IPL 2026: ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ

Published : Feb 13, 2026, 05:18 PM IST

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 2026ರ ಐಪಿಎಲ್ ಟೂರ್ನಿಗೆ ತಂಡದ ನೂತನ ನಾಯಕನ ಹೆಸರು ಘೋಷಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ. 

PREV
16
ರಾಜಸ್ಥಾನ ರಾಯಲ್ಸ್ ಚೊಚ್ಚಲ ಐಪಿಎಲ್ ಚಾಂಪಿಯನ್

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹೊಸ ನಾಯಕನ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಅಚ್ಚರಿಯ ರೀತಿಯಲ್ಲಿ ರಿಯಾನ್ ಪರಾಗ್ ಅವರಿಗೆ ರಾಯಲ್ಸ್ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ.

26
ರಾಜಸ್ಥಾನ ರಾಯಲ್ಸ್‌ಗೆ ಹೊಸ ನಾಯಕನ ಎಂಟ್ರಿ

ಕಳೆದ ಕೆಲ ವರ್ಷಗಳಿಂದ ಕೇರಳ ಮೂಲದ ಸಂಜು ಸ್ಯಾಮ್ಸನ್, ನಾಯಕನಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಸಂಜು ಸ್ಯಾಮ್ಸನ್, ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಜಾರಿದ್ದರು. ಹೀಗಾಗಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿತ್ತು.

36
2019ರಲ್ಲಿ ಪರಾಗ್ ಐಪಿಎಲ್‌ಗೆ ಪಾದಾರ್ಪಣೆ

ರಿಯಾನ್ ಪರಾಗ್ 2019ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಕಳೆದ ಏಳು ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದರಿಂದ, ಪರಾಗ್ ಏಳು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು.

46
ಕಳೆದ ಬಾರಿ ನಾಯಕನಾಗಿ 7 ಪಂದ್ಯಗಳನ್ನು ಮುನ್ನಡೆಸಿದ್ದ ಪರಾಗ್

ಆ ಏಳು ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್ ತಂಡವು 5 ಪಂದ್ಯಗಳಲ್ಲಿ ಸೋತು, ಕೇವಲ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು. ಆದರೆ ಪರಾಗ್ ನಾಯಕನಾಗಿ 38.57ರ ಸರಾಸರಿಯಲ್ಲಿ ರನ್ ಗಳಿಸಿ ಫ್ರಾಂಚೈಸಿ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

56
84 IPL ಮ್ಯಾಚ್ ಆಡಿರುವ ರಿಯಾನ್ ಪರಾಗ್

ಇದುವರೆಗೂ ಐಪಿಎಲ್‌ನಲ್ಲಿ 84 ಪಂದ್ಯಗಳನ್ನಾಡಿರುವ ರಿಯಾನ್ ಪರಾಗ್, 141.84ರ ಸರಾಸರಿಯಲ್ಲಿ 1566 ರನ್ ಸಿಡಿಸಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಿಯಾನ್ ಪರಾಗ್, ರಾಜಸ್ಥಾನ ರಾಯಲ್ಸ್ ತಂಡವನ್ನು ಯಾವ ರೀತಿ ಮುನ್ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

66
ರವೀಂದ್ರ ಜಡೇಜಾಗೆ ನಿರಾಸೆ:

ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ರಾಜಸ್ಥಾನ ರಾಯಲ್ಸ್‌ ತೆಕ್ಕೆಗೆ ಜಾರಿದ ರವೀಂದ್ರ ಜಡೇಜಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಂಡದ ನಾಯಕರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಹಿರಿಯ ಆಟಗಾರನನ್ನು ಬಿಟ್ಟು ಪರಾಗ್‌ಗೆ ಪಟ್ಟ ಕಟ್ಟಿದ್ದರ ಪರಿಣಾಮ ಏನಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories