ಸುಶಾಂತ್ ಸಾವು; ಬಿಗ್ ಟ್ವಿಸ್ಟ್ ದಾಖಲೆ ಸುಪ್ರೀಂ ಮುಂದಿಟ್ಟ ವಕೀಲ

First Published | Aug 12, 2020, 2:51 PM IST

ಮುಂಬೈ(ಆ. 12)  ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಹೊಸ ಹೊಸ ಅಂಶಗಳು ದಾಖಲಾಗುತ್ತಲೇ ಇವೆ.  ನ್ಯಾಯಾಧೀಶ ರಾಯ್ ಮುಂದೆ ವಾದ ಮಂಡಿಸಿರುವ ಸುಶಾಂತ್ ಸಿಂಗ್ ಕುಟುಂಬದ ವಕೀಲ ವಿಕಾಸ್ ಸಿಂಗ್ , ಮುಂಬೈ ಪೊಲೀಸರು ಪ್ರಕರಣದ ಸರಿಯಾದ ತನಿಖೆ ಮಾಡಿಲ್ಲ. ಯಾರೋಬ್ಬರು ಸುಶಾಂತ್ ದೇಹವನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿಲ್ಲ ಎಂದು ಹೇಳಿದ್ದಾರೆ.

ಅನತಿ ದೂರದಲ್ಲಿ ಇದ್ದ ಸುಶಾಂತ್ ಸಹೋದರಿ ಸ್ಥಳಕ್ಕೆ ಬರುವವರೆಗೂ ಕಾದಿಲ್ಲ. ಇದೇ ಮಾತನ್ನು ಸುಶಾಂತ್ ಸಿಂಗ್ ತಂದೆ ಸಹ ಆಡಿದ್ದರು. ನಾನು ಪಾಟ್ನಾದಲ್ಲಿ ವಾಸಮಾಡುತ್ತಿದ್ದೇನೆ. ಇಲ್ಲಿಯೇ ದೂರು ದಾಖಲಿಸಿದ್ದೇನೆ. ಪ್ರಕರಣವನ್ನು ಇಲ್ಲಿಂದಲೇ ವಿಚಾರಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
undefined
ಇಲ್ಲಿ ಕೊಲೆ ಆರೋಪ ದಾಖಲಾಗಿದೆ. ಆದರೆ ಕ್ರಮಿನಲ್ ಕಾನೂನೆ ಬೇರೆಯದನ್ನೇ ಹೇಳುತ್ತದೆ ಎಂದು ಅಸಾರಾಮ್ ಬಾಪು ಪ್ರಕರಣದ ಉಲ್ಲೇಖ ಮಾಡಿದ್ದಾರೆ.
undefined

Latest Videos


ಆ ಪ್ರಕರಣದಲ್ಲಿ ಬಾಲಕಿ ರಾಜಸ್ಥಾನದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದರು. ಆದರೆ ಎಫ್ ಐಆರ್ ದಾಖಲಾಗಿದ್ದು ದೆಹಲಿಯಲ್ಲಿ.
undefined
ನಂತರ ಪ್ರಕರಣವನ್ನು ಉತ್ತರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
undefined
ಸುಶಾಂತ್ ಸಿಂಗ್ ಜತೆ ಅವರ ತಂದೆ-ತಂಗಿ ಯಾರೂ ಇರಲಿಲ್ಲ. ಅವರು ಸುಶಾಂತ್ ಜತೆ ಮಾತನಾಡಲು ಯತ್ನಿಸಿದರೆ ರಿಯಾ ಚಕ್ರವರ್ತಿ ಅವಕಾಶ ಮಾಡಿಕೊಡುತ್ತಿರಲಿಲ್ಲ.
undefined
ಸುಶಾಂತ್ ಸಿಂಗ್ ಕುತ್ತಿಗೆ ಮೇಲೆ ಇದ್ದ ಮಾರ್ಕ್ ಹಗ್ಗದಿಂದ ಆದದ್ದು ಅಲ್ಲ. ಅದು ಬೆಲ್ಟ್ ನಿಂದ ಆದ ಗುರುತು. ಹಾಗಾಗಿ ಆಳ ತನಿಖೆ ಅಗತ್ಯ ಎಂದು ವಾದ ಮುಂದಿಟ್ಟಿದ್ದಾರೆ.
undefined
ಮಹಾರಾಷ್ಟ್ರ ಸರ್ಕಾರ ಸಲ್ಲಿಕೆ ಮಾಡಿರುವ ಅಫಿಡವಿಟ್ ದಾರಿ ತಪ್ಪಿಸುವಂತೆ ಇದೆ. ಮುಂಬೈ ಪೊಲೀಸರು ತನಿಖೆ ಮಾಡುವುದರ ಬದಲಿಗೆ ವಿಳಂಬ ಮಾಡುತ್ತಿದ್ದಾರೆ.
undefined
ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಯಾವ ಪ್ರಭಾವ ಇರಬಾರದು ಎಂದು ಮನವಿ ಮಾಡಿದ್ದಾರೆ. ಪ್ರಕರಣವನ್ನು ಮೇಲ್ನೋಟದಲ್ಲಿ ನೋಡಿ ಆತ್ಮಹತ್ಯೆ ಎಂದು ಶರಾ ಬರೆದಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
undefined
click me!