ಕೊಹ್ಲಿಯ 10ನೇ ತರಗತಿ ಮಾರ್ಕ್ಸ್‌ಶೀಟ್ ವೈರಲ್: ಇಂಗ್ಲಿಷ್‌ನಲ್ಲಿ ವಿರಾಟ್ ಸ್ಕೋರ್ ಎಷ್ಟು?

Published : Apr 15, 2025, 12:57 PM ISTUpdated : May 17, 2025, 11:44 AM IST

ವಿರಾಟ್ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಎಲ್ಲಾ ಮಾದರಿಗಳಲ್ಲಿ ಸ್ಥಿರತೆಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಬ್ಯಾಟರ್‌ನ 10ನೇ ತರಗತಿ ಮಾರ್ಕ್ಸ್‌ಶೀಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಅವರ ಶೈಕ್ಷಣಿಕ ಸಾಧನೆಯ ಒಂದು ನೋಟ ಸಿಕ್ಕಿದೆ.

PREV
19
ಕೊಹ್ಲಿಯ 10ನೇ ತರಗತಿ ಮಾರ್ಕ್ಸ್‌ಶೀಟ್ ವೈರಲ್: ಇಂಗ್ಲಿಷ್‌ನಲ್ಲಿ ವಿರಾಟ್ ಸ್ಕೋರ್ ಎಷ್ಟು?

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವೈರಲ್ ಆಗಿದೆ.

29

RCB ರನ್ ಮಷೀನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿ, ಐಪಿಎಲ್‌ನಲ್ಲಿ ಮೊದಲ ಸಲ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಡುವ ಕನಸು ಕಾಣುತ್ತಿದ್ದಾರೆ.

39
Virat Kohli

ಸಚಿನ್ ತೆಂಡೂಲ್ಕರ್ ಮತ್ತು ಧೋನಿ ನಂತರ, ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತನ್ನು ಆಳುತ್ತಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

49

ವಿರಾಟ್ ಕೊಹ್ಲಿ X ಮತ್ತು Instagram ನಂತಹ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

59

ವಿರಾಟ್ ಕೊಹ್ಲಿ ರಾಜಸ್ಥಾನ ರಾಯಲ್ಸ್ ಎದುರು ಅರ್ಧಶತಕ ಬಾರಿಸುತ್ತಿದ್ದಂತೆಯೇ. ಟಿ20 ಕ್ರಿಕೆಟ್‌ನಲ್ಲಿ 100 ಅರ್ಧ ಶತಕಗಳನ್ನು ಗಳಿಸಿದ ಜಗತ್ತಿನ ಎರಡನೇ ಆಟಗಾರ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

69

ಇನ್ನು ಇದೀಗ ವಿರಾಟ್‌ ಕೊಹ್ಲಿಯ ಎಸ್‌ಎಸ್‌ಎಲ್‌ಸಿ ಮಾರ್ಕ್‌ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಾವ ಸಬೆಕ್ಟ್‌ನಲ್ಲಿ ಎಷ್ಟು ಮಾರ್ಕ್ಸ್ ತೆಗೆದುಕೊಂಡಿದ್ದಾರೆ ನೋಡೋಣ ಬನ್ನಿ.

79

ವಿರಾಟ್ ಕೊಹ್ಲಿ ತಮ್ಮ 10ನೇ ತರಗತಿಯಲ್ಲಿ, ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ಗಣಿತದಲ್ಲಿ 51 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 69.8 ಪ್ರತಿಶತ.

89

ಇನ್ನು ಟೀಂ ಇಂಡಿಯಾ ಲೆಜೆಂಡ್ ವಿರಾಟ್ ಕೊಹ್ಲಿ ಸೈನ್ಸ್ & ಟೆಕ್ನಾಲಜಿಯಲ್ಲಿ 55, ಸಮಾಜ ವಿಜ್ಞಾನದಲ್ಲಿ 81 ಹಾಗೂ ಇಂಟ್ರೋಡಕ್ಟರಿಯಲ್ಲಿ 74 ಅಂಕಗಳನ್ನು ಪಡೆದುಕೊಂಡಿದ್ದಾರೆ.

99
Image Credit: ANI

ವಿರಾಟ್ ಕೊಹ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೂ, ಅವರು ಪ್ರವೇಶಿಸಿದ ಕ್ರಿಕೆಟ್ ಕ್ಷೇತ್ರದಲ್ಲಿ ಜಗತ್ತಿನ ನಂಬರ್ 1 ಕ್ರಿಕೆಟಿಗನಾಗುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

Read more Photos on
click me!

Recommended Stories