ದಿವಾಳಿಯಾದ ಅಪ್ಪನನ್ನು ಉಳಿಸಿದ ಅನಿಲ್‌ ಅಂಬಾನಿ ಮಕ್ಕಳು ಎಷ್ಟು ಓದಿಕೊಂಡಿದ್ದಾರೆ?

First Published Mar 12, 2024, 1:18 PM IST

ಭಾರತದಲ್ಲಿ ಅಂಬಾನಿ ಕುಟುಂಬ ಪ್ರಸ್ತುತ ಏಷ್ಯಾದ ಶ್ರೀಮಂತ ಕುಟುಂಬವಾಗಿದೆ. ಇತ್ತೀಚೆಗೆ, ಜಾಮ್‌ನಗರದಲ್ಲಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ 3 ದಿನಗಳ ಪೂರ್ವ ವಿವಾಹ ಸಮಾರಂಭವಿತ್ತು.  ಅಂಬಾನಿ ಕುಟುಂಬವು ತಮ್ಮ ಐಷಾರಾಮಿ ಜೀವನಶೈಲಿ, ವ್ಯಾಪಾರ ವ್ಯವಹಾರಗಳು ಮತ್ತು ಪರೋಪಕಾರಿ ಕಾರ್ಯಗಳಿಂದ ಸಾರ್ವಜನಿಕರ ಗಮನವನ್ನು ಸೆಳೆಯುತ್ತದೆ. ಆದರೆ, ಮುಖೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಅವರ ಕುಟುಂಬವು ಜನಮನದಿಂದ ದೂರ ಉಳಿಯಲು ಬಯಸುತ್ತದೆ.

ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಅವರಿಗೆ ಜೈ ಅನ್ಮೋಲ್ ಅಂಬಾನಿ ಮತ್ತು ಜೈ ಅನ್ಶುಲ್ ಅಂಬಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರ ಇಬ್ಬರು ಪುತ್ರರು ಆಗಾಗ ತಮ್ಮ ಹೆತ್ತವರೊಂದಿಗೆ ಗುರುತಿಸಲ್ಪಡುತ್ತಾರೆ. ಡಿಸೆಂಬರ್ 12, 1991 ರಂದು ಮುಂಬೈನಲ್ಲಿ ಜನಿಸಿದ ಜೈ ಅನ್ಮೋಲ್ ಅಂಬಾನಿ ಅನಿಲ್ ಅಂಬಾನಿಯವರ ಹಿರಿಯ ಮಗ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಪ್ರಸಿದ್ಧ ಕ್ಯಾಥೆಡ್ರಲ್ ಮತ್ತು ಜಾನ್ಸ್ ಕಾನ್ವೆಂಟ್ ಶಾಲೆಯಲ್ಲಿ ಪೂರ್ಣಗೊಳಿಸಿದರು.  

ನಂತರ ಅನ್ಮೋಲ್ ಅಂಬಾನಿ ಹೆಚ್ಚಿನ ಶಿಕ್ಷಣಕ್ಕಾಗಿ, ಅವರು ಯುನೈಟೆಡ್ ಕಿಂಗ್‌ಡಂ (UK) ನಲ್ಲಿರುವ ಸೆವೆನ್ ಓಕ್ಸ್ ಶಾಲೆಗೆ ಸೇರಿದರು. ಅನ್ಮೋಲ್ ಚಿಕ್ಕ ವಯಸ್ಸಿನಲ್ಲೇ ಕಂಪೆನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಅಧ್ಯಯನದ ಸಮಯದಲ್ಲಿ, ಅವರು 18 ವರ್ಷ ವಯಸ್ಸಿನವರಾಗಿದ್ದಾಗ ರಿಲಯನ್ಸ್ ಮ್ಯೂಚುವಲ್ ಫಂಡ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದರು. ಓದು ಮುಗಿದ ನಂತರ ರಿಲಯನ್ಸ್ ಮ್ಯೂಚುವಲ್ ಫಂಡ್ ನಲ್ಲಿ ಕೆಲಸ ಮಾಡಲು ಆರಂಭಿಸಿದರು.

2017 ರಲ್ಲಿ, ಅವರು ರಿಲಯನ್ಸ್ ಕ್ಯಾಪಿಟಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ವರದಿಗಳ ಪ್ರಕಾರ, ಜೈ ಅನ್ಮೋಲ್ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು ರೂ. 20,000 ಕೋಟಿ. ಅಂದರೆ 3.3 ಬಿಲಿಯನ್ ಆಗಿದೆ. ಯುವ ಮತ್ತು ಕ್ರಿಯಾತ್ಮಕ ಉದ್ಯಮಿ ರಿಲಯನ್ಸ್ ಕ್ಯಾಪಿಟಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಮಾತ್ರವಲ್ಲದೆ, ಬಹು ವರದಿಗಳ ಪ್ರಕಾರ ರಿಲಯನ್ಸ್ ನಿಪ್ಪಾನ್ ಲೈಫ್ ಅಸೆಟ್ ಮ್ಯಾನೇಜ್ಮೆಂಟ್ (RNAM) ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ (RHF) ನ ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ತಂದೆ ದಿವಾಳಿಯಾದ ನಂತರ ಕುಟುಂಬವನ್ನು ಮರಳಿ ಟ್ರ್ಯಾಕ್ ಗೆ ತರುವ ಜವಾಬ್ದಾರಿಯನ್ನು  ಪುತ್ರ ಜೈ ಅನ್ಮೋಲ್ ವಹಿಸಿಕೊಂಡರು. 

ಮತ್ತೊಂದೆಡೆ, ಜೈ ಅನ್ಶುಲ್ ಅಂಬಾನಿ ಅನಿಲ್ ಅಂಬಾನಿಯ ಕಿರಿಯ ಮಗ.  ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರತಿಷ್ಠಿತ ಅಮೇರಿಕನ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಬ್ಯಾಕಲೌರಿಯೇಟ್  ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ. ಅವರು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಹೆಸರಾಂತ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌  ನಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 

ಸದ್ಯ 28 ವರ್ಷದ ಜೈ ಅನ್ಶುಲ್ ಅಂಬಾನಿ ಪ್ರಸ್ತುತ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಕೆಲಸ ಮಾಡುತ್ತಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಇಟ್ಟಿದ್ದಾರೆ. ರಿಲಯನ್ಸ್ ಮ್ಯೂಚುವಲ್ ಫಂಡ್ ಮತ್ತು ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ತಂದೆ, ಹಿರಿಯ ಸಹೋದರ ಮತ್ತು ಇತರ ಕಂಪನಿ ವ್ಯವಸ್ಥಾಪಕರಿಂದ ತರಬೇತಿ ಪಡೆದಿದ್ದಾರೆ. ಅನ್ಶುಲ್ ರಿಲಯನ್ಸ್ ಇನ್ಫ್ರಾ ಮಂಡಳಿಯಿಂದ ನೇಮಕಾತಿಯಾದ ಆರು ತಿಂಗಳೊಳಗೆ ಹೊರಬಂದರು. ಬಳಿಕ  ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಸೇರಿದ್ದರು.

ವರದಿ ಪ್ರಕಾರ, ಜೈ ಅನ್ಶುಲ್ ಐಷಾರಾಮಿ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಅವರು ಮರ್ಸಿಡಿಸ್ GLK350, ಲಂಬೋರ್ಘಿನಿ ಗಲ್ಲಾರ್ಡೊ, ರೋಲ್ಸ್ ರಾಯ್ಸ್ ಫ್ಯಾಂಟಮ್, ರೇಂಜ್ ರೋವರ್ ವೋಗ್ ಮತ್ತು ಲೆಕ್ಸಸ್ SUV ಅನ್ನು ಒಳಗೊಂಡಿರುವ ಪ್ರಭಾವಶಾಲಿ ಶ್ರೇಣಿಯನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಬೊಂಬಾರ್ಡಿಯರ್ ಗ್ಲೋಬಲ್ ಎಕ್ಸ್‌ಪ್ರೆಸ್ ಎಕ್ಸ್‌ಆರ್‌ಎಸ್, ಬೆಲ್ 412 ಹೆಲಿಕಾಪ್ಟರ್, ಫಾಲ್ಕನ್ 2000 ಮತ್ತು ಫಾಲ್ಕನ್ 7 ಎಕ್ಸ್ ಸೇರಿದಂತೆ ವಿಮಾನಗಳ ಸಮೂಹವನ್ನು ಸಹ ಹೊಂದಿದ್ದಾರೆ. 4.2 ಕೋಟಿ ಮೌಲ್ಯದ ಶೇರ್ ಹೊಂದಿದ್ದಾರೆ ಎನ್ನಲಾಗಿದೆ.

click me!