ಆಕೆಗೆ ಗಂಡನಿಲ್ಲ, ಈತನಿಗೆ ಹೆಂಡತಿ ಬೇಕಿಲ್ಲ; ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ನಡೆದೇ ಹೋಯ್ತು ದುರಂತ!

Published : Dec 02, 2025, 03:43 PM IST

ಬೆಂಗಳೂರಿನಲ್ಲಿ ದಾರುಣ ಘಟನೆ! ನಡತೆಯ ಮೇಲಿನ ಅನುಮಾನದಿಂದ ಲಿವ್-ಇನ್ ಸಂಗಾತಿಯನ್ನು ಕೊಲೆಗೈದು, ಪ್ರಿಯಕರ ಆತ್ಮಹ*ತ್ಯೆಗೆ ಶರಣಾಗಿದ್ದಾನೆ. ಘಟನೆಯ ಸಂಪೂರ್ಣ ವಿವರ ತಿಳಿಯಲು ಓದಿ.

PREV
15
ಆಕೆಗೆ ಗಂಡನಿಲ್ಲ, ಈತನಿಗೆ ಹೆಂಡ್ತಿ ಬೇಕಿಲ್ಲ

ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆಕೆಯ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯು ತಾನೂ ಆತ್ಮಹ*ತ್ಯೆಗೆ ಶರಣಾಗಿದ್ದಾನೆ. ಮಹಿಳೆಯ ನಡತೆಯ ಬಗ್ಗೆ ಅನುಮಾನಗೊಂಡು ಇಬ್ಬರ ನಡುವೆ ನಡೆದ ಜಗಳವೇ ಈ ದಾರುಣ ಅಂತ್ಯಕ್ಕೆ ಕಾರಣ ಎನ್ನಲಾಗಿದೆ.

ಕೊಲೆಯಾದ ಮಹಿಳೆಯನ್ನು ಲಲಿತಾ (49) ಎಂದು ಗುರುತಿಸಲಾಗಿದೆ. ಆಕೆಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಲಕ್ಷ್ಮಿನಾರಾಯಣ (51) ಎಂದು ಗುರುತಿಸಲಾಗಿದೆ.

25
ಸಂಬಂಧ ಮತ್ತು ಜಗಳದ ಹಿನ್ನೆಲೆ

ಈ ಘಟನೆ ನಡೆದ ನಂತರ ಲಕ್ಷ್ಮಿನಾರಾಯಣ ಮತ್ತು ಲಲಿತಾ ನಡುವಿನ ಸಂಬಂಧದ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಲಕ್ಷ್ಮಿನಾರಾಯಣ ತನ್ನ ಮೊದಲ ಪತ್ನಿಯನ್ನು ತೊರೆದು ಲಲಿತಾಳೊಂದಿಗೆ ವಾಸಿಸುತ್ತಿದ್ದನು.ಲಲಿತಾಳ ಪತಿ ನಿಧನರಾದ ಬಳಿಕ, ಆಕೆ ಲಕ್ಷ್ಮಿನಾರಾಯಣನೊಂದಿಗೆ ಜೀವನ ಸಾಗಿಸುತ್ತಿದ್ದಳು. ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಲಕ್ಷ್ಮಿನಾರಾಯಣನು ಲಲಿತಾಳ ನಡತೆಯ ಬಗ್ಗೆ ಪದೇ ಪದೇ ಸಂಶಯ ವ್ಯಕ್ತಪಡಿಸಿ ಜಗಳವಾಡುತ್ತಿದ್ದನು. ಈ ಜಗಳಗಳು ನಿರಂತರವಾಗಿ ಹೆಚ್ಚಾಗಿದ್ದವು.

35
ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ

ಭಾನುವಾರ ರಾತ್ರಿ (ಡಿ.01) ಇಬ್ಬರ ನಡುವೆ ಮತ್ತೊಮ್ಮೆ ಜಗಳ ತಾರಕಕ್ಕೇರಿತ್ತು. ಕೋಪದಿಂದ ಲಕ್ಷ್ಮಿನಾರಾಯಣ, ಲಲಿತಾಳ ಕುತ್ತಿಗೆಯನ್ನು ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆಕೆ ಸಾವನ್ನಪ್ಪಿದ್ದನ್ನು ಖಚಿತಪಡಿಸಿಕೊಂಡ ನಂತರ, ಲಕ್ಷ್ಮಿನಾರಾಯಣನು ಮನೆಯೊಳಗೆ ತಾನೂ ಸಹ ಆತ್ಮಹ*ತ್ಯೆಗೆ ಶರಣಾಗಿದ್ದಾನೆ.

45
ಬಾಗಿಲು ತೆರೆಯದ ಜೋಡಿ

ಸೋಮವಾರ (ಡಿ.02) ಬೆಳಗ್ಗೆಯಾದರೂ ಮನೆಯ ಬಾಗಿಲು ತೆಗೆದಿರುವುದನ್ನು ಗಮನಿಸಿದ ನೆರೆಹೊರೆಯವರಿಗೆ ಅನುಮಾನ ಬಂದಿದೆ. ಅವರು ಮನೆ ಒಳಗೆ ಹೋಗಿ ನೋಡಿದಾಗ, ಲಲಿತಾ ಕೊಲೆಯಾಗಿರುವುದು ಮತ್ತು ಲಕ್ಷ್ಮಿನಾರಾಯಣ ಆತ್ಮಹ*ತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

55
ರಾಜಗೋಪಾಲನಗರ ಠಾಣೆಯ ಪೊಲೀಸರು ಭೇಟಿ

ಸ್ಥಳಕ್ಕೆ ತಕ್ಷಣವೇ ರಾಜಗೋಪಾಲನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅನೈತಿಕ ಸಂಬಂಧ, ಅನುಮಾನ ಮತ್ತು ಮನಸ್ತಾಪಗಳು ಒಂದು ಸುಂದರ ಕುಟುಂಬದ ಈ ದಾರುಣ ಅಂತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.

Read more Photos on
click me!

Recommended Stories