PSL 2023: ಲಕ್ಷಾಂತರ ಮೌಲ್ಯದ 8 ಭದ್ರತಾ ಕ್ಯಾಮರಾಗಳನ್ನೇ ಕದ್ದೊಯ್ದ ಖದೀಮರು..! ಇದು ಪಾಕ್ ಹಣೆಬರಹ

Published : Feb 26, 2023, 03:39 PM IST

ಲಾಹೋರ್(ಫೆ.26): ಪಾಕಿಸ್ತಾನದಲ್ಲಿ ಸದ್ಯ ಎಂಟನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿ ನಡೆಯುತ್ತಿದೆ. ಇದೀಗ ಪಿಎಸ್‌ಎಲ್ ಟೂರ್ನಿಯಲ್ಲಿ ಕಳ್ಳತನದ ಪ್ರಕರಣವೊಂದು ನಡೆದಿದೆ. ಕೇವಲ ಸಿಸಿಟಿವಿ ಮಾತ್ರವಲ್ಲ, ಲಕ್ಷಾಂತರ ಮೌಲ್ಯದ ಉಪಕರಣಗಳನ್ನು ಖದೀಮರು ಲೂಟಿ ಹೊಡೆದಿದ್ದಾರೆ. ಪಾಕಿಸ್ತಾನದ ಭದ್ರತೆ ಜಗತ್ತಿನ ಮುಂದೆ ಬೆತ್ತಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

PREV
16
PSL 2023: ಲಕ್ಷಾಂತರ ಮೌಲ್ಯದ 8 ಭದ್ರತಾ ಕ್ಯಾಮರಾಗಳನ್ನೇ ಕದ್ದೊಯ್ದ ಖದೀಮರು..! ಇದು ಪಾಕ್ ಹಣೆಬರಹ

ಇಲ್ಲಿನ ಗಢಾಫಿ ಮೈದಾನದಲ್ಲಿ ಅಳವಡಿಸಲಾಗಿದ್ದ 8 ಭದ್ರತಾ ಕ್ಯಾಮರಾಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಹೀಗಾಗಿ ಪಿಎಸ್‌ಎಲ್‌ನಲ್ಲಿ ಕ್ರಿಕೆಟ್‌ ಹೊರತಾದ ಕಳ್ಳತನದ ಸುದ್ದಿಯೊಂದು ಹೆಚ್ಚು ಗಮನ ಸೆಳೆದಿದೆ. 

26

ಹೌದು, ಖದೀಮರು ಕೇವಲ ಭದ್ರತಾ ಕ್ಯಾಮರಾಗಳು ಮಾತ್ರವಲ್ಲ, ಕೆಲವು ಜನರೇಟರ್ ಬ್ಯಾಟರಿಗಳು, ಫೈಬರ್ ಕೇಬಲ್‌ಗಳು, ಸಿಸಿಟಿವಿ ರೆಕಾರ್ಡ್‌ ಫೋಟೇಜ್‌ಗಳಿಗೆ ಅಗತ್ಯವಿರುವ ಉಪಕರಣಗಳು, ಪಿಎಸ್‌ಎಲ್ ಪಂದ್ಯದ ಮಾನಿಟರಿಂಗ್ ಸಿಸ್ಟಂಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಸುದ್ದಿಯಾಗಿದೆ.

36

ಈ ಕಳ್ಳತನ ಮಾಡಿದ ಎಲ್ಲಾ ಉಪಕರಣಗಳು ಲಕ್ಷಾಂತರ ರುಪಾಯಿ ಬೆಲೆಬಾಳುವಂತಹವುಗಳಾಗಿವೆ ಎನ್ನಲಾಗುತ್ತಿದೆ. ಇನ್ನು ಮೈದಾನದ ಹೊರಗಡೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ಖದೀಮರ ಕೈಚಳಕ ಬೆಳಕಿಗೆ ಬಂದಿದೆ.

46

ಈ ಕುರಿತಂತೆ ಗುಲ್ಬರ್ಗ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕಿತ ಆರೋಪಿಗಳ ಮೇಲೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
 

56

ಆದರೆ ಈ ವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇದೊಂದು ಅಸಹಜ ಪ್ರಕರಣವಾಗಿದ್ದು, ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪಾಕಿಸ್ತಾನ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
 

66

ಈ ಕಳ್ಳತನ ಪ್ರಕರಣ ನಡೆದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಲಾಹೋರ್ ಹಾಗೂ ರಾವುಲ್ಪಿಂಡಿಯಲ್ಲಿ ಪಿಎಸ್‌ಎಲ್ ಪಂದ್ಯಗಳನ್ನು ಆಯೋಜನೆಯ ಕುರಿತಂತೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ.

Read more Photos on
click me!

Recommended Stories