ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್ ತನ್ನ ಮೊದಲ ಗ್ಲೋಬಲ್ ವೇರೇಬಲ್ ಡಿವೈಸ್ ಆಗಿರುವ ಒನ್ ಪ್ಲಸ್ ವಾಚ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತ್ವರಿತ, ಮೃದು ಮತ್ತು ವಿಶ್ವಾಸಾರ್ಹವಾದ ಈ ಒನ್ ಪ್ಲಸ್ ವಾಚ್ `ನೆವರ್ ಸೆಟಲ್’ ಅನುಭವವನ್ನು ಗ್ರಾಹಕರಿಗೆ ನೀಡಲಿದೆ ಮತ್ತು ಗ್ರಾಹಕರ ಡಿಜಿಟಲ್ ಜೀವನವನ್ನು ತಡೆರಹಿತವಾಗಿ ಸಮಗ್ರವಾಗಿಸಲಿದೆ. ಪ್ರೀಮಿಯಂ ಡಿಸೈನ್ ಆಗಿರುವ ಈ ಒನ್ ಪ್ಲಸ್ ವಾಚ್, ತಡೆರಹಿತ ಸಂಪರ್ಕ, ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕಿಂಗ್ ಮತ್ತು ದೀರ್ಘ ಬಾಳಿಕೆ ಬರುವ ಬ್ಯಾಟರಿಯನ್ನು ಒಳಗೊಂಡಿದೆ. ಈ ಮೂಲಕ ಶಕ್ತಿಶಾಲಿಯಾಗಿರುವ ಈ ಉತ್ಪನ್ನವು ಸಮಗ್ರ ಸಂಪರ್ಕಿತ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲಿದೆ.
undefined
ಸೊಗಸಾದ ವಿನ್ಯಾಸಒನ್ ಪ್ಲಸ್ ಸ್ಮಾರ್ಟ್ ಫೋನ್ ಗಳು ನೀಡುವ ಕರಕುಶಲತೆಯ ಅನನ್ಯ ಮತ್ತು ಪರಿಚಿತವಾದ ಪ್ರಜ್ಞೆಯನ್ನು ತರುವ ಒನ್ ಪ್ಲಸ್ ವಾಚ್ ಅತ್ಯುತ್ತಮವಾದ ಸೌಂದರ್ಯ, ರಾಜಿಯಾಗದ ಕರಕುಶಲತೆ ಮತ್ತು ಪ್ರೀಮಿಯಂ ಉತ್ಪನ್ನಗಳ ಸಮ್ಮಿಳಿತವಾಗಿದೆ. ಸಾಂಪ್ರದಾಯಿಕವಾಗಿರುವ ಈ ವಾಚ್ ದುಂಡಾದ ವಿನ್ಯಾವನ್ನು ಅನುಕರಿಸುವ ಮೂಲಕ ಇದರ ಕೇಸ್ ಬದಿಯಲ್ಲಿರುವ ನಯವಾದ ಆರ್ಕ್ ಅನ್ನು 20 ಕ್ಕೂ ಹೆಚ್ಚು ಕೌಶಲ್ಯಗಳೊಂದಿಗೆ ಕೈಯಿಂದಲೇ ಹೊಳಪು ಬರುವಂತೆ ಮಾಡಲಾಗುತ್ತದೆ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ಫಿನಿಶ್ ಅನ್ನು ಹೊಂದಿದೆ. ಇದರಲ್ಲಿನ 46 ಎಂಎಂ ಕೇಸ್ ಅತ್ಯುತ್ತಮ ಗುಣಮಟ್ಟದ ಸ್ಟೇನ್ಲೆಸ್ ಸ್ಟೀಲ್ ನಿಂದ ಮಾಡಿದ್ದು, ಇದರ ಫೇಸ್ ಮೇಲೆ 2.5 ಡಿ ಕರ್ವ್ ಡ್ ಗ್ಲಾಸ್ ಮತ್ತು ಹೆಚ್ಚುವರಿ ಪ್ರೀಮಿಯಂ ಫಿನಿಶ್ ಗಾಗಿ ಡಿಸ್ ಪ್ಲೇ ಅಂಚಿನ ಮೇಲೆ ಸೂಕ್ಷ್ಮವಾದ ವಿಕಿರಣವಾದ ಹೊಳಪಿನ ಸಿಡಿ ಮಾದರಿಯನ್ನು ಹೊಂದಿದೆ.
undefined
ತಡೆ ರಹಿತ ಸಂಪರ್ಕಒನ್ ಪ್ಲಸ್ ವಾಚ್ ನಿಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಅನುಭವಿಸುವಂತೆ ಮಾಡುತ್ತದೆ. ಈ ಮೂಲಕ ನಿಮ್ಮ ಡಿಜಿಟಲ್ ಸಂಪರ್ಕಿತ ಪರಿಸರ ವ್ಯವಸ್ಥೆಯಲ್ಲಿನ ವಿಂಡೋದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದು, ನಿಮ್ಮ ನೋಟಿಫಿಕೇಶನ್ ಗಳನ್ನು ನೋಡಲು ಮತ್ತು ಅವುಗಳ ನಿರ್ವಹಣೆ ಮಾಡಲು, ಕರೆಗಳನ್ನು ಮಾಡಲು ಮತ್ತು ಉತ್ತರಿಸಲು ಹಾಗೂ ನಿಮ್ಮ ರಿಸ್ಟ್ ನಿಂದಲೇ ಮ್ಯೂಸಿಕ್ ಅನ್ನು ನಿಯಂತ್ರಿಸಲು ಇದು ನಿಮಗೆ ಅನುಮತಿಸುತ್ತದೆ. 4 ಜಿಬಿ ಸ್ವತಂತ್ರ ಸ್ಟೋರೇಜ್, ಅಂತರ್ನಿರ್ಮಿತ ಜಿಪಿಎಸ್ ಮತ್ತು ಹೊಂದಾಣಿಕೆಯ ಬ್ಲೂಟೂತ್ ಇಯರ್ ಫೋನ್ ಗಳೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯದೊಂದಿಗೆ ನೀವು ಈಗ ಸಂಪೂರ್ಣವಾಗಿ ನಿಮ್ಮ ಸ್ಮಾರ್ಟ್ ಫೋನ್ ಮುಕ್ತ ಅನುಭವವನ್ನು ನ್ಯಾವಿಗೇಟ್ ಮಾಡಬಹುದಾಗಿದೆ. ಇನ್ನೂ ಏನೇನಿದೆ? ಒನ್ ಪ್ಲಸ್ ವಾಚ್ ಒನ್ ಪ್ಲಸ್ ಟಿವಿಗೆ ಪೇರ್ ಆಗಲಿದ್ದು, ಇದು ಸ್ಮಾರ್ಟ್ ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಹಣೆ ಮಾಡಲಿದೆ. ಇದರ ಮೂಲಕ ಒಳ ಬರುವ ಕರೆಯ ವೇಳೆ ಟಿವಿ ವಾಲ್ಯೂಂ ಅನ್ನು ಕಡಿಮೆ ಮಾಡಬಹುದು ಅಥವಾ ನಿಯಂತ್ರಿಸಬಹುದು. ಅಲ್ಲದೇ, ನೀವು ನಿದ್ದೆಗೆ ಜಾರುವ ವೇಳೆ ಇದರ ಮೂಲಕವೇ ಟಿವಿಯನ್ನು ಆಫ್ ಮಾಡಬಹುದು.
undefined
ಶಕ್ತಿಶಾಲಿ ಬ್ಯಾಟರಿಒನ್ ಪ್ಲಸ್ ವಾಚ್ ನ ವಿಶೇಷವೆಂದರೆ ಕೇವಲ ಐದು ನಿಮಿಷ ಚಾರ್ಜ್ ಮಾಡಿದರೆ ಸಾಕು ಇಡೀ ಒಂದು ದಿನ ಬಾಳಿಕೆ ಬರುತ್ತದೆ. ಇಷ್ಟೇ ಅಲ್ಲ, ಕೇವಲ 20 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ಒಂದು ವಾರದವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಇದರಲ್ಲಿರುವ 402ಎಂಎಎಚ್ ಬ್ಯಾಟರಿಯನ್ನು ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಎರಡು ವಾರಗಳ ಬಳಕೆಯನ್ನು ಖಾತ್ರಿಪಡಿಸುತ್ತದೆ.
undefined
ಪೂರ್ವಭಾವಿ ಫಿಟ್ನೆಸ್5 ಎಟಿಎಂ ಮತ್ತು ಐಪಿ68 ನೀರು ಮತ್ತು ಧೂಳು ನಿರೋಧಕದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಇದರಲ್ಲಿ 110+ ವರ್ಕೌಟ್ ಮಾದರಿಗಳು ಇವೆ. ಜಾಗಿಂಗ್ ಮತ್ತು ರನ್ನಿಂಗ್ ಗೆ ಆಟೋಮ್ಯಾಟಿಕ್ ವರ್ಕೌಟ್ ಸಹ ಇದರಲ್ಲಿ ಸೇರಿವೆ. ಒನ್ ಪ್ಲಸ್ ವಾಚ್ ಗ್ರಾಹಕರಿಗೆ ಅತ್ಯಂತ ಉತ್ತಮವಾದ ಜೀವನಶೈಲಿಗೆ ಪೂರಕವಾದ ವರ್ಕೌಟ್ ಗಳನ್ನು ನೀಡುತ್ತದೆ (ಮುಂಬರುವ ತಿಂಗಳುಗಳಲ್ಲಿ ಮಾಡಬಹುದಾದ ಅಪ್ ಡೇಟೆಡ್ ವರ್ಕೌಟ್ ಗಳ ಮಾದರಿಗಳನ್ನು ಇದು ನೀಡುತ್ತದೆ). ನಾಡಿಮಿಡಿತ, ದೂರ, ಕ್ಯಾಲೊರಿಗಳು, ವೇಗದ ಮೇಲ್ವಿಚಾರಣೆ ಮತ್ತು ಈಜುಗಾರರಿಗೆ ಎಸ್ ಡಬ್ಲಯೂಒಎಲ್ಎಫ್ ದಕ್ಷತೆಯನ್ನು ಮೆಟ್ರಿಕ್ ಗಳೊಂದಿಗೆ ನಿಮ್ಮ ವ್ಯಕ್ತಿಗತ ಕಾರ್ಯಕ್ಷಮತೆಗೆ ನಿಮ್ಮನ್ನು ಹೊಂದಿಕೊಳ್ಳುವಂತೆ ಮಾಡಲಿದೆ. ಇದರಲ್ಲಿನ ಅಂತರ್ನಿರ್ಮಿತ ಜಿಪಿಎಸ್ ನೊಂದಿಗೆ ಫೋನ್ ನಿಮ್ಮ ಪಕ್ಕದಲ್ಲಿ ಇಲ್ಲದಿದ್ದರೂ ಸಹ ಒನ್ ಪ್ಲಸ್ ವಾಚ್ ನಿಮ್ಮ ಎಲ್ಲಾ ಚಟುವಟಿಕೆಗಳನ್ನು ನಿಖರವಾಗಿ ಟ್ರ್ಯಾಕ್ ಮಾಡಲಿದೆ. ಇದಲ್ಲದೇ, ರಕ್ತದಲ್ಲಿನ ಆಮ್ಲಜನಕದ ಮೇಲೆ ನಿಗಾ ಇಡಲಿದೆ. ಒತ್ತಡವನ್ನು ಪತ್ತೆ ಮಾಡಲಿದೆ, ಉಸಿರಾಟದ ಬಗ್ಗೆ ತರಬೇತಿ ನೀಡುತ್ತದೆ, ಕ್ಷಿಪ್ರ ಹೃದಯ ಬಡಿತದ ಬಗ್ಗೆ ಎಚ್ಚರಿಕೆ ನೀಡುತ್ತದೆ ಮತ್ತು ಇನ್ನಿತರೆ ಎಚ್ಚರಿಕೆಗಳನ್ನು ಇದರಲ್ಲಿನ ಒನ್ ಪ್ಲಸ್ ಹೆಲ್ತ್ ಪ್ಲಸ್ ಆ್ಯಪ್ ನೀಡುತ್ತದೆ.
undefined
ಬೆಲೆ ಮತ್ತು ಲಭ್ಯತೆಒನ್ ಪ್ಲಸ್ ವಾಚ್ ವಿಶೇಷ ಉದ್ಘಾಟನೆ ಬೆಲೆಯಾದ 14,999 ರೂಪಾಯಿಗೆ ಲಭ್ಯವಿದ್ದು, ಮಿಡ್ ನೈಟ್ ಬ್ಲ್ಯಾಕ್ ಮತ್ತು ಮೂನ್ ಲೈಟ್ ಸಿಲ್ವರ್ ಬಣ್ಣದಲ್ಲಿ ಲಭ್ಯವಿದೆ. ಎಲ್ಲಾ ರೆಡ್ ಕೇಬಲ್ ಕ್ಲಬ್ ಸದಸ್ಯರು ರೆಡ್ ಕೇಬಲ್ ಫಸ್ಟ್ ಸೇಲ್ ಮೂಲಕ ಒನ್ ಪ್ಲಸ್.ಇನ್ ಮತ್ತು ಒನ್ ಪ್ಲಸ್ ಸ್ಟೋರ್ ಆ್ಯಪ್ ನಲ್ಲಿ 21 ಏಪ್ರಿಲ್ 2021 ರಂದು ಬೆಳಗ್ಗೆ 9 ರಿಂದ ಖರೀದಿಸಬಹುದಾಗಿದೆ. ಈ ಒನ್ ಪ್ಲಸ್ ವಾಚ್ ಒನ್ ಪ್ಲಸ್.ಇನ್, ಅಮೆಜಾನ್.ಇನ್, ಫ್ಲಿಪ್ ಕಾರ್ಟ್.ಕಾಂ, ಒನ್ ಪ್ಲಸ್ ಎಕ್ಸ್ ಕ್ಲೂಸಿವ್ ಸ್ಟೋರ್ ಗಳು ಹಾಗೂ ಇನ್ನಿತರೆ ಪಾಲುದಾರ ಸ್ಟೋರ್ ಗಳಲ್ಲಿ 22 ಏಪ್ರಿಲ್ 2021 ರ ಮಧ್ಯಾಹ್ನ 12 ಗಂಟೆಯಿಂದ ಖರೀದಿಸಬಹುದಾಗಿದೆ. ಎಸ್ ಬಿಐ ಕಾರ್ಡ್ ನ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ 2000 ರೂಪಾಯಿಗಳ ಡಿಸ್ಕೌಂಟ್ ಅನ್ನು ಪಡೆದುಕೊಂಡು ಒನ್ ಪ್ಲಸ್ ವಾಚ್ ಅನ್ನು ಖರೀದಿಸಬಹುದು. 30 ಏಪ್ರಿಲ್ 2021 ರವರೆಗೆ ಈ ಅವಕಾಶವಿರುತ್ತದೆ.
undefined