ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಟ್ಯಾಬ್‌

First Published | Dec 25, 2020, 7:41 AM IST

ಬೆಂಗಳೂರು(ಡಿ.25): ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ 21 ಸರ್ಕಾರಿ ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಸಾವಿರ ವಿದ್ಯಾರ್ಥಿಗಳಿಗೆ ಸ್ಥಳೀಯ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಉಚಿತ ಟ್ಯಾಬ್‌ಗಳನ್ನು ವಿತರಿಸಿದ್ದಾರೆ. 

ಕೊರೋನಾ ಕಾರಣದಿಂದ ಡಿಜಿಟಲ್‌ ಕಲಿಕೆ ಅನಿವಾರ್ಯ ಆಗಿರುವುದರಿಂದ ಸರ್ಕಾರಿ ಶಾಲೆ ಮಕ್ಕಳು ಬೋಧನೆ ಮತ್ತು ಕಲಿಕೆಯಲ್ಲಿ ಹಿಂದುಳಿಯಬಾರದು ಎಂದು ಉದ್ದೇಶದಿಂದ ಟ್ಯಾಬ್‌ ವಿತರಿಸಲಾಗಿದೆ. ಟ್ಯಾಬ್‌ ವಿತರಣೆಗೆ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಫೌಂಡೇಶನ್‌, ಆರ್‌.ವಿ. ಶಿಕ್ಷಣ ತರಬೇತಿ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಷನ್‌ ಕೈಜೋಡಿಸಿದೆ.
ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳಲ್ಲಿ ಡಿಜಿಟಲ್‌ ಕಲಿಕಾ ಅಂತರವನ್ನು ಕಡಿಮೆ ಮಾಡುವುದು ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಡಿಜಿಟಲ್‌ ಮತ್ತು ಸ್ಮಾರ್ಟ್‌ ಕಲಿಕೆಗೆ ಒತ್ತು ನೀಡುವುದಕ್ಕೆ ಮಹತ್ವದ ಹೆಜ್ಜೆ ಇಡಲಾಗಿದೆ ಎಂದ ಡಿಸಿಎಂ
Tap to resize

ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ಗಳಲ್ಲಿ ರಾಜ್ಯಮಟ್ಟದ ಪಠ್ಯ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೇರಿದಂತೆ ಕಲಿಕೆಗೆ ಪೂರಕ ಅಂಶಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಆಫ್‌ಲೈನ್‌ನಲ್ಲಿಯೂ ಅಪ್‌ಲೋಡ್‌ ಮಾಡಿರುವ ಕಲಿಕಾ ಅಂಶಗಳು ತೆರೆದುಕೊಳ್ಳಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್‌ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಶಿಕ್ಷಣ ಫೌಂಡೇಶನ್‌ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌, ಸಿಇಒ ಪ್ರಸನ್ನ, ಬೆಂ.ಉತ್ತರ ಜಿಲ್ಲೆಯ ಡಿಡಿಪಿಐ ನಾರಾಯಣ್‌, ಬಿಇಒ ಉಮಾದೇವಿ, ಬಿಬಿಎಂಪಿ ಮಾಜಿ ಸದಸ್ಯ ಜಯಪಾಲ್‌ ಪಾಲ್ಗೊಂಡಿದ್ದರು.

Latest Videos

click me!