ಚೆನ್ನೈ ( ಮೆ 16) ಸಾಮಾಜಿಕ ತಾಣದ ಮೂಲಕ ಲೈಂಗಿಕ ದೌರ್ಜನ್ಯ ಎಸಗುವಂತಹ ಸಂದೇಶ ಕಳಿಸುವುದು ಹೊಸದಾಗಿ ಏನು ಉಳಿದಿಲ್ಲ. ಅಂಥದ್ದೇ ಒಂದು ಕರಾಳ ಘಟನೆಯನ್ನು ಈ ನಟಿ ಬಿಚ್ಚಿಟ್ಟಿದ್ದಾರೆ. ತಮಿಳು ನಟಿ, ನಿರೂಪಕಿ ಸೌಂದರ್ಯ ತಮಗಾದ ಕೆಟ್ಟ ಅನುಭವ ತೆರೆದಿಟ್ಟಿದ್ದಾರೆ. ಪ್ರಾಧ್ಯಾಪಕನೊಬ್ಬ ನಟಿಗೆ ಕೇಳಬಾರದ ಪ್ರಶ್ನೆಗಳನ್ನೆಲ್ಲ ಕೇಳಿದ್ದಾನೆ. ನೀನು ನನ್ನೊಂದಿಗೆ ಮಲಗುತ್ತೀಯಾ? ನಿನಗೆ ಏನು ಬೇಕಾದರೂ ಕೊಡುತ್ತೇನೆ ಎಂದು ಸಂದೇಶ ರವಾನಿಸಿದ್ದ. ಇಂಥ ಸಂದೇಶಕ್ಕೆ ಏನು ಉತ್ತರ ನೀಡಬೇಕು ಎಂದು ಆ ಕ್ಷಣಕ್ಕೆ ತೋಚಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಪೊಲೀಸರು ಇಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಂಥ ವರ್ತನೆ ಸಹಿಸಲು ಅಸಾಧ್ಯ ಎಂದು ನಟಿ ಹೇಳಿದ್ದಾರೆ. ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿರುವ ಸೌಂದರ್ಯ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. Tamil actress Soundarya Nandakumar now exposed a college lecturer who made a pass at her on Instagram. ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಲೆಕ್ಚರರ್