ಕ್ಯಾಟ್‌ ಪರೀಕ್ಷೆಯಲ್ಲಿ ಟಾಪ್‌ ಸ್ಕೋರ್ ಪಡೆದು ಪ್ರತಿಷ್ಠಿತ ಕಾಲೇಜು ಸೇರಿದ ಹಾಟ್‌ ಸುಂದರಿ!

First Published Aug 15, 2023, 1:49 PM IST

ಆಕಾಂಕ್ಷಾ ಚೌಧರಿ, ಮಿಸ್ ಇಂಡಿಯಾ ಎಲೈಟ್ 2016 ಕಿರೀಟ ವಿಜೇತೆ. ಮತ್ತು ದೇಶದ ಪ್ರಸಿದ್ಧ ಮಾಡೆಲ್ ಗಳಲ್ಲಿ ಒಬ್ಭಳು. ಭಾರತದ ಉನ್ನತ ವ್ಯವಹಾರಶಾಸ್ತ್ರ ಕಾಲೇಜುಗಳಲ್ಲಿ ಒಂದಾದ IIM ಅಹಮದಾಬಾದ್‌ ಗೆ ಸೇರಲು ಈಗೆ ಕ್ಯಾಟ್ ಪರೀಕ್ಷೆಯಲ್ಲಿ ಶೇ. 98.12 ಉನ್ನತ ಅಂಕ ಸೇರ್ಪಡೆಗೊಂಡರು. 

ತಾನು ಸುಂದರಿ ಮಾತ್ರವಲ್ಲ ಬುದ್ದಿವಂತಳು ಎಂಬುದನ್ನು ಸಾಬೀತು ಪಡಿಸಿದ್ದು ಆಕಾಂಕ್ಷಾ CAT ಪರೀಕ್ಷೆಗೆ ತಯಾರಿ ನಡೆಸಿ ಟಾಪ್ ಸ್ಕೋರ್ ಪಡೆದಾಗ.

ಮಾಡೆಲಿಂಗ್‌ನಲ್ಲಿ ತನ್ನ ಆಸಕ್ತಿಯನ್ನು ಮುಂದುವರಿಸಿರುವುದು ಮಾತ್ರವಲ್ಲ, CAT ಪರೀಕ್ಷೆಯಲ್ಲಿ ಶೇ. 98.12 IIM ಗೆ ಪ್ರವೇಶಿಸಿದರು.

ಆಕಾಂಕ್ಷಾ ಚೌಧರಿ  ಓದಿನ ಬಗ್ಗೆ ಮಾತ್ರ ಗಮನಹರಿಸಲಿಲ್ಲ ಬದಲಾಗಿ  ತನ್ನ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಜೀವಂತವಾಗಿರಿಸಿಕೊಂಡರು.  

ತಾನು ಮಿಸ್ ಇಂಡಿಯಾ ಎಲೈಟ್ ಗೆದ್ದಾಗ ಸಂತಸ ವ್ಯಕ್ತಪಡಿಸಿದ್ದ ರೂಪದರ್ಶಿ ಆಕಾಂಕ್ಷ ನಾನು ಈವೆಂಟ್‌ನಲ್ಲಿ ಸಂಪೂರ್ಣವಾಗಿ ಆಸಕ್ತಿಯಿಂದ ಭಾಗವಹಿಸಿದ್ದೇನೆ. ನಾನು ಗೆಲ್ಲುವ ನಿರೀಕ್ಷೆ ಇರಲಿಲ್ಲ ಎಂದಿದ್ದರು.

 ಮಾಡೆಲಿಂಗ್  ಫಿಟ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಡೆಸಲು   ನನ್ನನ್ನು ಸಿದ್ಧಪಡಿಸಿದೆ. ಸೌಂದರ್ಯದ ಸಾರವು ನಮ್ಮ ಮಕ್ಕಳಲ್ಲಿ ನಾವು ತುಂಬುವ ಮೌಲ್ಯಗಳಲ್ಲಿದೆ. ಫಿಟ್‌ನೆಟ್‌ ಮಾತ್ರವಲ್ಲ ಸಮಯ ನಿರ್ವಹಣೆ ಕೌಶಲ್ಯಗಳು ಕೂಡ ಕಲಿತುಕೊಂಢಿದ್ದೇನೆ ಎಂದಿದ್ದರು.

ಸ್ಪರ್ಧೆಯಲ್ಲಿ ಗೆದ್ದ ನಂತರ ಆಕಾಂಕ್ಷಾ ಚೌಧರಿ ಭಾರತದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೊಸ ಮುಖವಾಗಿ ಮತ್ತಷ್ಟು ಪರಿಚಯವಾದರು. 

ಐಐಎಂ ಅಹಮದಾಬಾದ್‌ನಿಂದ (ಬ್ಯಾಚ್ 2017-19) ಎಂಬಿಎ ಪದವೀಧರರಾಗಿರುವ ಆಕಾಂಕ್ಷಾ ಚೌಧರಿ ಪ್ರಸ್ತುತ ಮೆಕಿನ್ಸೆಯಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಐಐಎಂ ಅಹಮದಾಬಾದ್‌ಗೆ ಸೇರಲು ಆಕೆಯ ಬದ್ಧತೆ, ನಂಬಿಕೆ ಮತ್ತು ಸಮರ್ಪಣಾ ಮನೋಭಾವವೇ ಆಕೆಯನ್ನು ಪರೀಕ್ಷೆಯಲ್ಲಿ ಯಶಸ್ವಿಗೊಳಿಸಿತು. 

ಆಕಾಂಕ್ಷಾ ಚೌಧರಿ ಅವರ ಸಾಧನೆಯು ಅನೇಕ ಜನರಿಗೆ ಒಂದು ಉದಾಹರಣೆಯಾಗಿದೆ. ಛಲ ಇದ್ದರೆ ಗುರಿ ಮುಟ್ಟಲು ಸಾಧ್ಯ ಎಂಬುದು ಇದರಿಂದ ತಿಳಿಯುತ್ತದೆ. 

ಐಐಎಂ ಅಹಮದಾಬಾದ್‌ಗೆ ಸೇರುವ ಮೊದಲು, ಆಕಾಂಕ್ಷಾ ಎಸ್‌ಆರ್‌ಸಿಸಿಯಲ್ಲಿ (ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ದೆಹಲಿ) ತನ್ನ ತರಗತಿಯಲ್ಲಿ ಐದನೇ ಸ್ಥಾನ ಪಡೆದಿದ್ದಳು. 

ಆಕಾಂಕ್ಷ ತನ್ನ ಕಾಲೇಜು ದಿನಗಳಲ್ಲಿ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು. ಮಾತ್ರವಲ್ಲ ಕನಿಕಾ ಕಪೂರ್, ರಣದೀಪ್ ಹೂಡಾ, ಗೌಹರ್ ಖಾನ್ ಮತ್ತು ಜರೀನ್ ಖಾನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದಾರೆ. 

ಆಕಾಂಕ್ಷ ತನ್ನ ಕಾಲೇಜು ದಿನಗಳಲ್ಲಿ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು. ಮಾತ್ರವಲ್ಲ ಕನಿಕಾ ಕಪೂರ್, ರಣದೀಪ್ ಹೂಡಾ, ಗೌಹರ್ ಖಾನ್ ಮತ್ತು ಜರೀನ್ ಖಾನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದಾರೆ. 

click me!