ಮೂರ್ತಿಯೇ ಇಲ್ಲವಂತೆ ಈ ದೇವಸ್ಥಾನದಲ್ಲಿ, ಆದರೂ ಸಿನಿಮಾ ಸ್ಟಾರ್‌ಗಳ ಫೇವರಿಟ್‌ ಪ್ಲೇಸ್‌ ಅಂತೆ!

Published : May 26, 2024, 01:47 PM ISTUpdated : May 27, 2024, 10:31 AM IST

ಇದು ಭಾರತದ ಪುರಾತನ ಶಕ್ತಿಪೀಠ. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ, ರಾಜಕಾರಣಿಗಳು ಸೇರಿ ಅನೇಕ ಗಣ್ಯ ವ್ಯಕ್ತಿಗಳು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯದಲ್ಲಿ ಅಂತದ್ದೇನಿದೆ? ಇದರ ವಿಶೇಷತೆ ಎನು? ಈ ದೇವಾಲಯ ಎಲ್ಲಿದೆ?  ವಿವರಣೆ ಇಲ್ಲಿದೆ.

PREV
114
ಮೂರ್ತಿಯೇ ಇಲ್ಲವಂತೆ ಈ ದೇವಸ್ಥಾನದಲ್ಲಿ, ಆದರೂ ಸಿನಿಮಾ ಸ್ಟಾರ್‌ಗಳ ಫೇವರಿಟ್‌ ಪ್ಲೇಸ್‌ ಅಂತೆ!

ಕನ್ನಡದ ಡಿಕೆಶಿ, ನಟ ಜಗ್ಗೇಶ್ , ನಟಿಯರಾದ ಕಾವ್ಯಶಾಸ್ತ್ರಿ, ಕಾವ್ಯಾ ಶೆಟ್ಟಿ, ರಾಗಿಣಿ ದ್ವಿವೇದಿ ಸೇರಿ ಬಾಲಿವುಡ್‌ನ ಅನೇಕ ತಾರೆಯರು ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

214

ಐಟಿ, ಸಿಬಿಐ, ಇಡಿ ಸಂಸ್ಥೆಗಳ ತನಿಖೆಯಿಂದ ಬೇಸತ್ತಿದ್ದ  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಟುಂಬ ಸಮೇತ 2020ರಲ್ಲಿ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಶಕ್ತಿ ದೇವತೆಯ ಮೊರೆ ಹೋಗಿ ವಿಶೇಷ ಮೂಜೆ ಸಲ್ಲಿಸಿದ್ದರು.  2016ರಲ್ಲೂ ಭೇಟಿ ಕೊಟ್ಟಿದ್ದರು.

314

ಇತ್ತಿಚೆಗೆ ಸ್ಯಾಂಡಲ್‌ವುಡ್‌ ನಟ, ನವರಸ ನಾಯಕ ಜಗ್ಗೇಶ್ ಕುಟುಂಬ ಸಮೇತರಾಗಿ ಈ ಶಕ್ತಿ ಪೀಠಕ್ಕೆ ಭೇಟಿ ನೀಡಿ  ದೇವಿ ದರ್ಶನ ಪಡೆದಿದ್ದರು. 

414

ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ ಕೂಡ ಇತ್ತೀಚೆಗೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಉತ್ತರ ಭಾರತಕ್ಕೆ ಟ್ರಿಪ್ ಹೋಗಿದ್ದಾಗ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. 
 

514

ಇನ್ನು ಸ್ಯಾಂಡಲ್‌ವುಡ್‌ ನಟಿ, ಮಂಗಳೂರು ಬೆಡಗಿ, ರೂಪದರ್ಶಿ, ಇಷ್ಟಕಾಮ್ಯ, ನಮ್ ದುನಿಯಾ ನಮ್ ಸ್ಟೈಲ್, ಜೂಮ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಕಾವ್ಯಾ ಶೆಟ್ಟಿ ಕೂಡ ಇತ್ತೀಚೆಗೆ ಈ ಶಕ್ತಿಪೀಠಕ್ಕೆ ಬೇಟಿ ನೀಡಿದ್ದರು.

614

ಬಾಲಿವುಡ್ ಬೋಲ್ಡ್ ಹುಡುಗಿ ಸಾರಾ ಅಲಿ ಖಾನ್‌ ಕೂಡ ಈ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಮನಸ್ಸಿಗೆ ನೆಮ್ಮದಿ ಸಿಕ್ತು ಎಂದು ಬರೆದುಕೊಂಡಿದ್ದರು. ಮಾತ್ರವಲ್ಲ ನಟಿ ರಾಜಕಾರಣ ಕಂಗನಾ ರಣಾವತ್‌, ಸ್ಯಾಂಡಲ್‌ ವುಡ್‌ ನಟಿ ರಾಗಿಣಿ ದ್ವಿವೇದಿ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿದ್ದರು.

714

ಇನ್ನು ಬಾಲಿವುಡ್‌ ನಟಿಯರಾದ ಪ್ರೀತಿ ಝಿಂಟಾ, ಶಿಲ್ಪಾ ಶೆಟ್ಟಿ, ಊರ್ವಶಿ ರೌಟೇಲಾ ಕೂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

814

ಇನ್ನು ಇತ್ತೀಚೆಗೆ ಮಿಲ್ಕಿ ಬ್ಯೂಟಿ ತಮನ್ನಾ, ಮಲಯಾಳಂ ನಟಿ ಸಂಯುಕ್ತಾ ಮೆನನ್ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇಶದ 51 ಶಕ್ತಿಪೀಠಗಳಲ್ಲಿ ಗುವಾಹಟಿ ಕಾಮಾಕ್ಯಾ ದೇವಾಲವೇ ಈ  ಕಾರ್ಣಿಕದ ಕ್ಷೇತ್ರ.

914

ಕಾಮಾಕ್ಷಿ ದೇವಿಯು ಇಲ್ಲಿ ನೆಲಸಿದ್ದಾಳೆ. `ಪವರ್ ಫುಲ್' ಶಕ್ತಿ ದೇವತೆ ಎನ್ನಿಸಿಕೊಂಡಿರುವ ಕಾಮಾಕ್ಷಿ ಮಾತೆಯನ್ನು ಪೂಜಿಸುವ ಭಕ್ತಾಧಿಗಳ ಸಂಖ್ಯೆ ಅಗಣಿತ. ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಮುಟ್ಟಾದ ಮೂರು ದಿನಗಳ ಕಾಲ ಈ ದೇವಾಲಯವನ್ನು ಬಂದ್ ಮಾಡಲಾಗುತ್ತದೆ.  

1014

ಇಲ್ಲಿ ಭಕ್ತರಿಗೆ ಕೆಂಪು ಬಣ್ಣದ ಬಟ್ಟೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಈ ಕೆಂಪು ಬಟ್ಟೆಯ ಬಗ್ಗೆ ಹೇಳುವುದಾದರೆ, ದೇವಿಗೆ ಮೂರು ದಿನಗಳ ಋತು ಚಕ್ರ ಬಂದಾಗ, ದೇವಾಲಯದಲ್ಲಿ ಬಿಳಿ ಬಟ್ಟೆಗಳನ್ನು ಹರಡಲಾಗುತ್ತದೆ ಮತ್ತು ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ದೇವಿಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಬಟ್ಟೆಯನ್ನು ಅಂಬುವಾಚಿ ಬಟ್ಟೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನೇ ಭಕ್ತರಿಗೆ ಪ್ರಸಾದವಾಗಿ ಕೊಡಲಾಗುತ್ತದೆ.

1114

ಗರ್ಭಗುಡಿಯಲ್ಲಿರುವ ಈ ಯೋನಿಯನ್ನು ಹೆಣ್ಣಿನ ಮರುಸೃಷ್ಟಿ ಸಾಮರ್ಥ್ಯದ ಪ್ರತೀಕವಾಗಿ ಪೂಜಿಸಲಾಗುತ್ತದೆ. ಅಸ್ಸಾಂನ ಗುವಾಹಟಿ ನಗರದ ಪಶ್ಚಿಮದಲ್ಲಿರುವ ಬಹಳ ಶಕ್ತಿಯುತವಾದ ಕ್ಷೇತ್ರದ ಗರ್ಭಗುಡಿಯಲ್ಲಿರುವುದು ಶಕ್ತಿ ದೇವತೆಯ ಯೋನಿ. ಸತಿಯ ದೇಹ 51 ಭಾಗಗಳಾಗಿ ದೇಶದ ಉದ್ದಗಲದಲ್ಲೂ ಬಿದ್ದು ವಿವಿಧ ಶಕ್ತಿಪೀಠಗಳಾಗಿ ಹೊಮ್ಮಿದಾಗ, ಇಲ್ಲಿ ಆಕೆಯ ಗರ್ಭ ಬಿದ್ದಿತು ಎಂಬ ಕತೆಯಿದೆ. 

1214

ಮಗು ಸೇರಿದಂತೆ ಬೇಡಿದ ವರಗಳನ್ನೆಲ್ಲ ಕರುಣಿಸುವ ತಾಯಾಗಿ ಗುರುತಿಸಿಕೊಂಡಿರುವ ಕಾಮಾಕ್ಯ ದೇವಿಯ ವಿಶೇಷವೆಂದರೆ ಕಲ್ಲಿನಿಂದ ತಯಾರಿಸುವ ಇಲ್ಲಿನ ಕುಂಕುಮ. ಕಾಮಾಕ್ಯ ಸಿಂಧೂರ್ ಎಂದೇ ಪ್ರಸಿದ್ಧವಾಗಿರುವ ಕುಂಕುಮವನ್ನು  ಮಹಿಳೆಯರು  ಪೂಜ್ಯನೀಯ ಭಾವದಿಂದ ಹಣೆಗಿಟ್ಟುಕೊಳ್ಳುತ್ತಾರೆ.

1314

ಈ ದೇವಾಲಯ ತಂತ್ರಮಂತ್ರಗಳಿಗೂ ಜನಪ್ರಿಯವಾಗಿದ್ದು, ಇಲ್ಲಿ ನೂರಾರು ಸಾಧುಗಳು, ಅಗೋರಿಗಳು ಮಾಟಮಂತ್ರ ಹೋಗಲಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಭೂತದೆವ್ವ ಬಿಡಿಸುವುದು, ನೆಗೆಟಿವ್ ಎನರ್ಜಿ ತೊಡೆದು ಹಾಕುವುದು ಮುಂತಾದ ಹಲವು ಕೆಟ್ಟ ಶಕ್ತಿಗಳನ್ನು ತೆಗೆದುಹಾಕುವುದನ್ನು ಇಲ್ಲಿ ಅಘೋರಿಗಳು ಮಾಡುತ್ತಾರೆ. ಹಾಗಾಗಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಇಲ್ಲಿ ಪ್ರಾಣಿ ಬಲಿ ಸಾಮಾನ್ಯವಾದರೂ ಹೆಣ್ಣು ಪ್ರಾಣಿಯನ್ನು ಬಲಿ ಕೊಡುವುದು ನಿಷೇಧಿಸಲಾಗಿದೆ. 

1414

ಒಟ್ಟಿನಲ್ಲಿ ‘ಮುಟ್ಟ’ನ್ನೂ ಮಾನ್ಯವಾಗಿಸುವ, ಸಾಮಾನ್ಯವಾಗಿ ನಾವು ‘ಅಪವಿತ್ರ’ ಎಂದು ಭಾವಿಸುವ ಋುತುಸ್ರಾವವನ್ನೂ ‘ಪವಿತ್ರ’ ವಾಗಿಸುವ ದೇವಿಯ ಶಕ್ತಿ ಬೆರಗು ಮೂಡಿಸುತ್ತವೆ.

Read more Photos on
click me!

Recommended Stories