Published : Apr 13, 2020, 02:41 PM ISTUpdated : Apr 13, 2020, 02:51 PM IST
ಭಾರತದಿಂದ ಪಾಕಿಸ್ತಾನ ಇಬ್ಬಾಗಾದ ಸಮಯದಿಂದಲೂ ಉಭಯ ದೇಶಗಳ ನಡುವಿನ ಸಂಬಂಧ ನೆಟ್ಟಗಿಲ್ಲ. 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲಾ ವ್ಯವಹಾರಗಳು ಬಂದ್ ಆಗಿದೆ. ಇದರಲ್ಲಿ ಪ್ರಮುಖವಾಗಿ ಕ್ರಿಕೆಟ್. ಇದೀಗ ಶಾಹಿದ್ ಆಫ್ರಿದಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪುನರ್ ಆರಂಭಕ್ಕೆ ನರೇಂದ್ರ ಮೋದಿ ಸರ್ಕಾರ ಅಡ್ಡಿಯಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಭಾರತೀಯರಿಗೆ ಪರೋಕ್ಷವಾಗಿ ಸೂಚನೆಯನ್ನು ನೀಡಿದ್ದಾರೆ.