ಟಿ20 ವಿಶ್ವಕಪ್ ವೇಳೆ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ದೆಹಲಿಯ ತಮ್ಮ ನಿವಾಸದಲ್ಲಿ ತಂಡಕ್ಕೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ, ಗಂಭೀರ್ ಜೊತೆ ಅವರ ಪತ್ನಿ ನತಾಶಾ ಕೂಡ ತಂಡಕ್ಕೆ ಆತ್ಮೀಯ ಸ್ವಾಗತ ಕೋರಿದರು.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ಅಂದ್ರೆ, ಅದು ವಿಶ್ವ ಕ್ರಿಕೆಟ್‌ನ ಅತ್ಯಂತ ಗ್ಲಾಮರಸ್ ಪಾತ್ರಗಳಲ್ಲಿ ಒಂದು. ಭಾರತದ ಮಾಜಿ ಓಪನರ್ ಮತ್ತು ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಸದ್ಯ ಟೀಂ ಇಂಡಿಯಾದ ಹೆಡ್ ಕೋಚ್ ಆಗಿದ್ದಾರೆ. ಗಂಭೀರ್ ಜಾಗತಿಕವಾಗಿ ಪ್ರಸಿದ್ಧ ಕ್ರಿಕೆಟಿಗರಾಗಿದ್ದರೂ, ಅವರ ಪತ್ನಿ ನತಾಶಾ ಜೈನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಗಂಭೀರ್ ಅವರ ವೃತ್ತಿಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿರುವ ನತಾಶಾ ಜೈನ್ ಬಗ್ಗೆ ವಿವರವಾಗಿ ತಿಳಿಯೋಣ.
26
ನತಾಶಾ ಜೈನ್ ಅಲಿಯಾಸ್ ನತಾಶಾ ಗಂಭೀರ್
ನತಾಶಾ ಜೈನ್ ಅಲಿಯಾಸ್ ನತಾಶಾ ಗಂಭೀರ್, ಪಂಜಾಬ್‌ನ ಅಮೃತಸರದ ಒಂದು ಉದ್ಯಮಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ನತಾಶಾ ಜೈನ್ ಜುಲೈ 26, 1984 ರಂದು ಜನಿಸಿದರು. ಅವರ ತಂದೆ ರವೀಂದ್ರ ಜೈನ್ ಒಬ್ಬ ಪ್ರಸಿದ್ಧ ಉದ್ಯಮಿ. ನತಾಶಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (BBA) ಪದವಿ ಪಡೆದಿದ್ದಾರೆ. 2007 ರಿಂದ ಗೌತಮ್ ಗಂಭೀರ್ ಮತ್ತು ನತಾಶಾ ನಡುವೆ ಪ್ರೇಮಾಂಕುರವಾಗಿತ್ತು ಎಂದು ಹಳೆಯ ವರದಿಗಳು ಹೇಳುತ್ತವೆ. 2011 ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ನಂತರ, ಇಬ್ಬರೂ ಖಾಸಗಿ ಸಮಾರಂಭದಲ್ಲಿ ಮದುವೆಯಾದರು.
36
ಗಂಭೀರ್ ಅವರ ನೆರಳಾಗಿರುವ ನತಾಶಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಗೌತಮ್ ಗಂಭೀರ್ ಕ್ರಿಕೆಟಿಗರಾಗಿದ್ದಾಗ ಮತ್ತು ಈಗ ತರಬೇತುದಾರರಾದಾಗಲೂ ಅವರಿಗೆ ಅತಿ ಹೆಚ್ಚು ಬೆಂಬಲ ನೀಡಿದ್ದು ನತಾಶಾ. ಗಂಭೀರ್-ನತಾಶಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅನೇಕ ಭಾರತೀಯ ಕ್ರಿಕೆಟಿಗರ ಪತ್ನಿಯರು ದೊಡ್ಡ ಸೆಲೆಬ್ರಿಟಿಗಳಾಗಿ ಮೆರೆಯುತ್ತಿರುವಾಗ, ನತಾಶಾ ಜೈನ್ ಯಾವಾಗಲೂ ತಮ್ಮ ಖಾಸಗಿತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ.
ಭಾರತ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ ಗಂಭೀರ್ ಫ್ಯಾಮಿಲಿ
ಟಿ20 ವಿಶ್ವಕಪ್ 2026ರ ವೇಳೆ ಟೀಮ್ ಇಂಡಿಯಾ ದೆಹಲಿಗೆ ಬಂದಾಗ, ಗೌತಮ್ ಗಂಭೀರ್ ಭಾರತೀಯ ಆಟಗಾರರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ನತಾಶಾ ಗಂಭೀರ್ ಅವರ ಆತಿಥ್ಯ ಮತ್ತು ನಾಯಕತ್ವದ ಗುಣಗಳು ಎಲ್ಲರ ಗಮನ ಸೆಳೆದವು. ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಭಾರತೀಯ ಆಟಗಾರರು, ಮೋರ್ನೆ ಮಾರ್ಕೆಲ್ ಸೇರಿದಂತೆ ಸಹಾಯಕ ಸಿಬ್ಬಂದಿ ಮತ್ತು ಇತರ ಮ್ಯಾನೇಜ್‌ಮೆಂಟ್ ಸದಸ್ಯರನ್ನು ನತಾಶಾ ಆತ್ಮೀಯವಾಗಿ ಮನೆಗೆ ಸ್ವಾಗತಿಸಿದರು. ಇಡೀ ಟೀಂ ಇಂಡಿಯಾವನ್ನು ಪರಿಚಯಿಸಿಕೊಂಡು, ತಮ್ಮ ಮಕ್ಕಳನ್ನೂ ಪರಿಚಯಿಸಿದರು.
56
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನತಾಶಾ
ನತಾಶಾ ಗಂಭೀರ್ ಅವರಿಗೆ ಡೈಮಂಡ್ ಡಿಸೈನಿಂಗ್ ಮತ್ತು ಅಡುಗೆಯಲ್ಲಿ ಹೆಚ್ಚಿನ ಪರಿಣತಿ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಎರಡು ದಶಕಗಳಿಂದ ಗೌತಮ್ ಗಂಭೀರ್ ಅವರ ಅತಿದೊಡ್ಡ ಶಕ್ತಿ ನತಾಶಾ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನತಾಶಾ ಗಂಭೀರ್, ತಮ್ಮ ಕುಟುಂಬ ಮತ್ತು ಮಕ್ಕಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
66
ಟಿ20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ
ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ ಟೀಂ ಇಂಡಿಯಾ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ತಂಡವನ್ನು ಮಣಿಸಿ ಭರ್ಜರಿಯಾಗಿ ಶುಭಾರಂಭ ಮಾಡಿದೆ. ಇದೀಗ ಫೆಬ್ರವರಿ 12ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಗಂಭೀರ್ ಮನೆಗೆ ಭೇಟಿ ಆತಿಥ್ಯ ಸ್ವೀಕರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.