ಮಳೆಯಿಂದ ಸ್ಥಗಿತಗೊಂಡ ಪಂಜಾಬ್-ಮುಂಬೈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಪ್ರಯೋಜನವಾಗುತ್ತಾ?

Published : Jun 01, 2025, 09:16 PM IST

ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯ ಟಾಸ್ ಬೆನ್ನಲ್ಲೇ ಮಳೆಯಿಂದ ಸ್ಥಗಿತಗೊಂಡಿದೆ. ಈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಲಾಭವಾಗುತ್ತಾ? ಲಾಭ ನಷ್ಟದ ಲೆಕ್ಕಾಚಾರವೇನು?

PREV
15

ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಪಡ್ಡಿಸಿದೆ. ಈ ಪಂದ್ಯದ ಟಾಸ್ ಬೆನ್ನಲ್ಲೇ ಮಳೆ ವಕ್ಕರಿಸಿದೆ. ಹೀಗಾಗಿ ಪಂದ್ಯ ಸ್ಥಗಿತಗೊಂಡಿದೆ. ಒಮ್ಮೆ ಸಂಪೂರ್ಣ ನಿಂತಿದ್ದ ಮಳೆ ಮತ್ತೆ ವಕ್ಕರಿಸಿ ಅವಾಂತರ ಸೃಷ್ಟಿಸಿದೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡಲು ಮಳೆ ಅವಕಾಶ ಕೊಡುತ್ತಿಲ್ಲ. ಮಳೆಯಿಂದ ಈ ಪಂದ್ಯ ರದ್ದಾದರೆ ಈರ್‌ಸಿಬಿಗೆ ಪ್ರಯೋಜನವಾಗುತ್ತಾ?

25

ಪಂದ್ಯ ರದ್ದಾದರೆ ಪಂಜಾಬ್‌ಗೆ ಪೈನಲ್ ಟಿಕೆಟ್

ಆರ್‌ಸಿಬಿ ಅಭಿಮಾನಿಗಳ ಚಿತ್ತ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೇಲಿದೆ. ಕಾರಣ ಈ ಪಂದ್ಯದಲ್ಲಿ ಗೆದ್ದ ತಂಡ ಆರ್‌ಸಿಬಿಗೆ ಫೈನಲ್ ಪಂದ್ಯದಲ್ಲಿ ಎದುರಾಳಿಯಾಗಲಿದೆ. ಆದರೆ ಈ ಪಂದ್ಯ ಮಳೆಯಿಂದ ರದ್ದಾದರೆ ಮೀಸಲು ದಿನ ಇಲ್ಲ. ಹೀಗಾಗಿ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದ ತಂಡ ಫೈನಲ್ ಪ್ರವೇಶ ಪಡೆಯಲಿದೆ. ಹೀಗಾದರೆ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶ ಮಾಡಲಿದೆ. ಪಂದ್ಯ ರದ್ದು ಹಾಗೂ ಆರ್‌ಸಿಬಿಗೆ ಆಗೋ ಲಾಭದ ಕುರಿತು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

35

ಪಂಜಾಬ್ ಮುಂಬೈ ಇಂಡಿಯನ್ಸ್ ಪಂದ್ಯ ರದ್ದಾದರೆ ಆರ್‌ಸಿಬಿಗೆ ಆಗೋ ಲಾಭವೇನು?

ಆರ್‌ಸಿಬಿ ಅಭಿಮಾನಿಗಳು ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರಾಳಿಯಾಗಲಿ ಎಂದು ಕೆಲವರು ಬಯಸಿದ್ದಾರೆ. ಕಾರಣ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದರೆ ಪ್ರಶಸ್ತಿ ಗೆಲ್ಲಲಿದೆ. ಇಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದರೆ ಹಣ ಬಲ ತೋಳ್ಬಲ ಅವರಿಗೆ ನೆರವಾಗಲಿದೆ ಎಂದು ಚರ್ಚೆ ನಡೆಯುತ್ತಿದೆ. ಹೀಗಾಗಿ ಹಲವರು ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಲಿ ಎಂದು ಹಾರೈಸುತ್ತಿದ್ದಾರೆ. ಇತ್ತ ಕೆಲ ಅಭಿಮಾನಿಗಳು ಯಾರೇ ಬರಲಿ, ಬಲಿಷ್ಠ ತಂಡ ಹೊಡೆದು ಪ್ರಶಸ್ತಿ ಗೆಲ್ಲಬೇಕು ಎಂದು ಆತ್ಮವಿಶ್ವಾಸದಲ್ಲಿದ್ದಾರೆ.

45

ಆರ್‌ಸಿಬಿ-ಪಂಜಾಬ್ ಫೈನಲ್ ಆಡುತ್ತಾ?

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಅದ್ಭುತ ಬೌಲಿಂಗ್ ದಾಳಿ ನಡೆಸಿದೆ. 14.1 ಓವರ್‍‍ನಲ್ಲಿ 101 ರನ್‌ಗೆ ಪಂಜಾಬ್ ತಂಡವನ್ನು ಆಲೌಟ್ ಮಾಡಲಾಗಿತ್ತು. ಬಳಿಕ ಆರ್‌ಸಿಬಿ ಕೇವಲ 10 ಓವರ್‌ಗೆ ಈ ಗುರಿ ಚೇಸ್ ಮಾಡಿತ್ತು. 8 ವಿಕೆಟ್ ಭರ್ಜರಿ ಗೆಲುವಿನ ಮೂಲಕ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು.

55

ಲೀಗ್ ಹಂತದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಪ್ ಹಂತಕ್ಕೆ ಪ್ರವೇಶ ಪಡೆದಿತ್ತು. 14 ಲೀಗ್ ಪಂದ್ಯದಲ್ಲಿ 9 ಪಂದ್ಯದಲ್ಲಿ ಗೆಲುವು ಕಂಡಿತ್ತು. 4 ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡರೆ, 1 ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು.

Read more Photos on
click me!

Recommended Stories