ಬೆಂಗಳೂರು(ಆ. 06) ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಟ್ವಿಟರ್ ಖಾತೆಯಿಂದ ಟ್ವಿಟರ್ ಬ್ಲೂ ಟಿಕ್ ತೆಗೆದು ಹಾಕಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಯಾವ ಉದ್ದೇಶಕ್ಕೆ ಟ್ವಿಟರ್ ಈ ರೀತಿ ಮಾಡಿದೆ ಎನ್ನುವುದು ಗೊತ್ತಾಗಿಲ್ಲ. ಪ್ರಸಿದ್ಧ ವ್ಯಕ್ತಿಗಳ ಅಧಿಕೃತ ಖಾತೆ ಎಂದು ತಿಳಿಸಲು ಬ್ಲೂ ಟಿಕ್ ನೀಡಲಾಗುತ್ತದೆ. ಎಂಎಸ್ ಧೋನಿ ಟ್ವಿಟರ್ ನಲ್ಲಿ 8.2 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಧೋನಿ ಜನವರಿ ಎಂಟರಂದು ಕೊನೆಯದಾಗಿ ಟ್ವೀಟ್ ಮಾಡಿದ್ದರು. 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕ್ಯಾಪ್ಟನ್ ಕೂಲ್ ವಿದಾಯ ಹೇಳಿದ್ದರು. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಿಕೊಂಡು ಬಂದಿದ್ದು ಟ್ರೋಫಿ ಜಯಿಸಿದ ದಾಖಲೆ ಇದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ವಿಜೇತ ತಂಡವಾಗಿ ಹೊರಹೊಮ್ಮಿತ್ತು. Twitter removes blue verified badge from Cricketer Captain Cool MS Dhoni's account ಎಂಎಸ್ ಧೋನಿ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ತೆಗೆದ ಸಂಸ್ಥೆ