ಭಗವದ್ಗೀತೆಯನ್ನು (Bhagavad Gita) ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ ಇದು ಪ್ರಪಂಚದ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿದೆ. ಭಗವದ್ಗೀತೆಯಲ್ಲಿ ಬರೆಯಲಾದ ಜ್ಞಾನ ಬಹಳ ಉಪಯುಕ್ತ ಮತ್ತು ಜೀವನದ ಪ್ರತಿಯೊಂದು ತಿರುವಿನಲ್ಲಿ ಮಾರ್ಗದರ್ಶನ ನೀಡುತ್ತದೆ. ಈ ಕಾರಣಕ್ಕಾಗಿ, ಭಗವದ್ಗೀತೆಯನ್ನು ಪ್ರತಿಯೊಬ್ಬರು ಓದುವುದು ಅವಶ್ಯಕ ಎಂದು ಹೇಳಲಾಗುತ್ತದೆ.
ಇದಲ್ಲದೆ, ಭಗವದ್ಗೀತೆಯನ್ನು ಹತ್ತಿರದಲ್ಲಿ ಇಡುವುದು ತುಂಬಾ ಪ್ರಯೋಜನ ನೀಡುತ್ತೆ ಎಂದು ನಂಬಲಾಗಿದೆ. ನಮ್ಮಲ್ಲಿ ಕೆಲವರು ಭಗವದ್ಗೀತೆಯನ್ನು ತಮ್ಮ ಪರ್ಸ್ ನಲ್ಲಿಟ್ಟರೆ, ಇನ್ನು ಕೆಲವರು ತಮ್ಮ ಬ್ಯಾಗ್ ನಲ್ಲಿ, ಕಬೋರ್ಡ್ ನಲ್ಲಿ ಇಡುತ್ತಾರೆ. ಅದೇ ಸಮಯದಲ್ಲಿ, ಕೆಲವರು ಭಗವದ್ಗೀತೆಯನ್ನು ತಮ್ಮ ದಿಂಬಿನ ಕೆಳಗೆ ಇಡುತ್ತಾರೆ. ಭಗವದ್ಗೀತೆಯನ್ನು ದಿಂಬಿನ ಕೆಳಗೆ (under the pillow) ಇಡಬೇಕೇ ಅಥವಾ ಬೇಡವೇ ಅನ್ನೋದರ ಬಗ್ಗೆ ತಿಳಿಯೋಣ.
ಭಗವದ್ಗೀತೆಯನ್ನು ದಿಂಬಿನ ಕೆಳಗೆ ಇಟ್ಟರೆ ಏನಾಗುತ್ತದೆ?
ಭಗವದ್ಗೀತೆಯನ್ನು ದಿಂಬಿನ ಕೆಳಗೆ ಇಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಅನೇಕ ಪ್ರಯೋಜನಗಳನ್ನು ಸಹ ಹೊಂದಿದೆ ಆದರೆ ಇದನ್ನು ಇಡೋದಕ್ಕೆ ಕೆಲವು ನಿಯಮಗಳೂ ಇವೆ. ಪ್ರಯೋಜನಗಳ ಬಗ್ಗೆ ಹೇಳೋದಾದರೆ, ಭಗವದ್ಗೀತೆಯನ್ನು ದಿಂಬಿನ ಮೇಲೆ ಇಡುವುದರಿಂದ ನಕಾರಾತ್ಮಕತೆ (negativity) ತೆಗೆದು ಹಾಕುತ್ತದೆ, ನಕಾರಾತ್ಮಕ ಶಕ್ತಿಗಳು ನಿಮ್ಮ ಬಳಿಗೆ ಬರುವುದಿಲ್ಲ.
ಮನಸ್ಸು ಶಾಂತವಾಗಿರುತ್ತದೆ. ಚೆನ್ನಾಗಿ ನಿದ್ರೆ (healthy sleep) ಮಾಡಲು ಸಹಾಯ ಮಾಡುತ್ತೆ ಮತ್ತು ನಿದ್ರೆಯಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಭಗವದ್ಗೀತೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ದುಃಸ್ವಪ್ನಗಳು ಬರೋದಿಲ್ಲ. ಆದರೆ ಇದನ್ನು ಇಡೋದಕ್ಕೆ ಕೆಲವೊಂದು ನಿಯಮಗಳಿವೆ.
ನೀವು ಭಗವದ್ಗೀತೆಯನ್ನು ದಿಂಬಿನ ಕೆಳಗೆ ಇಡುತ್ತಿದ್ದರೆ, ಅದನ್ನು ರೇಷ್ಮೆ ಹಳದಿ ಬಟ್ಟೆಯಲ್ಲಿ (yellow silk clothes) ಇರಿಸಿ. ಎರಡನೆಯ ನಿಯಮವೆಂದರೆ ಮಲಗುವಾಗ ಮಾತ್ರ ಭಗವದ್ಗೀತೆಯನ್ನು ದಿಂಬಿನ ಕೆಳಗೆ ಇರಿಸಿ. ನೀವು ಹಗಲಿನಲ್ಲಿ ಹಾಸಿಗೆಯ ಮೇಲೆ ಕುಳಿತಿದ್ದರೆ, ಭಗವದ್ಗೀತೆಯನ್ನು ದೇವರ ಕೋಣೆ ಅಥವಾ ಶುದ್ಧ ಸ್ಥಳದಲ್ಲಿ ಇರಿಸಿ.
ಭಗವದ್ಗೀತೆಯನ್ನು ದಿಂಬಿನ ಕೆಳಗೆ ಇಡಲು ಬಯಸಿದರೆ, ಆ ಸ್ಥಳದ ಸುತ್ತಲೂ ಆಹಾರ ಮತ್ತು ಪಾನೀಯಗಳೊಂದಿಗೆ ಕುಳಿತುಕೊಳ್ಳಬೇಡಿ. ಹಾಗೆ ಮಾಡುವುದರಿಂದ, ಆ ಪವಿತ್ರ ಗ್ರಂಥವೂ ಅಶುದ್ಧವಾಗುತ್ತದೆ.ಇದರಿಂದಾಗಿ ನೀವು ಪಡೆಯುವ ಶುಭ ಪರಿಣಾಮಗಳು (good effect) ಅಶುಭ ರೂಪವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಮೇಲೆ ಪರಿಣಾಮ ಬೀರಬಹುದು.