂಡ ಅಗ್ಗವಾದ್ದರಿಂದ ಬಹುತೇಕ ಜನ ಆನ್‌ಲೈನ್ ಆದರು.
undefined
ಹೊಸ ಕಾರುಗಳು ಪ್ರವೇಶ: ವಿಶ್ವದ ಅಗ್ಗದ ಕಾರು ಎಂಬ ಹಿರಿಮೆಯೊಂದಿಗೆ 1 ಲಕ್ಷ ರು. ನ ಟಾಟಾ ನ್ಯಾನೋ ಬಿಡುಗಡೆಯಾಯಿತು. ಸ್ಯಾಂಟ್ರೋ ಮತ್ತೆ ಬಂತು. ಮಾರುತಿ, ಹ್ಯುಂಡೈ, ಮಹೀಂದ್ರಾ, ಟಾಟಾ ಕಂಪನಿಯ ಹೊಸ ಮಾಡೆಲ್ ಬಂದವು. ರೆನಾಲ್ಡ್ ಡಸ್ಟರ್, ಕ್ವಿಡ್ ಪರಿಚಯವಾದವು. ಕಿಯಾ, ಎಂಜಿ ಹೆಕ್ಟರ್ ಭಾರತ ಮಾರುಕಟ್ಟೆಗೆ ಬಂದವು.
undefined
ಮನೆಗಳಲ್ಲಿ ಎಲ್‌ಇಡಿ, ಸ್ಮಾರ್ಟ್ ಟೀವಿ: ಸಿಆರ್‌ಟಿ ಟೀವಿಗಳು ಬಹುತೇಕ ಮನೆಯಿಂದ ಮಾಯವಾಗಿವೆ. ಎಲ್‌ಇಡಿ ಟೀವಿ ವೀಕ್ಷಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಮಾರ್ಟ್ ಟೀವಿ ಬಳಕೆ ಅಧಿಕವಾಗಿದೆ. ಚೀನಾ ಕಂಪನಿಗಳ ಪ್ರವೇಶ ಬಳಿಕ ಟೀವಿ ಬೆಲೆಯೂ ಅಗ್ಗವಾಗಿದೆ.
undefined
ಸಿಎಫ್‌ಎಲ್ ಹೋಗಿ ಎಲ್‌ಇಡಿ ಬಲ್ಬ್ ಬಂತು: ಇನ್‌ಕ್ಯಾಂಡಿಸೆಂಟ್ ಬಲ್ಬ್, ಟ್ಯೂಬ್‌ಲೈಟ್‌ಗಳನ್ನು ಮನೆಯಲ್ಲಿ ಬಳಸುತ್ತಿದ್ದ ಜನರು ವಿದ್ಯುತ್ ಶುಲ್ಕ ಕಡಿಮೆಯಾಗುತ್ತೆಂದು ದುಬಾರಿ ಬೆಲೆಯ ಸಿಎಫ್‌ಎಲ್ ಖರೀದಿಸಲಾರಂಭಿಸಿದರು. ಅದಕ್ಕಿಂತ ಕಡಿಮೆ ವಿದ್ಯುತ್ ಬಳಸುವ ಎಲ್‌ಇಡಿ ಬಲ್ಬ್ ಬಂದ ಬಳಿಕ ಸಿಎಫ್‌ಎಲ್ ನಾಮಾವಶೇಷವಾದವು.
undefined
ಕಾಯಿನ್ ಬೂತ್ ಸಂಪೂರ್ಣ ಮಾಯ: ಅಂಗಡಿಗಳ ಮುಂದೆ ನೇತು ಹಾಕಿದ್ದ ಹಳದಿ ಬಾಕ್ಸ್‌ಗೆ ೧ ರು. ನಾಣ್ಯ ಹಾಕಿ ಫೋನ್ ಕರೆ ಮಾಡುವ ವ್ಯವಸ್ಥೆ ಇತ್ತು. ಈಗ ಅದು ಮಾಯವಾಗಿದೆ. ಮೊಬೈಲ್ ಕರೆ ದರ ಅಗ್ಗವಾಗುತ್ತಿದ್ದಂತೆ ಕಾಯಿನ್ ಬೂತ್ ಸಂಖ್ಯೆ ವಿರಳವಾಯಿತು. ರಿಲಯನ್ಸ್ ಜಿಯೋ ಬಂದ ಬಳಿಕ ನಾಪತ್ತೆಯಾಯಿತು.
undefined
ಆ್ಯಂಡ್ರಾಯ್ಡ್ ಅಪ್‌ಡೇಟ್ ಆಗಿದೆಯಾ?: ಸ್ಮಾರ್ಟ್‌ಫೋನ್ ಬಳಸುವ ಬಹುತೇಕ ಮಂದಿ ಭಾರತ ದಲ್ಲಿ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಅನ್ನೇ ಬಳಸು ತ್ತಿದ್ದಾರೆ. ಇದು ಗೂಗಲ್ ಕಂಪನಿಯ ಕೊಡುಗೆ. ಇಂಗ್ಲಿ ಷ್ ವರ್ಣಮಾಲೆಯ ಪ್ರಕಾರ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಹೊಸ ಅಪ್‌ಡೇಟ್‌ಗೆ ಜನರ ಕುತೂಹಲ ಸಾಕಷ್ಟಿದೆ.
undefined
ದಾಳಿಗೆ, ಡೆಲಿವರಿಗೆ ಬಂದಿವೆ ಡ್ರೋನ್: ಮಾನವರಹಿತ ಪುಟ್ಟ ವೈಮಾನಿಕ ನೌಕೆ (ಡ್ರೋನ್) ಜನಪ್ರಿಯವಾದ ದಶಕ ಇದು. ಎದುರಾಳಿ ದೇಶಗಳ ಮೇಲೆ ದಾಳಿಯಿಂದ ಹಿಡಿದು ಮನೆ ಬಾಗಿಲಿಗೆ ಯಾವುದೇ ವಸ್ತು ಡೆಲಿವರಿಯಿಂದ ಫೋಟೋ ಶೂಟ್ ವರೆಗೆ ಡ್ರೋನ್ ಜಾದೂ ಮಾಡುತ್ತಿದೆ.
undefined
ಸಿಟಿ ಬಸ್‌ಗಳಿಗೆ ಹೊಸ ಬಣ್ಣ, ರೂಪ: ಬೆಂಗಳೂರಿನಲ್ಲಿ ಓಡಾಡುವ ಸಿಟಿ ಬಸ್‌ಗಳು ನೀಲಿ, ಬಿಳಿ ಬಣ್ಣ ಹೊಂದಿರುತ್ತಿ ದ್ದವು. ಆದರೆ ಈಗ ಹಸಿರು, ಕಿತ್ತಳೆ ಬಣ್ಣದ ಬಸ್‌ಗಳೂ ಬಂದಿವೆ. ವಿನ್ಯಾಸವೂ ಬದಲಾಗಿದೆ. 2ನೇ ಹಂತದ ನಗರಕ್ಕೂ ಬಣ್ಣಬಣ್ಣದ ಸಿಟಿ ಬಸ್ ಪ್ರವೇಶಿಸಿವೆ.
undefined
ಮದುವೆಗೆ ಪ್ರಿವೆಡ್ಡಿಂಗ್ ವಿಡಿಯೋ: ನಿಶ್ಚಿತಾರ್ಥ, ಮುಹೂರ್ತ, ಆರತಕ್ಷತೆ, ಬೀಗರೂಟ ಬಳಿಕ ಮದುವೆ ಮುಗಿದು ಹೋಗುತ್ತಿತ್ತು. ಮದುವೆಗೆ ಮುನ್ನ ಪ್ರಿವೆಡ್ಡಿಂಗ್ ಫೋಟೋ ಶೂಟ್ ಶುರುವಾಯಿತು. ಈಗ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಜಮಾನಾ ಬಂದಿದೆ.
undefined
ನೋಟುಗಳ ಗಾತ್ರ ಚಿಕ್ಕದಾಯಿತು: 10, 20, 50, 100, 500 ರು. ಮುಖಬೆಲೆಯ ಹೊಸ ನೋಟುಗಳು ಬಂದಿವೆ. ವಿನ್ಯಾಸ ಬದಲಾಗಿದೆ. ಗಾತ್ರ ಚಿಕ್ಕದಾಗಿದೆ. 200, 2000 ರು. ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದಿವೆ. 1000 ರು. ಮುಖಬೆಲೆಯ ನೋಟುಗಳು ಇತಿಹಾಸ ಪುಟ ಸೇರಿವೆ.
undefined
ಎಲ್ಲದಕ್ಕೂ ಬೇಕು ಆಧಾರ್: ದಶಕದ ಹಿಂದೆ ಚಾಲನೆ ಪಡೆದ ಆಧಾರ್ ಈಗ 125 ಕೋಟಿ ಭಾರತೀಯರ ಬಳಿ ಇದೆ. ವಿವಿಧ ಸೇವೆಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿದೆ. ಗುರುತು ಸಾಬೀತು ಆಧಾರ್‌ನಿಂದ ಸುಲಭವೂ ಆಗಿದೆ.
undefined
ವಿಮಾನ ಪ್ರಯಾಣ ಶ್ರೀಮಂತರಿಗಷ್ಟೇ ಅಲ್ಲ: ಶ್ರೀಮಂತರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸುತ್ತಾರೆ ಎಂಬ ನಂಬಿಕೆ ಸುಳ್ಳಾಗಿದೆ. ಹವಾಯಿ ಚಪ್ಪಲಿ ಹಾಕುವವರೂ ವಿಮಾನ ಹತ್ತುವಂತೆ ಮಾಡಲು ಸರ್ಕಾರ ಉಡಾನ್ ಯೋಜನೆ ತಂದಿದೆ. 2500 ರು. ಒಳಗೂ ವಿಮಾನ ಟಿಕೆಟ್‌ಗಳು ಸಿಗುತ್ತಿವೆ. ಮುಂಗಡವಾಗಿ ಕಾದಿರಿಸಿದರೆ 1500 ರು.ಗೆಲ್ಲಾ ಟಿಕೆಟ್ ಲಭಿಸುತ್ತಿದೆ.
undefined
ಬಳ್ಳಾರಿಯಲ್ಲಿ ಗಣಿ ಅಬ್ಬರ ಈಗ ಇಲ್ಲ: ಅಕ್ರಮ ಗಣಿಗಾರಿಕೆಯಿಂದ ನಲುಗಿದ್ದ ಬಳ್ಳಾರಿಯ ಚಿತ್ರಣ ಭಾರಿ ಬದಲಾ ವಣೆ ಕಂಡಿದೆ. ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಅದಿರು ಲಾರಿಗಳ ಅಬ್ಬರ ಕಡಿಮೆಯಾಗಿದೆ. ಗಣಿಗಾರಿಕೆಗೆ ಸುಪ್ರೀಂಕೋರ್ಟ್ ಅಂಕುಶ ಬಿದ್ದಿದೆ.
undefined
ಭೀಕರ ಮಳೆ, ಬರ, ನೆರೆ: ಈ ದಶಕ ಭೀಕರ ಬರಗಾಲ, ಶತಮಾನದ ದಾಖಲೆ ಮಳೆ ಹಾಗೂ ಪ್ರವಾಹಕ್ಕೆ ಸಾಕ್ಷಿಯಾಯಿತು. ಬರಗಾಲದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾಗಲೇ ರಾಜ್ಯದ ವಿವಿಧೆಡೆ ಜಲಪ್ರಳಯವಾಯಿತು. 2019ರಲ್ಲಿ ಮಳೆಗಾಲ ಮುಗಿದ ಬಳಿಕವೂ ಮಳೆಯಾಗಿ ಪ್ರವಾಹ ಸೃಷ್ಟಿಯಾಗಿ ಅಪಾರ ಹಾನಿಯಾಯಿತು.
undefined
ದೇಶದಲ್ಲಿ ಈಗ ಐದೇ ಮೊಬೈಲ್ ಕಂಪನಿ: ದಶಕದ ಹಿಂದೆ ಮೊಬೈಲ್ ಸೇವೆ ಒದಗಿಸಲು ರಿಲಯನ್ಸ್, ಎಂಟಿಎಸ್, ಯುನಿನಾರ್, ಟಾಟಾ ಡೊಕೊಮೊ ಸೇರಿ ಹಲವು ಕಂಪನಿಗಳು ಇದ್ದವು. ಈಗ ಏರ್‌ಟೆಲ್, ವೊಡಾಫೋನ್- ಐಡಿಯಾ, ಬಿಎಸ್‌ಎನ್‌ಎಲ್ ಮಾತ್ರವೇ ಉಳಿದಿವೆ. ರಿಲಯನ್ಸ್ ಜಿಯೋ ಹೊಸದಾಗಿ ಸೇರ್ಪಡೆಯಾಗಿದೆ.
undefined
ಮಾಲ್‌ಗಳಲ್ಲಿ ಸಿನಿಮಾ ವೀಕ್ಷಣೆ ಕ್ರೇಜ್: ಮೊದಲೆಲ್ಲಾ ಸಿನಿಮಾ ನೋಡಲು ಚಿತ್ರಮಂದಿರಗಳ ಮುಂದೆ ಟಿಕೆಟ್‌ಗಾಗಿ ಕಾಯುತ್ತಾ ನಿಲ್ಲಬೇಕಿತ್ತು. ಆದರೆ ಈಗ ಶಾಪಿಂಗ್ ಮಾಲ್‌ಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಲನಚಿತ್ರ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಆನ್ ಲೈನ್‌ನಲ್ಲೇ ಟಿಕೆಟ್ ಕಾದಿರಿಸಬಹುದಾಗಿದೆ.
undefined
ಟೆಲಿಗ್ರಾಂ ಹೋಯ್ತು, ಟೆಲಿಗ್ರಾಂ ಆ್ಯಪ್ ಬಂತು: ತುರ್ತು ಸಂದೇಶ ರವಾನಿಸಲು 163 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಅಂಚೆ ಇಲಾಖೆಯ ಟೆಲಿಗ್ರಾಂ ಸೇವೆ 2013ರಲ್ಲಿ ಸ್ಥಗಿತವಾಯಿತು. ಇದೇ ವೇಳೆ ಸಂದೇಶ, ಫೋಟೋ, ವಿಡಿಯೋ ಕಳುಹಿಸಲು ಟೆಲಿಗ್ರಾಂ ಎಂಬ ಆ್ಯಪ್ ಬಿಡುಗಡೆಯಾಗಿ ಜನಪ್ರಿಯವಾಯಿತು.
undefined
ಸಿನಿಮಾ ಯಶಸ್ಸು ಅಳೆಯಲು ₹100 ಕೋಟಿ ಕ್ಲಬ್: ಬಾಲಿವುಡ್ ಸಿನಿಮಾಗಳನ್ನು ಅಳೆಯಲು 100 ಕೋಟಿ ರು. ಕ್ಲಬ್ ಎಂಬ ವ್ಯಾಖ್ಯಾನ ಬಳಸಲಾಯಿತು. ಅದನ್ನು ಕೆಲವು ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಧಿಸಿಬಿಟ್ಟವು. ಕನ್ನಡ ಸಿನಿಮಾಗಳು 100 ದಿನ ಓಡುವುದು ಅಪರೂಪವಾಯಿತು. 25 ದಿನಕ್ಕೇ ಸಕ್ಸಸ್ ಪಾರ್ಟಿ ಆಯೋಜನೆ ಸಂಪ್ರದಾಯ ಶುರುವಾಯಿತು.
undefined
ಕ್ಯಾಶ್ ಇಲ್ವಾ? ಗೂಗಲ್ ಪೇ, ಪೇಟಿಎಂ ಸಾಕು: ಏನನ್ನಾದರೂ ಖರೀದಿಸಿದರೆ ಹಣ ಪಾವತಿಸಲು ಚಿಲ್ಲರೆಗೆ ಪರದಾಡಬೇಕಾಗಿತ್ತು. ಆದರೆ ಈಗ ಜೇಬಿನಲ್ಲಿ ಹಣ ಇಲ್ಲದಿದ್ದರೂ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮೂಲಕ ಪಾವತಿಸುವ ಯುಪಿಐ ವ್ಯವಸ್ಥೆ ಜನಪ್ರಿಯವಾಗಿದೆ.
undefined
click me!