ಏಕಾಂತದಲ್ಲಿ ಮಾಡಬೇಕಾದ ಕೆಲಸ ಸೇರಿದಂತೆ ಕಾಗೆಯಿಂದ ಮನುಷ್ಯ ಕಲಿಯಬೇಕಾದ 5 ನೀತಿಗಳು

Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ, ಕಾಗೆಯ 5 ನೀತಿಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವಯುತವಾಗಿ ಮತ್ತು ಯಶಸ್ವಿಯಾಗಿ ಬದುಕಬಹುದು. ಆ ಐದು ಗುಣಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

ಆಚಾರ್ಯ ಚಾಣಕ್ಯ ಅವರು  ಮನುಷ್ಯ ಹೇಗೆ ನೀತಿವಂತನಾಗಿ ಬದುಕುಬೇಕು ಎಂಬುದನ್ನು ತಮ್ಮ ನೀತಿಗಳಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಾಗೆಯ 5 ನೀತಿಗಳನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ  ಆತ ಸಮಾಜದಲ್ಲಿ ಗೌರವಯುತವಾಮಗಿ ಮತ್ತು ಯಶಸ್ವಿ  ಬದುಕು ನಡಿಸಲು ಸಾಧ್ಯವಾಗುತ್ತದೆ.

ಚಾಣಕ್ಯ ಶ್ಲೋಕ (Shloka)
ಗೂಢಂ ಚ ಮೈಥುನಂ ಚರಿತ್ವಂ ಕಾಲೇ  ಕಾಲೇ ಚ ಸಂಗ್ರಹಂ
ಅಪ್ರಮತ್ತನಮವಿಶ್ವಾಸಂ ಪಂಚ ಶಿಕ್ಷೇಚ್ಚ ವಾಯಸಾತ್!


ಶ್ಲೋಕದ ಅರ್ಥ  ಹೀಗಿದೆ
ಈ ಶ್ಲೋಕದಲ್ಲಿ ಪಂಡಿತ ಚಾಣಕ್ಯ ಅವರು ಕಾಗೆಯ ಗುಣಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಕಾಗೆ ಬೇಗ ತಾನಿದ್ದ ಸ್ಥಳದಿಂದ ಓಡಿ ಹೋಗಲ್ಲ. ಒಂದು ಅಗಳು ಆಹಾರ ಕಂಡರೂ ತನ್ನೆಲ್ಲ ಬಳಗವನ್ನು ಕರೆಯುತ್ತದೆ. ಕಾಗೆ ಯಾವುದೇ  ಯಾರನ್ನೂ ಸಂಪೂರ್ಣವಾಗಿ ನಂಬಲ್ಲ. ಹಾಗೆ ಎಲ್ಲ ಸಮಯದಲ್ಲಿಯೂ ತುಂಬಾನೇ ಜಾಗ್ರತವಾಗಿರುತ್ತದೆ ಎಂದು ಈ  ಶ್ಲೋಕದಲ್ಲಿ ತಿಳಿಸಲಾಗಿದೆ.

ಗೂಢಂ ಚ ಮೈಥುನಂ ಅಂದ್ರೆ, ಏಕಾಂತದಲ್ಲಿ  ಸಂ*ಬೋಗ ಮಾಡಬೇಕು. ಹಾಗೆ ಖಾಸಗಿ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದರ್ಥ. ಯಾರ ಮೇಲೆಯೂ ಅತಿಯಾದ ವಿಶ್ವಾಸವಿಡಕೂಡದು. ಕೆಲವೊಮ್ಮೆ ನೀವು  ನಂಬಿದವರೇ ನಂಬಿಕೆದ್ರೋಹಿಗಳಾಗುತ್ತಾರೆ.

ಕಾಗೆಯಿಂದ ಮನುಷ್ಯ ಕಲಿಯಬೇಕಾದ 5 ಗುಣಗಳು
1.ಏಕಾಂತದಲ್ಲಿ ಸಂ*ಭೋಗ ಮಾಡೋದು.
2.ಆಪತ್ಕಾಲಕ್ಕಾಗಿ ಆಹಾರ  ಸಂಗ್ರಹ ಮಾಡಿಕೊಳ್ಳುವುದು
3.ಯಾರನ್ನೂ ಅತಿಯಾಗಿ ನಂಬದಿರೋದು
4.ಸದಾ ಜಾಗೃತರಾಗಿರೋದು
5.ಸಮಪಾಲು, ಹಂಚಿಕೊಂಡು ತಿನ್ನೋದು

Latest Videos

click me!