ಈ 3 ದಿನಾಂಕಗಳಲ್ಲಿ ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ

Published : Apr 19, 2025, 04:05 PM ISTUpdated : Apr 19, 2025, 04:14 PM IST

ಮನುಷ್ಯ ವಿಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಜ್ಯೋತಿಷ್ಯ ನಂಬುವವರಿದ್ದಾರೆ. ಹುಟ್ಟಿದ ದಿನಾಂಕ ನೋಡಿ ವ್ಯಕ್ತಿತ್ವ, ಆಲೋಚನೆಗಳನ್ನ ಅಂದಾಜು ಮಾಡಬಹುದು ಅಂತಾರೆ. 6,15,24 ರಂದು ಹುಟ್ಟಿದವರ ಬದುಕಲ್ಲಿ ಆಶ್ಚರ್ಯಕರ ಬದಲಾವಣೆಗಳಾಗುತ್ತವೆ ಅಂತ ಜ್ಯೋತಿಷಿಗಳು ಹೇಳ್ತಾರೆ. ಈ ದಿನಾಂಕಗಳ ಬಗ್ಗೆ ತಿಳಿದುಕೊಳ್ಳೋಣ.

PREV
14
ಈ 3 ದಿನಾಂಕಗಳಲ್ಲಿ ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ

ಜನ್ಮಾಂಕ ಶಾಸ್ತ್ರದಲ್ಲಿ ಪ್ರತಿ ದಿನಾಂಕಕ್ಕೂ ಒಂದು ಮೂಲಾಂಕ ಇರುತ್ತದೆ. ಹುಟ್ಟಿದ ದಿನಾಂಕದ ಅಂಕಿಗಳನ್ನ ಕೂಡಿದಾಗ ಬರುವ ಸಂಖ್ಯೆ ಮೂಲಾಂಕ. ಈ ಮೂಲಾಂಕ 1 ರಿಂದ 9 ರವರೆಗೆ ಇರುತ್ತದೆ. ಇದರ ಮೂಲಕ ವ್ಯಕ್ತಿಗಳ ಗುಣ, ಜೀವನಶೈಲಿ, ಹಣಕಾಸು, ಯೋಗಕ್ಷೇಮದ ಬಗ್ಗೆ ತಿಳಿಯಬಹುದು.

24

6ಕ್ಕೆ ವಿಶೇಷ ಸ್ಥಾನ. 6, 15, 24 ರಂದು ಹುಟ್ಟಿದವರು ಈ ಮೂಲಾಂಕಕ್ಕೆ ಸೇರುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ಇವರ ಮೇಲಿರುತ್ತದೆ. ಶುಕ್ರ ಈ ಸಂಖ್ಯೆಯ ಅಧಿಪತಿ. ಶುಕ್ರ ಪ್ರೀತಿ, ಹಣ, ಸೌಂದರ್ಯ, ಕಲೆಗಳಿಗೆ ಸಂಕೇತ. ಹೀಗಾಗಿ ಇವರು ಆರ್ಥಿಕವಾಗಿ ಸುಭದ್ರರಾಗಿರುತ್ತಾರೆ, ಹಣದ ಕೊರತೆ ಇರಲ್ಲ.

34

೬ರವರ ವಿಶೇಷತೆ: ಸೃಜನಶೀಲರು. ಸಂಗೀತ, ಕಲೆ, ವಿನ್ಯಾಸ, ಫ್ಯಾಷನ್‌ನಲ್ಲಿ ಪ್ರತಿಭಾವಂತರು. ರೊಮ್ಯಾಂಟಿಕ್. ಮಾತುಗಾರಿಕೆಯಿಂದ ಇತರರ ಮೇಲೆ ಪ್ರಭಾವ ಬೀರುತ್ತಾರೆ. ಸ್ನೇಹಪರರು, ಉಲ್ಲಾಸದಿಂದಿರುತ್ತಾರೆ. ದುಡ್ಡಿದ್ದರೂ ಸರಳವಾಗಿರುತ್ತಾರೆ.

44

ಹಣದ ಸಮಸ್ಯೆ ಬಂದರೂ ಬೇಗ ಮೀರಿ ನಿಲ್ಲುತ್ತಾರೆ. ಹಣ, ಪ್ರೀತಿ, ಕನಸು, ಖ್ಯಾತಿ ಎಲ್ಲವೂ ಸಿಗುತ್ತದೆ. ಶುಕ್ರನ ಕೃಪೆಯಿಂದ ಜೀವನ ಸುಂದರ, ಆನಂದಮಯ. ಲಕ್ಷ್ಮೀ ಕೃಪೆಯಿಂದ ಹಣದ ಕೊರತೆ ಇರಲ್ಲ.

Read more Photos on
click me!

Recommended Stories