ಸೆಹ್ವಾಗ್, ಯುವಿ, ಪಾಂಡ್ಯ, ಧೋನಿಯೂ ಮಾಡದ ಅಪರೂಪದ ರೆಕಾರ್ಡ್‌ ವೇಗಿ ಅಗರ್ಕರ್‌ ಹೆಸರಿನಲ್ಲಿದೆ..!

Suvarna News   | Asianet News
Published : Dec 14, 2020, 04:50 PM IST

ಬೆಂಗಳೂರು: ಕ್ರಿಕೆಟ್‌ನಲ್ಲಿ ಪ್ರತಿದಿನ ಒಂದಲ್ಲ ಒಂದು ರೆಕಾರ್ಡ್ ನಿರ್ಮಾಣವಾಗುತ್ತವೆ, ಇನ್ನೊಮ್ಮೆ ಆ ರೆಕಾರ್ಡ್‌ಗಳು ಬ್ರೇಕ್ ಆಗುತ್ತವೆ. ಕಳೆದ 20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಒಂದು ರೆಕಾರ್ಡ್‌ ಅನ್ನು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಬ್ರೇಕ್‌ ಮಾಡಲು ಸಾಧ್ಯವಾಗಿಲ್ಲ. ಹೌದು, ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಇಂದಿಗೂ(ಡಿ.14-2020) ಒಬ್ಬ ಬೌಲರ್‌ ಹೆಸರಿನಲ್ಲಿದೆ. ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ವಿರೇಂದ್ರ ಸೆಹ್ವಾಗ್, ಎಂ ಎಸ್ ಧೋನಿ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯಗೆ ಮಾಡಲಾಗದ ದಾಖಲೆ ಟೀಂ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್ಕರ್ ಹೆಸರಿನಲ್ಲಿದೆ. ಇಂದಿಗೆ(ಡಿ.14-2020) ಸರಿಯಾಗಿ 20 ವರ್ಷಗಳ ಹಿಂದೆ ಅಜಿತ್‌ ಅಗರ್ಕರ್ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ್ದರು. ಭಾರತ ಪರ ಅತಿವೇಗವಾಗಿ ಅರ್ಧಶತಕ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.  

PREV
110
ಸೆಹ್ವಾಗ್, ಯುವಿ, ಪಾಂಡ್ಯ, ಧೋನಿಯೂ ಮಾಡದ ಅಪರೂಪದ ರೆಕಾರ್ಡ್‌ ವೇಗಿ ಅಗರ್ಕರ್‌ ಹೆಸರಿನಲ್ಲಿದೆ..!

5. ಕಪಿಲ್ ದೇವ್: 22 ಎಸೆತ

5. ಕಪಿಲ್ ದೇವ್: 22 ಎಸೆತ

210

1983ರ ಏಕದಿನ ವಿಶ್ವಕಪ್‌ನಲ್ಲಿ ನಾಯಕರಾಗಿದ್ದ ಕಪಿಲ್ ದೇವ್ ವೆಸ್ಟ್‌ ಇಡೀಸ್‌ ವಿರುದ್ದ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

1983ರ ಏಕದಿನ ವಿಶ್ವಕಪ್‌ನಲ್ಲಿ ನಾಯಕರಾಗಿದ್ದ ಕಪಿಲ್ ದೇವ್ ವೆಸ್ಟ್‌ ಇಡೀಸ್‌ ವಿರುದ್ದ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

310

4.ವಿರೇಂದ್ರ ಸೆಹ್ವಾಗ್: 22 ಎಸೆತ

4.ವಿರೇಂದ್ರ ಸೆಹ್ವಾಗ್: 22 ಎಸೆತ

410

ವಿಸ್ಪೋಟಕ ಬ್ಯಾಟ್ಸ್‌ಮನ್ ಸೆಹ್ವಾಗ್, 2001ರಲ್ಲಿ ಕೀನ್ಯಾ ವಿರುದ್ದ ನಡೆದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಕಪಿಲ್ ದೇವ್ ದಾಖಲೆ ಸರಿಗಟ್ಟಿದ್ದರು.

ವಿಸ್ಪೋಟಕ ಬ್ಯಾಟ್ಸ್‌ಮನ್ ಸೆಹ್ವಾಗ್, 2001ರಲ್ಲಿ ಕೀನ್ಯಾ ವಿರುದ್ದ ನಡೆದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಕಪಿಲ್ ದೇವ್ ದಾಖಲೆ ಸರಿಗಟ್ಟಿದ್ದರು.

510

3. ರಾಹುಲ್ ದ್ರಾವಿಡ್: 22 ಎಸೆತ

3. ರಾಹುಲ್ ದ್ರಾವಿಡ್: 22 ಎಸೆತ

610

'ದ ವಾಲ್‌' ಖ್ಯಾತಿಯ ದ್ರಾವಿಡ್ 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು.

'ದ ವಾಲ್‌' ಖ್ಯಾತಿಯ ದ್ರಾವಿಡ್ 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು.

710

2. ಯುವರಾಜ್ ಸಿಂಗ್: 22 ಎಸೆತ

2. ಯುವರಾಜ್ ಸಿಂಗ್: 22 ಎಸೆತ

810

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 2004ರಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 50 ರನ್ ಚಚ್ಚುವುದರ ಮೂಲಕ ಮೇಲಿನ ಮೂವರು ಬ್ಯಾಟ್ಸ್‌ಮನ್‌ಗಳ ದಾಖಲೆ ಸರಿಗಟ್ಟಿದ್ದರು.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 2004ರಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 50 ರನ್ ಚಚ್ಚುವುದರ ಮೂಲಕ ಮೇಲಿನ ಮೂವರು ಬ್ಯಾಟ್ಸ್‌ಮನ್‌ಗಳ ದಾಖಲೆ ಸರಿಗಟ್ಟಿದ್ದರು.

910

1. ಅಜಿತ್ ಅಗರ್ಕರ್: 21 ಎಸೆತ

1. ಅಜಿತ್ ಅಗರ್ಕರ್: 21 ಎಸೆತ

1010

ಅಚ್ಚರಿಯಾದರೂ ಸತ್ಯ, ಅಜಿತ್ ಅಗರ್ಕರ್, 2000ನೇ ಇಸವಿಯಲ್ಲಿ ಜಿಂಬಾಬ್ವೆ ವಿರುದ್ಧ ರಾಜ್‌ಕೋಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಭಾರತ ಪರ ದಾಖಲೆ ನಿರ್ಮಿಸಿದ್ದ, ಇದಾಗಿ 20 ವರ್ಷ ಕಳೆದರೂ ಆ ದಾಖಲೆ ಅಗರ್ಕರ್ ಹೆಸರಿನಲ್ಲಿಯೇ ಇದೆ.

click me!

Recommended Stories