Sex Education: ಬೇಕಾ? ಯಾರಿಗೆ? ಯಾವಾಗ?
First Published | Sep 12, 2020, 5:57 PM ISTಈಗಷ್ಟೇ ತೊದಲು ಮಾತು ಆಡಲು ಕಲಿತ ಮಗು, ಅಮ್ಮಾ ನಾನು ಎಲ್ಲಿಂದ ಬಂದೆ, ಎಂದು ಪ್ರಶ್ನಿಸಿದಾಗಲೇ ಮಗುವಿನಲ್ಲಿ ಕಾಣದ ಕುತೂಹಲ ಹುಟ್ಟಿಕೊಂಡಿದೆ ಎಂದರ್ಥ. 'ದೇವರ ಹತ್ತಿರ ಬೇಡಿಕೊಂಡ್ವಿ, ಹೊಟ್ಟೆಯಿಂದ ಹೊರಗೆ ನೀನು ಬಂದಿ, ಆಸ್ಪತ್ರೆಯಿಂದ ತೆಗೆದುಕೊಂಡು ಬಂದೆವು..' ಎಂದು ಹೇಳಿದಾಗ ಆ ಕ್ಷಣದಲ್ಲಿ ಮಗು ಸಮಾಧಾನಗೊಂಡರೂ, ಬುದ್ಧಿ ಬೆಳೆಯುತ್ತಿದ್ದಂತೆ ಲೈಂಗಿಕತೆ ಬಗ್ಗೆ ಮಗುವಿನ ಕುತೂಹಲ ಹೆಚ್ಚುತ್ತಲೇ ಹೋಗುತ್ತದೆ. ಈ ಬಗ್ಗೆ ಅಗತ್ಯ ಅರಿವು ಮೂಡಿಸುವುದು ಪೋಷಕರ ಜವಾಬ್ದಾರಿಯಾದರೂ, ಮಡಿವಂತಿಕೆಯ ಕುಟುಂಬಗಳು ಹಾಗೂ ಸಮಾಜ ಈ ವಿಷಯದ ಬಗ್ಗೆ ಮಾತನಾಡದಂತೆ ಮಾಡಿ ಬಿಡುತ್ತದೆ. ಆದರೆ, ಈ ಜ್ಞಾನವನ್ನು ವಯಸ್ಸಿಗೆ ಅನುಗಣವಾಗಿ, ವೈಜ್ಞಾನಿಕವಾಗಿ ಹೇಳಿ ಕೊಡುವುದನ್ನೇ ಲೈಂಗಿಕ ಶಿಕ್ಷಣ ಎನ್ನುತ್ತಾರೆ. ಇಲ್ಲಿ ದೇಹ, ಅಂಗಾಂಗಳ ಬೆಳವಣಿಗೆ...ಇಂಥ ವಿಷಯಗಳ ಬಗ್ಗೆ ಕಲಿಸಲಾಗುತ್ತದೆಯೇ ಹೊರತು ಲೈಂಗಿಕ ಕ್ರಿಯೆ ಬಗ್ಗೆಯಲ್ಲ. ಅಷ್ಟಕ್ಕೂ ಲೈಂಗಿಕ ಶಿಕ್ಷಣವೆಂದರೇನು, ಇದರ ಅಗತ್ಯವಿದೆಯೇ?