India@75 ಪ್ರತಿಷ್ಠಿತ ಕೇರಳ ಕಲಾಮಂಡಲಂ ತಲುಪಿದ ವಜ್ರ ಜಯಂತಿ ಯಾತ್ರೆ!

First Published Jun 21, 2022, 5:59 PM IST
  • 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ವಜ್ರ ಜಯಂತಿ ಯಾತ್ರೆ
  • ಏಷ್ಯಾನೆಟ್, ಎನ್‌ಸಿಸಿ ಜಂಟಿಯಾಗಿ ಆಯೋಜಿಸುವ ಯಾತ್ರೆ
  • ಯಾತ್ರೆಗೆ ಕೈ ಜೋಡಿಸಿದ ಕೇರಳದ ಕಲಾಮಂಡಲಂ 

ಭಾರತ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಕೇಂದ್ರ ಸರ್ಕಾರದ ಅಜಾದಿ ಕಾ ಅಮೃತಮಹೋತ್ಸವದಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಏಷ್ಯಾನೆಟ್ ನ್ಯೂಸ್ ಹಾಗೂ ಎನ್‌ಸಿಸಿ ಕೆಡೆಟ್ ಜಂಟಿಯಾಗಿ ವಜ್ರ ಜಯಂತಿ ಯಾತ್ರೆಗೆ ಚಾಲನೆ ನೀಡಲಾಗಿದೆ. ಇದೀಗ ಈ ಯಾತ್ರೆ ಪ್ರತಿಷ್ಠಿತ ಕೇರಳ ಕಲಾಮಂಡಲಂ ತಲುಪಿದೆ.

ಕಲೆ ಸಾಂಸ್ಕೃತಿ ವಿಶ್ವವಿದ್ಯಾಲಯ ವಾಗಿರುವ ಕೇರಳ ಕಲಾಮಂಡಲಂ ತ್ರಿಶೂರ್ ಜಿಲ್ಲೆಯಲ್ಲಿದೆ. ಈ ವಿಶ್ವಿವಿದ್ಯಾಲಯ ತಲುಪಿದ ವಜ್ರ ಜಯಂತಿ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಲಾಮಂಡಲಂ ವಿಶ್ವವಿದ್ಯಾಲಯದ ಕಲಾವಿಧರು ವಜ್ರ ಜಯಂತಿ ಯಾತ್ರೆಯನ್ನು ಕಲಾ ಪ್ರದರ್ಶನ ನೀಡುವ ಮೂಲಕ ಸ್ವಾಗತಿಸಿದ್ದಾರೆ.

ಭಾರತದ ಐತಿಹಾಸಿಕ ತಾಣ, ಭಾರತದ ಕಲೆ, ಸಂಸ್ಕತಿ, ಪರಂಪರೆ, ಸ್ವಾತಂತ್ರ್ಯ ಸಂಗ್ರಾಮದ ತಾಣಗಳು, ಇತಿಹಾಸ ಸ್ಥಳಗಳ ಕುರಿತು ಬೆಳಕು ಚೆಲ್ಲುವ ಹಾಗೂ ದೇಶದ ಕುರಿತು ಕುರಿತು ಹೆಮ್ಮೆ ಪಡುವಂತೆ ಮಾಡುವುದೇ ಏಷ್ಯಾನೆಟ್ ನ್ಯೂಸ್ ಆಯೋಜಿಸಿರುವ ವಜ್ರ ಜಯಂತಿ ಯಾತ್ರೆಯ ಮುಖ್ಯ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ವಜ್ರ ಜಯಂತಿ ಯಾತ್ರೆ ಭಾರತೀಯ ಪ್ರದರ್ಶನ ಕಲೆಗಳನ್ನು ಕಲಿಸುವ ಅತೀ ದೊಡ್ಡ ವಿಶ್ವವಿದ್ಯಾಲಯ ಕೇರಳ ಕಲಾಮಂಡಲಂ ತಲುಪಿದೆ. ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಛ್ಯ, ಕಥಕ್ಕಳಿ, ಮೋಹಿನಿಯಾಟ್ಟಂ, ಕುಡಿಯಾಟ್ಟಂ, ತುಳ್ಳಲ್, ಕೂಚಿಪುಡಿ ನಂಗಿಯಾರ್ ಕೂತು ಸೇರಿದಂತೆ ಹಲವು ರಂಗಭೂಮಿ ಪ್ರಕಾರಗಳ ತರಬೇತಿ ನೀಡುತ್ತದೆ.

ಈ ವಿಶ್ವವಿದ್ಯಾಲಯದಲ್ಲಿ ಪಂಚವಾದ್ಯಂ ಎಂಬ ಸಾಂಪ್ರದಾಯಿಕ ಆರ್ಕೆಸ್ಟ್ರಾ ತರಬೇತಿಯನ್ನು ನೀಡುತ್ತಿದೆ. ಚೆಂಡ, ಮದ್ದಳೆ, ಮಿಜಾವು ಮುಂತಾದ ವಿವಿಧ ತಾಳವಾದ್ಯಗಳಲ್ಲಿಯೂ ತರಬೇತಿ ನೀಡಲಾಗುತ್ತದೆ. ಈ ವಿಶ್ವವಿದ್ಯಾಲಯ ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆ ಎಂದು ಗುರುತಿಸಿಕೊಂಡಿದೆ.

ಕೇರಳ ಕಲಾಮಂಡಲಂಗೆ ತೆರಳವು ನಡುವೆ ವಜ್ರ ಜಯಂತಿ ಯಾತ್ರೆ ತ್ರಿಶೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಯೋಗ ದಿನಚಾರಣೆ ಆಚರಿಸಿತು.

ವಜ್ರ ಜಯಂತಿ ಯಾತ್ರೆ ಸಾಗುವ ದಾರಿಯುದ್ದಕ್ಕೂ ಎನ್‌ಸಿಸಿ ಕೆಡೆಡ್‌ಗಳ ಪಥ ಸಂಚಲನ ಎಲ್ಲರ ಗಮನಸೆಳೆದಿತ್ತು. ಶಿಸ್ತಿನ ಸಿಪಾಯಿಗಳಂತೆ ಸಾಗಿದ ವಜ್ರ ಜಯಂತಿ ಯಾತ್ರೆಗೆ ಸಾರ್ವಜನಿಕರೂ ಉತ್ಸಾಹ ತುಂಬಿದರು.

ಇದೇ ವೇಳೆ ವಜ್ರ ಜಯಂತಿ ಯಾತ್ರೆ ಕೇರಳದ ವಿಕಲಚೇತನ ಸಾಮಾಜಿಕ ಕಾರ್ಯತರ್ತೆ ಕೆವಿ ರಬಿಯಾ ಭೇಟಿಯಾಗಿ ಮಾತುಕತೆ ನಡೆಸಿತು. ಮಹತ್ತರ ಉದ್ದೇಶವನ್ನಿಟ್ಟುಕೊಂಡು ಸಾಗುತ್ತಿರುವ ವಜ್ರ ಜಯಂತಿ ಯಾತ್ರೆಗೆ ಕೆವಿ ರಬಿಯಾ ಶುಭಕೋರಿದರು.

click me!