ಮುಸ್ಲಿಂ ರಾಷ್ಟ್ರದಲ್ಲೂ ಆಚರಿಸ್ತಾರೆ ಗಣೇಶನ ಹಬ್ಬ, ಇದರ ಹಿಂದಿದೆ ದೊಡ್ಡ ರೀಸನ್!

First Published | Aug 31, 2024, 12:55 PM IST

ಈ ಬಾರಿ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ. ಭಾರತದಲ್ಲಿ ಈ ಹಬ್ಬಕ್ಕೆ ತನ್ನದೇ ಆದ ಸಾಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿರುವುದು ಗೊತ್ತು. ಆದರೆ, ಬೇರೆ ಬೇರೆ ದೇಶಗಳಲ್ಲಿಯೂ ಶ್ರೀ ಗಣೇಶನನ್ನು ಪೂಜಿಸಲಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ದೇಶಗಳ ಹೆಸರು ಮತ್ತು ಶ್ರೀಗಣೇಶನನ್ನು ಯಾವ ಹೆಸರಿನಿಂದ ಪೂಜಿಸಲಾಗುತ್ತದೆ ಎಂದು ತಿಳಿಯೋಣ.

ಗಣೇಶ ಚತುರ್ಥಿ 2024 ಯಾವಾಗ?

Ganesh Utsav 2024: ಈ ಬಾರಿ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್ 7, ಶನಿವಾರದಂದು ಆಚರಿಸಲಾಗುತ್ತದೆ. ಈ ದಿನದಿಂದ 11 ಹಲವೆಡೆ ಭಾರತದಲ್ಲಿ 108 ದಿನಗಳ ಉತ್ಸವವೂ ನಡೆಯುತ್ತದೆ. ಭಗವಾನ್ ಶ್ರೀಗಣೇಶನನ್ನು ಭಾರತದಲ್ಲಿ ಮಾತ್ರವಲ್ಲದೇ ಜಪಾನ್, ಥೈಲ್ಯಾಂಡ್, ಶ್ರೀಲಂಕಾ ಮುಂತಾದ ಇತರೆ ಹಲವು ದೇಶಗಳಲ್ಲಿಯೂ ಪೂಜಿಸಲಾಗುತ್ತದೆ. ಅಲ್ಲದೆ, ಮುಸ್ಲಿಮರ ಅತಿದೊಡ್ಡ ದೇಶದಲ್ಲಿಯೂ ಶ್ರೀಗಣೇಶನನ್ನು ಪೂಜಿಸಲಾಗುತ್ತದೆ. ಈ ದೇಶಗಳ ಹೆಸರು ಮತ್ತು ಶ್ರೀಗಣೇಶನನ್ನು ಯಾವ ಹೆಸರಿನಿಂದ ಪೂಜಿಸಲಾಗುತ್ತದೆ ಎಂದು ಮುಂದೆ ತಿಳಿಯಿರಿ

ಇಂಡೋನೇಷ್ಯಾದಲ್ಲಿ ಶ್ರೀಗಣೇಶ ಜ್ಞಾನದ ಸಂಕೇತ

ಇಂಡೋನೇಷ್ಯಾ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರ. ಇಲ್ಲಿಯೂ ಭಗವಾನ್ ಶ್ರೀಗಣೇಶನನ್ನು ಪೂಜಿಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಇಂಡೋನೇಷ್ಯಾದ ಆರ್ಥಿಕತೆ ತೀವ್ರವಾಗಿ ಕುಸಿದಾಗ, ಅಲ್ಲಿನ ಸರ್ಕಾರ 20 ಸಾವಿರ ರೂಪಾಯಿ ನೋಟಿನ ಮೇಲೆ ಗಣೇಶನ ಚಿತ್ರ ಮುದ್ರಿಸಿತು. ಆಗ ದೇಶದ ಆರ್ಥಿಕತೆಯೇ ಚೇತರಿಸಿಕೊಂಡಿತು. ಇಲ್ಲಿ ಭಗವಾನ್ ಶ್ರೀಗಣೇಶನನ್ನು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ.

Tap to resize

ಜಪಾನ್‌ನಲ್ಲಿ ಕಂಗಿತೇನ್ ಎನ್ನುತ್ತಾರೆ

ವಿಶ್ವದ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶ ಜಪಾನ್‌ನಲ್ಲಿಯೂ ಭಗವಾನ್ ಗಣೇಶನನ್ನು ಪೂಜಿಸಲಾಗುತ್ತದೆ, ಇಲ್ಲಿ ಗಣಪತಿಯನ್ನು ಕಂಗಿತೇನ್ ಎನ್ನುತ್ತಾರೆ. ಇದರರ್ಥ ಸಂತೋಷದ ದೇವರು. ಶ್ರೀಗಣೇಶನ ಹಲವು ರೂಪಗಳಿಲ್ಲಿ ಪ್ರಚಲಿತದಲ್ಲಿವೆ. ಇಲ್ಲಿಯೂ ನಾಲ್ಕು ತೋಳಿನ ಗಣಪತಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ಶ್ರೀಲಂಕಾದಲ್ಲಿ ಪಿಳ್ಳಯಾರ್ ಎನ್ನುತ್ತಾರೆ

ಭಾರತದ ನೆರೆ ದೇಶ ಶ್ರೀಲಂಕಾದಲ್ಲಿಯೂ ಭಗವಾನ್ ಶ್ರೀಗಣೇಶನ ಹಲವು ದೇವಾಲಯಗಳಿವೆ. ಇಲ್ಲಿನ ತಮಿಳು ಪ್ರಧಾನ ಪ್ರದೇಶಗಳಲ್ಲಿ ಕಪ್ಪು ಕಲ್ಲಿನಿಂದ ಮಾಡಿದ ಭಗವಾನ್ ಶ್ರೀಗಣೇಶನನ್ನು ಪೂಜಿಸಲಾಗುತ್ತದೆ, ಇಲ್ಲಿ ಅವರನ್ನು ಪಿಳ್ಳಯಾರ್ ಎಂದು ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ ಗಣೇಶನ ಒಂದು ಅಥವಾ ಎರಡಲ್ಲ, ಬದಲಾಗಿ 14 ಪ್ರಾಚೀನ ದೇವಾಲಯಗಳಿವೆ. ಇಲ್ಲಿ ಬೌದ್ಧ ವಿಹಾರಗಳಲ್ಲಿಯೂ ಭಗವಾನ್ ಗಣೇಶನ ವಿಗ್ರಹಗಳನ್ನು ಕಾಣಬಹುದು.

ಥೈಲ್ಯಾಂಡ್‌ನಲ್ಲಿ ಫ್ರರಾ ಫಿಕಾನೇತ್ ಎನ್ನುತ್ತಾರೆ

ಥೈಲ್ಯಾಂಡ್ ಆನೇಗಳ ದೇಶವೆಂದೇ ಖ್ಯಾತಿ ಪಡೆದಿದೆ. ಇಲ್ಲಿ ಹೆಚ್ಚಿನ ಜನರು ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ. ಇಲ್ಲಿ ಭಗವಾನ್ ಶ್ರೀಗಣೇಶನನ್ನು 'ಫ್ರರಾ ಫಿಕಾನೇತ್' ಎಂದು ಪೂಜಿಸಲಾಗುತ್ತದೆ, ಇದರರ್ಥ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ವಿಘ್ನ ನಿವಾರಕ. ಇಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಶ್ರೀಗಣೇಶನನ್ನು ಪೂಜಿಸುವ ಪದ್ಧತಿ ಇದೆ. ಗಣೇಶ ಉತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ.

Latest Videos

click me!