ಜೂನ್‌ನಲ್ಲಿ 12 ವರ್ಷಗಳ ಬಳಿಕ ಮಹಾಸಂಯೋಗ: ನಾಲ್ಕು ದೈವಿಕ ಯೋಗ, ಯಾವ ರಾಶಿಗೆ ಲಾಭ?

Published : May 25, 2026, 10:03 AM IST

ಬರೋಬ್ಬರಿ 12 ವರ್ಷಗಳ ನಂತರ, ಜೂನ್ ತಿಂಗಳಲ್ಲಿ ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಶುಕ್ರನ ಸಂಯೋಗ ನಡೆಯಲಿದೆ. ಈ ಅಪರೂಪದ ಗ್ರಹ ಸಂಚಾರದಿಂದ ಹಂಸ, ಭದ್ರ, ರುಚಕ್ ಮತ್ತು ಗಜಲಕ್ಷ್ಮೀ ರಾಜಯೋಗಗಳು ಸೃಷ್ಟಿಯಾಗಲಿದ್ದು,4 ರಾಶಿಯವರಿಗೆ ವಿಶೇಷ ಅದೃಷ್ಟವನ್ನು ತರಲಿದೆ.

PREV
16
12 ವರ್ಷಗಳ ನಂತ್ರ ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಶುಕ್ರನ ಸಂಯೋಗ

ಈ ಜೂನ್ ತಿಂಗಳಲ್ಲಿ ಅಪರೂಪ ಮತ್ತು ವಿಶಿಷ್ಟವಾದ ಗ್ರಹಗಳ ಸಂಯೋಗ ನಡೆಯಲಿದ್ದು, ಗುರುವು ಕರ್ಕಾಟಕ ರಾಶಿಗೆ ಸಂಚಾರ ಮಾಡಲಿದ್ದಾನೆ. ಐದು ಮಹಾ ಪುರುಷ ರಾಜಯೋಗಗಳಲ್ಲಿ ಒಂದಾದ ಹಂಸ ರಾಜಯೋಗ ರಚನೆಯಾಗಲಿದೆ. ಬರೋಬ್ಬರಿ 12 ವರ್ಷಗಳ ನಂತ್ರ ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಶುಕ್ರನ ಸಂಯೋಗವಾಗಲಿದೆ. ಜೂನ್ ತಿಂಗಳನ್ನು ಈ ವರ್ಷದ ಅತ್ಯಂತ ಶುಭಕರ ಮಾಸ ಎಂದು ಪರಿಗಣಿಸಲಾಗುತ್ತದೆ.

26
ನಾಲ್ಕು ದೈವಿಕ ರಾಜಯೋಗಗಳು

ಜೂನ್ ಆರಂಭದಿಂದ ಮಿಥುನ ರಾಶಿಯಲ್ಲಿ ಬುಧನ ಉಪಸ್ಥಿತಿಯು ಭದ್ರ ಪಂಚ ಮಹಾಪುರುಷ ಯೋಗವನ್ನು ಸೃಷ್ಟಿಸುತ್ತದೆ. ಮೇಷ ರಾಶಿಯಲ್ಲಿ ಮಂಗಳನ ಉಪಸ್ಥಿತಿಯು ಜೂನ್ 20 ರವರೆಗೆ ರುಚಕ್ ಪಂಚ ಮಹಾಪುರುಷ ರಾಜಯಯೋಗವನ್ನು ಸೃಷ್ಟಿಸುತ್ತದೆ. ಜೂನ್ ತಿಂಗಳು ಮೂರು ಪಂಚ ಮಹಾಪುರುಷ ರಾಜಯೋಗಗಳನ್ನು ಒಳಗೊಂಡಂತೆ ನಾಲ್ಕು ದೈವಿಕ ರಾಜಯೋಗಗಳು ರೂಪಗೊಳ್ಳಲಿವೆ. ಈ ಯೋಗ ರಾಶಿಗಳಿಗೆ ಅದೃಷ್ಟ ನೀಡಲಿವೆ.

36
ಮೇಷ ರಾಶಿಗೆ ರುಚಕ್ ರಾಜಯೋಗದಿಂದ ಲಾಭ

ಮೇಷ ರಾಶಿಯವರಿಗೆ ಜೂನ್ ತಿಂಗಳಲ್ಲಿ ಹಲವು ಲಾಭಗಳನ್ನು ಪಡೆಯುತ್ತಾರೆ. ಗುರು ಮತ್ತು ಶುಕ್ರ ನಾಲ್ಕನೇ ಮನೆಯಲ್ಲಿರುತ್ತಾರೆ. ಇದು ನಿಮಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಸವಾಲಿಕ ಕೆಲಸಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ರಾಜಕೀಯ ಪಕ್ಷಗಳಲ್ಲಿ ನಿಮ್ಮನ್ನು ಗುರುತಿಸಲಾಗುತ್ತದೆ. ಇದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಳವಾಗುತ್ತದೆ.

46
ಮಿಥುನ ರಾಶಿಗೆ ಜೂನ್ ತಿಂಗಳಲ್ಲಿ ಭದ್ರ ರಾಜಯೋಗ

ಜೂನ್ ತಿಂಗಳ ಆರಂಭದಿಂದಲೇ ಮಿಥುನ ರಾಶಿಗೆ ಭದ್ರರಾಜಯೋಗದ ಲಾಭಗಳು ಸಿಗಲಾರಂಭಿಸುತ್ತವೆ. ಹೊಸದನ್ನು ಕಲಿಯುವ ಅವಕಾಶಗಳು ಸಿಗಲಿದ್ದು, ನೀವು ಮಾಡುವ ಕೆಲಸಗಳಲ್ಲಿ ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತೆ. ಹಾಗೆಯೇ ಅನಗತ್ಯ ವೆಚ್ಚಗಳು ಕಡಿಮೆಯಾಗಿ ಹಣ ಉಳಿತಾಯ ಮಾಡಲು ಆರಂಭಿಸುತ್ತೀರಿ. ಜೀವನದಲ್ಲಿ ಸಂತೋಷ ಮೇಲುಗೈ ಸಾಧಿಸುತ್ತದೆ. ಇನ್ನು ವೃತ್ತಿ ಜೀವನ ಹೊಸ ದಿಕ್ಕು ಪಡೆದುಕೊಂಡು ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತೀರಿ.

56
ಕರ್ಕಾಟಕ ರಾಶಿಗೆ ಹಂಸ ರಾಜಯೋಗದಿಂದ ಲಾಭ

ಗುರುವಿನ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಆಶೀರ್ವಾದ ಲಭ್ಯವಾಗುತ್ತದೆ. ಶಿಕ್ಷಣ/ನಿರ್ವಹಣೆ ವಲಯದಲ್ಲಿರುವ ಜನರ ಆದಾಯ ಹೆಚ್ಚಳವಾಗಗುತ್ತದೆ. ನಿಮ್ಮ ವೃತ್ತಿಗೆ ನಿಮಗೆ ಹೊಸತನವನ್ನು ಕಲಿಸುತ್ತದೆ. ಇದು ನಿಮ್ಮ ಆರ್ಥಿಕ ಭವಿಷ್ಯಕ್ಕೆ ಭದ್ರತೆಯನ್ನು ನೀಡಲಿದೆ. ಸಂಬಂಧಿಕರು, ಹಳೆಯ ಗೆಳೆಯರನ್ನು ಭೇಟಿಯಾಗುವ ಸಮಯ ಬರಲಿದೆ. ಹಂಸ ರಾಜಯೋಗದ ಫಲವಾಗಿ ನೀವು ಸುದೀರ್ಘವಾಗಿ ಕಾಯುತ್ತಿರುವ ಯಶಸ್ಸು ನಿಮ್ಮದಾಗುತ್ತದೆ. ಹಾಗೆಯೇ ನಿಮ್ಮಲ್ಲಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳು ಪ್ರವರ್ಧಮಾನಕ್ಕೆ ಬರುತ್ತವೆ.

66
ಮಕರ ರಾಶಿಗೆ ಜೂನ್ ತಿಂಗಳಲ್ಲಿ ಗಜಲಕ್ಷ್ಮೀ ಯೋಗ

ಜೂನ್ ತಿಂಗಳು ಮಕರ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಮಕರ ರಾಶಿಯ ಏಳನೇ ಮನೆಯಲ್ಲಿ ಗುರು ಮತ್ತು ಶುಕ್ರನ ಸಂಚಾರದಿಂದ ಗಜಲಕ್ಷ್ಮಿ ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಮಕರ ರಾಶಿಯವರು ಕೆಲಸದಲ್ಲಿನ ಉನ್ನತ ಸ್ಥಾನಕ್ಕೇರುತ್ತಾರೆ. ವ್ಯಾಪಾರ ಅವಕಾಶಗಳು ಹೆಚ್ಚಾಗಿ ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಕ್ರೀಡಾ ಜಗತ್ತಿನಲ್ಲಿ ನಿಮ್ಮನ್ನು ಗುರುತಿಸಲಾಗುತ್ತದೆ. ನಿಮ್ಮಿಷ್ಟದ ಕಾರ್ಯಕ್ಷೇತ್ರಗಳಲ್ಲಿ ನಿಮ್ಮನ್ನು ಸಾಬೀತುಪಡಿಸಿಕೊಳ್ಳಲು ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಪ್ರೇಮಜೀವನದಲ್ಲಿ ಕೊಂಚ ಮನಸ್ತಾಪ ಉಂಟಾದ್ರೂ, ಸಂಗಾತಿಯೊಂದಿಗೆ ದೀರ್ಘ ಪ್ರಯಾಣ ಬೆಳೆಸುತ್ತೀರಿ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories