Navaratri 2024: ಶ್ರೀ ಶಾರದಾ ಮಾತೆಯಾಗಿ ಡಾ. ನಿರುಪಮಾ ರೈ, ಸುಂದರ ಫೋಟೊಗಳು ಇಲ್ಲಿವೆ

Published : Oct 04, 2024, 12:17 PM IST

ಈ ಬಾರಿಯ ನವರಾತ್ರಿ ದಸರಾ ಹಬ್ಬದ ಸಡಗರಕ್ಕೆ ಪುತ್ತೂರು ಸಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯೆ ಡಾ. ನಿರುಪಮಾ ಎಸ್. ರೈ ಅವರು ನವರಾತ್ರಿ ವೈಭವದ ಫೋಟೋ ಶೂಟ್ ನಲ್ಲಿ ಮಿಂಚಿದ್ದಾರೆ.  

PREV
19
Navaratri 2024: ಶ್ರೀ ಶಾರದಾ ಮಾತೆಯಾಗಿ ಡಾ. ನಿರುಪಮಾ ರೈ, ಸುಂದರ ಫೋಟೊಗಳು ಇಲ್ಲಿವೆ

ಹಿಂದೂ ಧರ್ಮದಲ್ಲಿ ಒಂಭತ್ತು ದಿನಗಳ ನಡೆಯುವ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಒಂಭತ್ತು ದಿನಗಳ ಕಾಲ ನಡೆದ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದ ಕಥೆಯನ್ನ ನವರಾತ್ರಿ ಪ್ರತಿನಿಧಿಸುತ್ತದೆ. 

29

ಪ್ರತಿನಿಧಿಸುತ್ತದೆ. ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. 

39

ಒಂಭತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದಲ್ಲಿ ಮಹಿಳೆಯರಿಗೆ ಸಂಭ್ರಮವೋ ಸಂಭ್ರಮ. ದೇಶಾದ್ಯಂತ ಬಲು ಸಡಗರದಿಂದ ನವದುರ್ಗೆಯರನ್ನು ಭಕ್ತಿ ಭಾವದಿಂದ ಆಚರಿಸಲಾಉತ್ತದೆ. 

49

ಹಬ್ಬದಂದು ಮಹಿಳೆಯರು ಬಣ್ಣ-ಬಣ್ಣದ ಹೊಸ ಹೊಸ ಬಟ್ಟೆ, ಆಭರಣಗಳಿಂದ ಆಲಂಕೃತಗೊಂಡು ಫೋಟೊ ಶೂಟ್ ಮಾಡಿ ಹಂಚಿಕೊಂಡು ಸಂಭ್ರಮಿಸುತ್ತಾರೆ.

59

ಈ ಬಾರಿಯ ನವರಾತ್ರಿ ದಸರಾ ಹಬ್ಬದ ಸಡಗರಕ್ಕೆ ಪುತ್ತೂರು ಸಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯೆ ಡಾ. ನಿರುಪಮಾ ಎಸ್. ರೈ ಅವರು ನವರಾತ್ರಿ ವೈಭವದ ಫೋಟೋ ಶೂಟ್ ನಲ್ಲಿ ಮಿಂಚಿದ್ದಾರೆ.
 

69

ಶಾರದಾ ಮಾತೆಯೇ ಧರೆಗೆ ಇಳಿದು ಬಂದಂತೆ ಕಾಣುವ ಡಾ ನಿರುಪಮಾ ರೈ, ಶಾರದಾ ಮಾತೆಯ ಹಲವು ಭಂಗಿಗಳಲ್ಲಿ ಕುಳಿತು ವಿಶಿಷ್ಟವಾಗಿದೆ. 

79

ಇನ್ನು ಫೋಟೋ ಶೂಟ್‌ನಲ್ಲಿ ಪ್ರೊಫೆಷನಲ್ ಬ್ಯೂಟಿ ಪಾರ್ಲರ್ ಆಗಿರುವ ಮಾಲಕಿ ಸ್ವಾತಿ ಮತ್ತು ಅಶ್ವಿನಿ ಪ್ರಸಾದನ ಅವರ ಕೈಚಳಕ ಫೋಟೊ ಸುಂದರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

89

 ನೆರವೇರಿಸಿದ್ದಾರೆ. ಡಾ. ನಿರುಪಮಾ ರೈ ಅವರ ಫೋಟೊ ಶೂಟ್‌ ರೈನ್ ಬೋ ಹಟ್(Rainbowhut) ಸ್ಟುಡಿಯೋಸ್ ನ ಸುಪ್ರೀತ್ ಛಾಯಾಗ್ರಹಣ ನಡೆಸಿದ್ದು, ನವರಂಗ್ ಫೋಟೋಗ್ರಫಿಯ ಚೇತನ್ ಗಾಣಿಗ ಹಾಗೂ ಮದನ್ ಕೊರಿಯಾಗ್ರಫಿ ಅದ್ಭುತವಾಗಿ ನಿರ್ವಹಿಸಿದ್ದಾರೆ.

99

ಅಂದಹಾಗೆ ಡಾ. ನಿರುಪಮಾ ಎಸ್. ರೈ ಅವರು ಈ ಹಿಂದೆ ನವರಾತ್ರಿ ವೈಭವ ಫೋಟೋ ಶೂಟಿನಲ್ಲಿ ಶ್ರೀ ದುರ್ಗೆ ಹಾಗೂ ಶ್ರೀ ಕಾಳಿಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಶಾರದಾಮಾತೆಯಾಗಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories