ಬೆಂಗಳೂರು: ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಕರ್ಟ್ನಿ ವಾಲ್ಶ್ ವಿಕೆಟ್ ದಾಖಲೆ ಹಿಂದಿಕ್ಕಿದ್ದಾರೆ. ಬನ್ನಿ ನಾವಿಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 10 ಬೌಲರ್‌ಗಳು ಯಾರು ಎನ್ನುವುದನ್ನು ನೋಡೋಣ
ದಕ್ಷಿಣ ಆಫ್ರಿಕಾದ ಸ್ಪೀಡ್ ಗನ್ ಎಂದೇ ಗುರುತಿಸಿಕೊಂಡಿದ್ದ ಮಾರಕ ವೇಗಿ ಡೇಲ್ ಸ್ಟೇನ್ ವೇಗ & ನಿಖರವಾದ ದಾಳಿಗೆ ಹೆಸರುವಾಸಿಯಾಗಿದ್ದರು. ಸ್ಟೇನ್ ಟೆಸ್ಟ್ ಕ್ರಿಕೆಟ್‌ನಲ್ಲಿ 439 ವಿಕೆಟ್ ಕಬಳಿಸುವ ಮೂಲಕ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
210
09. ಕರ್ಟ್ನಿ ವಾಲ್ಶ್:
ಕರ್ಟ್ನಿ ವಾಲ್ಶ್ 2000ದಿಂದ 2004ರ ವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದರು. ವಾಲ್ಶ್ 519 ವಿಕೆಟ್ ಕಬಳಿಸಿ ಸದ್ಯ 9ನೇ ಸ್ಥಾನದಲ್ಲಿದ್ದಾರೆ.
310
08. ರವಿಚಂದ್ರನ್ ಅಶ್ವಿನ್:
ಟೀಂ ಇಂಡಿಯಾ ಆಫ್ ಸ್ಪಿನ್ನರ್ ಅಶ್ವಿನ್, ಸದ್ಯ 522 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
410
07. ನೇಥನ್ ಲಯನ್:
ಆಸೀಸ್ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ ಮನಮೋಹಕ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುತ್ತಾ ಬಂದಿದ್ದು, ಇದುವರೆಗೂ ನೇಥನ್ ಲಯನ್ 530 ವಿಕೆಟ್ ಕಬಳಿಸಿದ್ದಾರೆ.
510
06. ಗ್ಲೆನ್ ಮೆಗ್ರಾಥ್:
ಬ್ರಿಯನ್ ಲಾರಾ, ಸಚಿನ್ ತೆಂಡುಲ್ಕರ್ ಅವರಂತಹ ದಿಗ್ಗಜ ಬ್ಯಾಟರ್‌ಗಳ ನಿದ್ದೆಗೆಡಿಸಿದ್ದ ಆಸೀಸ್ ವೇಗಿ ಮೆಗ್ರಾಥ್ 563 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಗರಿಷ್ಟ ಟೆಸ್ಟ್ ವಿಕೆಟ್ ಕಬಳಿಸಿದ ಪಟ್ಟಿಯಲ್ಲಿ ಮೆಗ್ರಾಥ್ 6ನೇ ಸ್ಥಾನದಲ್ಲಿದ್ದಾರೆ.
610
05. ಸ್ಟುವರ್ಟ್ ಬ್ರಾಡ್:
ಟಿ20 ವಿಶ್ವಕಪ್‌ನಲ್ಲಿ ಯುವಿಯಿಂದ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿಸಿಕೊಂಡಿದ್ದ ಬ್ರಾಡ್, ಆ ಬಳಿಕ ಕಮ್‌ಬ್ಯಾಕ್ ಮಾಡಿದ ರೀತಿ ನಿಜಕ್ಕೂ ಸ್ಪೂರ್ತಿಯೇ ಸರಿ. ಬ್ರಾಡ್ 604 ವಿಕೆಟ್ ಕಬಳಿಸುವ ಮೂಲಕ 5ನೇ ಸ್ಥಾನದಲ್ಲಿದ್ದಾರೆ.
710
04. ಅನಿಲ್ ಕುಂಬ್ಳೆ:
ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿದ ಕೇವಲ ಮೂರು ಬೌಲರ್‌ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಕನ್ನಡಿಗ ಅನಿಲ್ ಕುಂಬ್ಳೆ 619 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ಟೆಸ್ಟ್ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
810
03. ಜೇಮ್ಸ್ ಆಂಡರ್‌ಸನ್:
ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಕಬಳಿಸಿದ ಏಕೈಕ ವೇಗಿ ಎನಿಸಿಕೊಂಡಿರುವ ಇಂಗ್ಲೆಂಡ್ ಮಾಜಿ ಬೌಲರ್ ಜೇಮ್ಸ್ ಆಂಡರ್‌ಸನ್ 704 ವಿಕೆಟ್ ಕಬಳಿಸುವ ಮೂಲಕ ಮೂರನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.
910
02. ಶೇನ್ ವಾರ್ನ್:
ಆಸೀಸ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಎಂತಹದ್ದೇ ಪಿಚ್‌ನಲ್ಲಾದರೂ ಚೆಂಡನ್ನು ಗಿರಗಿರನೆ ತಿರುಗಿಸುವಷ್ಟು ಚಾಣಾಕ್ಷ ಬೌಲರ್. ಲೆಗ್‌ಸ್ಪಿನ್ನರ್ ವಾರ್ನ್ 708 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.
1010
01. ಮುತ್ತಯ್ಯ ಮುರುಳೀಧರನ್:
ಕಳೆದ ಒಂದೂವರೆ ದಶಕದಿಂದಲೂ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಲಂಕಾದ ಮುತ್ತಯ್ಯ ಮುರುಳೀಧರನ್ ನಂ.1 ಸ್ಥಾನದಲ್ಲೇ ಭದ್ರವಾಗಿದ್ದಾರೆ. ಈ ದಾಖಲೆ ಬ್ರೇಕ್ ಆಗೋದು ಸದ್ಯಕ್ಕಂತೂ ತೀರಾ ಅನುಮಾನ.