ಕಣ್ಣುಗಳಲ್ಲಿ ಈ ಬದಲಾವಣೆ ಕಂಡ್ರೆ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ

Published : Aug 25, 2022, 04:41 PM IST

ಕೆಂಪು ರಕ್ತ ಕಣಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ಶ್ವಾಸಕೋಶದಿಂದ ಇಡೀ ದೇಹಕ್ಕೆ ಆಮ್ಲಜನಕವನ್ನು ಸಾಗಿಸುವ ಕೆಲಸ ಮಾಡುವುದಲ್ಲದೆ, ಉಸಿರನ್ನು ಹೊರ ಹಾಕಲು ನಿಮ್ಮ ಶ್ವಾಸಕೋಶಗಳಿಗೆ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತೆ. RBCಗಳ ಉತ್ಪಾದನೆಗಾಗಿ ನಮ್ಮ ದೇಹವು, ದೇಹದಲ್ಲಿ ಆರೋಗ್ಯಕರ ಕಬ್ಬಿಣದ ಮಟ್ಟವನ್ನು ಅವಲಂಬಿಸಿದೆ. ದೇಹಕ್ಕೆ ಉತ್ತಮ ಕಬ್ಬಿಣ ಅಂಶವನ್ನು ನೀಡಲು ಉತ್ತಮ ಆಹಾರ ಸೇವನೆ ಮಾಡಬೇಕು. ಒಂದು ವೇಳೆ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದರೆ ಏನೆಲ್ಲಾ ಲಕ್ಷಣಗಳು ಕಂಡು ಬರುತ್ತವೆ ನೋಡೋಣ.

PREV
19
ಕಣ್ಣುಗಳಲ್ಲಿ ಈ ಬದಲಾವಣೆ ಕಂಡ್ರೆ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ

ಕಬ್ಬಿಣ (Iron) ಅಂಶದ ಕೊರತೆಯು ಆಯಾಸ ಮತ್ತು ಉಸಿರಾಟದ ತೊಂದರೆ ಸೇರಿದಂತೆ ವಿವಿಧ ರೋಗ ಲಕ್ಷಣಗಳಿಗೆ ಕಾರಣವಾಗುತ್ತೆ. ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ನಮ್ಮ ದೇಹವು ರಕ್ತ ಕಣಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಇದು ಸಂಭವಿಸುತ್ತೆ. ಅಲ್ಲದೆ, ಕಬ್ಬಿಣದ ಕೊರತೆಯು ರಕ್ತಹೀನತೆಯಂತಹ ಗಂಭೀರ ಸ್ಥಿತಿಯೊಂದಿಗೆ ಸಂಬಂಧಿಸಿದೆ.
 

29
ಕಬ್ಬಿಣದ ಕೊರತೆಯಿಂದ ಕಣ್ಣುಗಳಿಗೆ(Eye) ಹಾನಿ

ಕಬ್ಬಿಣದ ಕೊರತೆಯು ದೇಹದಲ್ಲಿ ಕೆಂಪು ರಕ್ತ ಕಣಗಳ ಆರೋಗ್ಯಕರ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತೆ, ಇದು ದೇಹದ ಅನೇಕ ಕಾರ್ಯಗಳಿಗೆ ಅಡ್ಡಿಪಡಿಸುತ್ತೆ. ಕಬ್ಬಿಣದ ಕೊರತೆಯು ನಿಮ್ಮ ಕಣ್ಣುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. 

39

ಈ ಸಮಸ್ಯೆಯು ರಕ್ತವು ಕಣ್ಣಿನ ಅಂಗಾಂಶಕ್ಕೆ ಸಾಕಷ್ಟು ಆಮ್ಲಜನಕ ತಲುಪಿಸೋದನ್ನು ತಡೆಯುತ್ತೆ ಎನ್ನುತ್ತಾರೆ ತಜ್ಞರು, ಅಲ್ಲದೇ ಕಣ್ಣು ಹಳದಿಯಾಗಲು ಇದು ಕಾರಣವಾಗುತ್ತೆ. ಇದಕ್ಕಾಗಿಯೇ ವೈದ್ಯರು ಕಬ್ಬಿಣದ ಕೊರತೆಯ ರೋಗ ಲಕ್ಷಣಗಳನ್ನು ಹುಡುಕುತ್ತಾ ತಮ್ಮ ರೋಗಿಗಳಲ್ಲಿ ಕಣ್ಣು ಹಳದಿಯಾಗೋದನ್ನು(Yellow) ಕಂಡುಕೊಳ್ಳುತ್ತಾರೆ.

49
ಐರನ್ ಕೊರತೆ ಉಂಟಾದಾಗ ಕಣ್ಣಿನ ರೆಪ್ಪೆಯಲ್ಲಿ ಉಂಟಾಗುವ ಲಕ್ಷಣಗಳನ್ನು ತಿಳಿಯಿರಿ

ನಿರಂತರ ವೀಕ್ನೆಸ್ಸ್ ಮತ್ತು ದಣಿವು ಇದ್ದರೆ, ಆ ಬಗ್ಗೆ ನೀವು ಗಮನ ಹರಿಸಬೇಕು. ಈ ಕಾರಣದಿಂದಾಗಿ ನೀವು ವೈದ್ಯರ ಬಳಿಗೆ ಹೋಗಬೇಕಾಗುತ್ತೆ. ವೈದ್ಯರು ನಿಮ್ಮ ಕಣ್ಣುಗಳ ರೆಪ್ಪೆಗಳನ್ನು ಪರೀಕ್ಷಿಸುತ್ತಾರೆ. ಏಕೆಂದರೆ ವೈದ್ಯರು ನಿಮ್ಮ ಕೆಳಗಿನ ರೆಪ್ಪೆಗಳಲ್ಲಿ ಹಳದಿಯಾಗಿದ್ಯಾ ಎಂದು ಪರಿಶೀಲಿಸ್ತಾರೆ, ಇದು ಸಾಮಾನ್ಯವಾಗಿ ಕಬ್ಬಿಣದ ಕೊರತೆಯ(Iron Deficiency) ಸಂಕೇತ. 

59

ಕೆಂಪು ರಕ್ತ ಕಣಗಳಲ್ಲಿನ ಹಿಮೋಗ್ಲೋಬಿನ್ (Haemoglobin) ರಕ್ತಕ್ಕೆ ಅದರ ಬಣ್ಣವನ್ನು ನೀಡುತ್ತೆ. ಆದ್ದರಿಂದ, ಕಡಿಮೆ ಕಬ್ಬಿಣದ ಮಟ್ಟ ಅಥವಾ ಕೊರತೆಯಿಂದಾಗಿ, ರಕ್ತದ ಬಣ್ಣವು ಲೈಟಾಗಿರಬಹುದು. ಕಣ್ಣಿನಲ್ಲಿ ರಕ್ತದ ಕೊರತೆ ಉಂಟಾದಾಗ ಕಣ್ಣಿನ ಬಣ್ಣ ಬದಲಾಗಿರುತ್ತೆ.

69

ಆರೋಗ್ಯಕರ ಕಣ್ಣಿನ ಬಣ್ಣವು ತಿಳಿ ಗುಲಾಬಿ(Pink) ಬಣ್ಣದ್ದಾಗಿರುತ್ತೆ. ಆದರೆ, ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ, ನಿಮ್ಮ ಕಣ್ಣಿನಲ್ಲಿ ಹೆಚ್ಚು ಬಿಳಿಯಾಗಿ ಕಾಣುತ್ತವೆ. ಒಂದು ವೇಳೆ ನಿಮ್ಮ ಕಣ್ಣು ಬಿಳಿಯಾಗಿದ್ದರೆ, ಆವಾಗಲೇ ತಿಳಿಯಿರಿ ನಿಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗಿದೆ ಎಂದು.

79
ಕಬ್ಬಿಣದ ಕೊರತೆಯ ಸಾಮಾನ್ಯ ಚಿಹ್ನೆಗಳು

ರಾಷ್ಟ್ರೀಯ ಆರೋಗ್ಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆಯ ಪ್ರಕಾರ, ಸೌಮ್ಯ ಅಥವಾ ಮಧ್ಯಮ ಕಬ್ಬಿಣದ ಕೊರತೆಯಿಂದ ಬಳಲುತ್ತಿರುವ ಜನರು ರಕ್ತಹೀನತೆಯ ಲಕ್ಷಣಗಳನ್ನು ತೋರಿಸೋದಿಲ್ಲ. ತೀವ್ರವಾದ ಕಬ್ಬಿಣದ ಕೊರತೆಯು ರಕ್ತಹೀನತೆ, ದಣಿವು (Tiredness), ಉಸಿರಾಟದ ತೊಂದರೆ ಅಥವಾ ಎದೆ ನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತೆ.

89

ಇದಲ್ಲದೆ, ತಲೆತಿರುಗುವಿಕೆ, ಕೈಗಳು ಮತ್ತು ಕಾಲುಗಳು ತಣ್ಣಗಿರೋದು, ಚರ್ಮವು ಹಳದಿಯಾಗೋದು, ಉಗುರು ಮುರಿಯುವುದು ಮತ್ತು ನಾಲಿಗೆಯಲ್ಲಿ(Tongue) ಊತದಂತಹ ಚಿಹ್ನೆಗಳು  ಕಬ್ಬಿಣದ ಕೊರತೆಯಿಂದಾಗಿ ಕಾಣಬಹುದು. ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರವಹಿಸಿ.

99
ಕಬ್ಬಿಣದ ಮಟ್ಟ ಹೇಗೆ ಹೆಚ್ಚಿಸಬಹುದು?

ದೇಹದಲ್ಲಿ ಕಬ್ಬಿಣದ ಕೊರತೆ ಪೂರೈಸುವ ಅನೇಕ ಆಹಾರಗಳಿವೆ. ಮೇಯೋ ಕ್ಲಿನಿಕ್ ಪ್ರಕಾರ, ಕೆಂಪು ಮಾಂಸ, ಸೀ ಫುಡ್, ಬೀನ್ಸ್, ಪಾಲಕ್, ಡ್ರೈ ಫ್ರೂಟ್(Dry fruit) ಮತ್ತು ಕಬ್ಬಿಣಾಂಶ ಭರಿತ ಬ್ರೆಡ್ ಮತ್ತು ಪಾಸ್ತಾದಂತಹ ಹಸಿರು ಎಲೆಗಳ ತರಕಾರಿಗಳು ಕಬ್ಬಿಣದ ಕೊರತೆಯನ್ನು ನಿವಾರಿಸುವ ಕೆಲಸ ಮಾಡುತ್ತೆ.

Read more Photos on
click me!

Recommended Stories