ಮಿಥುನ ರಾಶಿಗೆ ಬುಧ ಸಂಚಾರ: 3 ರಾಶಿಗಳ ಜೀವನದಲ್ಲಿ ಅಲ್ಲೋಲ ಕಲ್ಲೋಲ! ಸಣ್ಣ ತಪ್ಪಿಗೂ ದೊಡ್ಡ ಅಪಾಯ

Published : May 27, 2026, 02:23 PM IST

ಮೇ 29 ರಂದು ಬುಧ ಗ್ರಹವು ತನ್ನದೇ ಆದ ಮಿಥುನ ರಾಶಿಗೆ ಪ್ರವೇಶಿಸಲಿದೆ. ಈ ಸಂಚಾರದಿಂದಾಗಿ ಈ ರಾಶಿಯವರು ಆರ್ಥಿಕ, ವೃತ್ತಿಪರ ಮತ್ತು ಕೌಟುಂಬಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸಲಿದ್ದು, ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ.

PREV
15
Astrology

ನಮ್ಮ ಆಲೋಚನೆ, ಮಾತುಗಳ ಪ್ರತಿರೂಪವನ್ನು ಬುಧ ಗ್ರಹ ಎಂದು ಹೇಳಲಾಗುತ್ತದೆ. ಒಂದು ವ್ಯವಹಾರ ನಿಜವಾದ ಗ್ರಹವೇ ಬುಧನಾಗಿದ್ದಾನೆ. ಇದೇ ಮೇ 29ರಂದು ಬುಧ ತನ್ನದೇ ರಾಶಿಯಾದ ಮಿಥುನಕ್ಕೆ ಸಂಚರಿಸಲಿದ್ದಾನೆ. ಬುಧ ಗ್ರಹಕ್ಕೆ ಇದು ಶಕ್ತಿಶಾಲಿಯಾದ ಸ್ಥಾನ ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಸಂಚಾರದಿಂದ ಮೂರು ರಾಶಿಯವರು ಅತ್ಯಂತ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸಣ್ ವಿಷಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ. ಆ ಮೂರು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.

25
ಕರ್ಕಾಟಕ

ಕರ್ನಾಟಕ ರಾಶಿಯ 12ನೇ ಮನೆಗೆ ಬುಧ ಪ್ರವೇಶಿಸಲಿದ್ದು, 6ನೇ ಮನೆ ಮೇಲ್ವಿಚಾರಣೆಯಲ್ಲಿದೆ. ಇದರ್ಥ ಅನಗತ್ಯ ಖರ್ಚುಗಳು, ಹೆಚ್ಚು ಶ್ರಮ, ಒತ್ತಡದ ಜೀವನ ನಿಮ್ಮದಾಗಲಿದೆ. ನಿದ್ರಾಹೀನತೆಯಿಂದ ಮಾನಸಿಕವಾಗಿ ಕುಗ್ಗುತ್ತೀರಿ. ಸಹೋದ್ಯೋಗಿಗಳ ಜೊತೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಾಗಿರಿ. ಯಾವುದೇ ಹಣಕಾಸಿನ ಹೂಡಿಕೆ ಅಥವಾ ವ್ಯಾಪಾರ ವಿಸ್ತರಣೆಗೆ ಇದು ಸೂಕ್ತ ಸಮಯವಲ್ಲ.

ಪರಿಹಾರ: ಬುಧವಾರ ಹಸಿರು ತರಕಾರಿ ದಾನ ಮಾಡಿ

35
ಮಕರ ರಾಶಿ

ಆರನೇ ಮನೆಯಲ್ಲಿ ಬುಧ ಇರೋದರಿಂದ ಕೆಲಸದ ಹೊರೆ ಮತ್ತು ಕಚೇರಿಯಲ್ಲಿ ನಿಮ್ಮ ವಿರುದ್ಧ ನಡೆಯುವ ಷಡ್ಯಂತ್ರಗಳು ಹೆಚ್ಚಾಗಲಿವೆ. ಸಹೋದ್ಯೋಗಿಗಳ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಮಾನಸಿಕವಾಗಿ ನೊಂದುಕೊಳ್ಳುತ್ತೀರಿ. ಅನಗತ್ಯ ಖರ್ಷುಗಳಿಂದ ಆರ್ಥಿಕವಾಗಿ ಕುಸಿಯುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಶಿಸ್ತು ಮುಖ್ಯವಾಗಿದ್ದು, ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಪರಿಹಾರ: ಬುಧವಾರ ಉಪವಾಸ ವ್ರತ ಆಚರಿಸಿ, ಸಾತ್ವಿಕ ಆಹಾರ ಸೇವಿಸಿ ಮತ್ತು ಪಾನೀಯ ಕುಡಿಯಿರಿ.

45
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಎಂಟನೇ ಮನೆಗೆ ಬುಧ ಪ್ರವೇಶದಿಂದ ಜೀವನದಲ್ಲಿ ಕೆಲವೊಂದು ಹಠಾತ್ ಬದಲಾವಣೆಗಳುಂಟಾಗುತ್ತವೆ. ಇಷ್ಟು ದಿನ ಉಳಿತಾಯದ ಹಣ ಮಂಜುಗಡ್ಡೆಯಂತೆ ಕರಗಲಿದೆ. ಇದರಿಂದ ಆರ್ಥಿಕವಾಗಿ ಕುಸಿಯುತ್ತೀರಿ. ಕುಟುಂಬದಲ್ಲಿ ಕಹಿ ಘಟನೆಗಳು ನಡೆಯುವ ಸಾಧ್ಯತೆಗಳಿದ್ದು, ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಆತುರದಿಂದ ಯಾವುದೇ ತೀರ್ಮಾನ ಪ್ರಕಟಿಸಬೇಡಿ.ನಿಮ್ಮ ಅಭಿಪ್ರಾಯಗಳನ್ನು ಪ್ರೀತಿಯಿಂದ ವ್ಯಕ್ತಪಡಿಸಿ.

ಪರಿಹಾರ: ಬುಧ ಮಂತ್ರ ಪಠಣೆ ಮಾಡಿ

55
ಮಿಶ್ರಫಲಿತಾಂಶ ಹೊಂದಿರುವ ರಾಶಿ

ವೃಷಭರಾಶಿಯವರಿಗೆ ಏರಿಳಿತದ ಸಮಯವಾಗಲಿದೆ. ಈ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಹೂಡಿಕೆ ಮಾಡುವ ಬದಲು ನೂರು ಬಾರಿ ಯೋಚಿಸಿ. ಪ್ರೀತಿಪಾತ್ರರಾದಿಂದ ದೂರವಾಗುವ ಸಾಧ್ಯತೆಗಳಿದ್ದು, ಮೃದುವಾಗಿ ಮಾತನಾಡಿ. ಬುಧನ ಆಗಮನ ಸಂಬಂಧ ಮತ್ತು ವ್ಯವಹಾರಗಳಲ್ಲಿ ಬದಲಾವಣೆಯನ್ನುಂಟು ಮಾಡುತ್ತದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories