ಚೀನಾದ ಶಓಮಿ ಬ್ರ್ಯಾಂಡ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಕಡಿಮೆ ಬೆಲೆಯಲ್ಲಿ ಹಲವು ಫೀಚರ್ಸ್, ಉತ್ತಮ ಸ್ಟೋರೇಜ್ ನೀಡುತ್ತಿರುವ xiaomi ಇದೀಗ ಭಾರತದಲ್ಲಿ ಪ್ಯಾಡ್ 7 ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ xiaomi ಪ್ಯಾಡ್ 7 ಕೂಡ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ಜನವರಿ 10ಕ್ಕೆ ಲಾಂಚ್
ಜನವರಿ 10 ರಂದು ಭಾರತದಲ್ಲಿ xiaomi ಪ್ಯಾಡ್ 7 ಬಿಡುಗಡೆಯಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಮೊದಲು ಚೀನಾದಲ್ಲಿ ಬಿಡುಗಡೆಯಾಗಿತ್ತು. ಇದೀಗ ಭಾರತದಲ್ಲಿ ಈ ಟ್ಯಾಬ್ಲೆಟ್ ಬಿಡುಗಡೆಯಾಗುತ್ತಿದೆ. ಹೊಸ xiaomi ಪ್ಯಾಡ್ 7 ಟ್ಯಾಬ್ ಭಾರತದಲ್ಲಿ ಬಿಡುಗಡೆಯಾಗಲು ಇನ್ನು ಕೆಲವು ದಿನ ಮಾತ್ರ. ಇದರೊಂದಿಗೆ ಕುತೂಹಲ ಹೆಚ್ಚಾಗಿದೆ.
ಇ ಕಾಮರ್ಸ್ ಮೂಲಕ ಲಭ್ಯ
xiaomi ಎಲ್ಲಾ ಉತ್ಪನ್ನಗಳು ಇ ಕಾಮರ್ಸ್ ಶಾಪಿಂಗ್ ಮೂಲಕ ಭಾರತದಲ್ಲಿ ಲಭ್ಯವಿದೆ. ಇದು xiaomi ಪ್ಯಾಡ್ 7ಗೂ ಅನ್ವಯಸಲಿದೆ. ಈಗಾಗಲೇ ಅಮೇಜಾನ್ ಭಾರತದಲ್ಲಿ xiaomi ಪ್ಯಾಡ್ 7 ಬಿಡುಗಡೆ ಖಚಿತಪಡಿಸಿದೆ. ಹೀಗಾಗಿ ಬಿಡುಗಡೆಯ ಕ್ಷಣದಿಂದಲೇ ಬುಕಿಂಗ್ ಆರಂಭಗೊಳ್ಳಲಿದೆ.
xiaomi ಪ್ಯಾಡ್ 7 11.2 ಇಂಚಿನ LCD ಸ್ಕ್ರೀನ್ ಹೊಂದಿದೆ. ಇದರಿಂದ 3.2 ರೆಸಲ್ಯೂಶನ್(2,136×3,200 ಪಿಕ್ಸೆಲ್ಸ್) ಕ್ಲಾರಿಟಿ ಸಿಗಲಿದೆ. 144Hz ರಿಫ್ರೆಶ್ ರೇಟ್ ಹಾಗೂ 900 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಸ್ನಾಪ್‌ಡ್ರಾಗನ್ 7+ ಜೆನ್ ಪ್ರೊಸೆಸರ್ ಹೊಂದಿದೆ. ಫೋಟೋಗ್ರಫಿಗಾಗಿ 13MP ಕ್ಯಾಮೆರಾ ಹೊಂದಿದೆ.8MP ಫ್ರಂಟ್ ಫೇಸ್ ಕ್ಯಾಮೆರಾ ಆಯ್ಕೆ ಹೊಂದಿದೆ.
xiaomi ಪ್ಯಾಡ್ 7 ಬೆಲೆ
ಬೇಸ್ ಮಾಡೆಲ್ ಅಂದರೆ 8GB + 128GB ವೇರಿಯೆಂಟ್ ಬೆಲೆ 23,500 ರೂಪಾಯಿಯಿಂದ ಆರಂಭಗೊಳ್ಳಲಿದೆ. ಇನ್ನು 8GB + 256GB ಮಾಡೆಲ್ ಬೆಲೆ 26,800 ರೂಪಾಯಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. 12GB + 256GB ವರ್ಶನ್ ಬೆಲೆ 30,000 ಎಂದು ಅಂದಾಜಿಸಲಾಗಿದೆ.