ಕಲಿಯೋಕೆ ಯಾವ ವಯಸ್ಸಾದ್ರೇನು, ಶಿಕ್ಷಣ ಸಚಿವ ಈಗ ಪಿಯುಸಿ ವಿದ್ಯಾರ್ಥಿ...!

Published : Aug 11, 2020, 08:31 PM ISTUpdated : Aug 11, 2020, 08:35 PM IST

ಜೀವನ ಅಂದ್ರೆ ನಿರಂತರವಾದ ಕಲಿಕೆ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು.ಎಲ್ಲರೂ ಹೇಳುತ್ತಾರೆ, ಕೇಳುತ್ತಲೂ ಇರುತ್ತೇವೆ. ಈ ಮಾತನ್ನು ಶಿಕ್ಷಣ ಸಚಿವರು ನಿಜ ಮಾಡಲು ಹೊರಟಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿದ್ದರೂ ಕನಿಷ್ಠ 12ನೇ ತರಗತಿಯನ್ನಾದರೂ ಪಾಸು ಮಾಡಿಕೊಳ್ಳಬೇಕು ಎಂಬ ಆಸೆ. ಅದಕ್ಕಾಗಿಯೇ ಅವರು ಈ ವಯಸ್ಸಿನಲ್ಲಿ 11ನೇ ತರಗತಿಗೆ ದಾಖಲಾಗಿದ್ದಾರೆ.

PREV
112
ಕಲಿಯೋಕೆ ಯಾವ ವಯಸ್ಸಾದ್ರೇನು, ಶಿಕ್ಷಣ ಸಚಿವ ಈಗ ಪಿಯುಸಿ ವಿದ್ಯಾರ್ಥಿ...!

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಮತ್ತೆ ಪ್ರೂವ್ ಮಾಡಲು ಹೊರಟ್ಟಿದ್ದಾರೆ ಶಿಕ್ಷಣ ಸಚಿವರು

212

ಅವರಿಗೆ 53 ವರ್ಷ ವಯಸ್ಸಾಗಿದ್ದರೂ ಕನಿಷ್ಠ 12ನೇ ತರಗತಿಯನ್ನಾದರೂ ಪಾಸು ಮಾಡಿಕೊಳ್ಳಬೇಕು ಎಂಬ ಉಮೇದು ಈಗ ಬಂದಿದೆ. ಅದರಲ್ಲೂ ಶಿಕ್ಷಣ ಸಚಿವರಾದ ಮೇಲೆ ಈ ಜ್ಞಾನೋದಯವಾಗಿದೆ. ಅದಕ್ಕಾಗಿಯೇ ಅವರು ಈ ವಯಸ್ಸಿನಲ್ಲಿ ಈಗ 11ನೇ ತರಗತಿಗೆ ದಾಖಲಾಗಿದ್ದಾರೆ.

312

ಇವರ ಹೆಸರು ಜಗರ್​ನಾಥ್​ ಮೆಹತೋ. ಇವರು ಜಾರ್ಖಂಡ್​ನ ಶಿಕ್ಷಣ ಸಚಿವರಾಗಿದ್ದಾರೆ. 

412

ಇವರು ಜಾರ್ಖಂಡ್​ನ ಧುಮ್ರಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.

512

ಕೇವಲ 10ನೇ ತರಗತಿ ಪಾಸಾಗಿರುವ ಇವರಿಗೆ ಶಿಕ್ಷಣ ಸಚಿವರಾಗಲು ಏನು ಅರ್ಹತೆ ಇದೆ ಎಂದು ಟೀಕಿಸಿದವರೇ ಹೆಚ್ಚು. ಈ ಎಲ್ಲ ಟೀಕೆಗಳನ್ನು ಮೆಟ್ಟಿನಿಲ್ಲಲು ನಿರ್ಧರಿಸಿದ ಅವರು, 11ನೇ ತರಗತಿಗೆ ದಾಖಲಾಗಲು ಮುಂದಾಗಿದ್ದಾರೆ.

612

ಅದರಂತೆ ಇವರು ಬೊಕಾರೋ ಜಿಲ್ಲೆಯ ನವಾದ್ಹಿಯಲ್ಲಿರುವ ದೇವಿ ಮೆಹತೋ ಸ್ಮಾರಕ್​ ಇಂಟರ್​ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 11ನೇ ತರಗತಿಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ.

712

ನಾನು ನನ್ನ ಶಿಕ್ಷಣವನ್ನು ಪೂರ್ಣಗೊಳಿಸುತ್ತೇನೆ. ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ ನಾನು ತರಗತಿಗಳಿಗೆ ಹಾಜರಾಗುತ್ತೇನೆ. ಶಿಕ್ಷಣ ಮತ್ತು ಕಲಿಕೆಗೆ ವಯಸ್ಸು ಎಂಬುದೇನಿಲ್ಲ. ನಾನು ಏನೇ ಮಾಡಿದರೂ ಅದರಲ್ಲಿ ಜನರಿಗೆ ಸ್ಫೂರ್ತಿ ಉಕ್ಕಿಸುವಂಥ ಕೆಲಸ ಮಾಡುತ್ತೇನೆ ಎಂದು ಹೇಳಿದ್ಧಾರೆ.

812

ಸಚಿವ ಮೆಹತೋ 1995ರಲ್ಲಿ 10ನೇ ತರಗತಿ ಪೂರ್ಣಗೊಳಿಸಿದ್ದಾರೆ.

912

ತೋಲೋದಲ್ಲಿರುವ ನೆಹರು ಪ್ರೌಢಶಾಲೆಯಿಂದ  1995 ರಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು, ಆದರೆ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

1012

ಕಾರೊದಲ್ಲಿನ  ಈ ಶಾಲೆ  2006 ರಲ್ಲಿ ಅವರೇ ಸ್ಥಾಪಿಸಿದ್ದ ಶಾಲೆ ಎನ್ನುವುದು ವಿಶೇಷ

1112

ತಾವು ಕಡಿಮೆ ಓದಿರುವ ಶಿಕ್ಷಣ ಸಚಿವರೆಂದು ಕರೆಸಿಕೊಳ್ಳುವುದರುಂದ ಪಾರಾಗಲು ಮಹತೋ ಇಂಟರ್-ಆರ್ಟ್ಸ್ ವಿದ್ಯಾರ್ಥಿಯಾಗಿ ಶಾಲೆಗೆ ಪ್ರವೇಶ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.

1212

ಅದು ಏನೇ ಇರಲಿ ಈ ವಯಸ್ಸಿನಲ್ಲೂ ಕಲಿಯಬೇಕೆಂಬ ಉತ್ಸಹ ಇದೆ ಅಲ್ಲ ನಿಜಕ್ಕೂ ಗ್ರೇಟ್. ಪಿಯುಸಿಗೆ ಪಾದಾರ್ಪಣೆ ಮಾಡಿರುವ ಶಿಕ್ಷಣ ಸಚಿವರಿಗೆ ಒಳ್ಳೆದಾಗ್ಲಿ...ಆಲ್‌ ದಿ ಬೆಸ್ಟ್ ಉನ್ನತ ಶ್ರೇಣಿಯಲ್ಲಿ ಪಾಸಾಗಿ

click me!

Recommended Stories