IPL 2021: ಕೆಕೆಆರ್ ಸ್ಟಾರ್ ಆಟಗಾರನಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ.!

Published : Apr 01, 2021, 07:19 PM IST

14ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ ಇದೆ. ಇದರ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ಆಟಗಾರನಿಗೆ ಕೊರೋನಾ ಅಂಟಿಕೊಂಡಿದೆ. ಇದೀಗ ತಂಡದ ಇತರ ಆಟಗಾರರಿಗೂ ಆತಂಕ ಎದುರಾಗಿದೆ. 

PREV
17
IPL 2021: ಕೆಕೆಆರ್ ಸ್ಟಾರ್ ಆಟಗಾರನಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ.!

ಎಪ್ರಿಲ್ 9 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. 14ನೇ ಆವೃತ್ತಿಗೆ ಇನ್ನು ಕೆಲ ದಿನಗಳು ಮಾತ್ರ ಬಾಕಿ. ಇದರ ನಡುವೆ ಪ್ರತಿ ತಂಡಕ್ಕೆ ಕೆಲ ಆತಂಕ ಎದುರಾಗಿದೆ. ಆದರೆ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆತಂಕದ ಜೊತೆಗೆ ತೀವ್ರ ಹಿನ್ನಡೆಯಾಗಿದೆ.

27

ಕೆಕೆಆರ್ ತಂಡ ಈಗಾಗಲೇ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದೆ. ಆದರೆ ತಂಡದ ಆಟಗಾರ ನಿತೀಶ್ ರಾಣಾಗೆ ಕೊರೋನಾ ತಗುಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಇದು ಕೆಕೆಆರ್ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ.

37

ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ರಿಲಾಕ್ಸ್ ಮೂಡ್‌ನಲ್ಲಿದ್ದ ನಿತೀಶ್ ರಾಣಾ ಗೋವಾಗೆ ತೆರಳಿದ್ದರು. ಗೋವಾದಿಂದ ವಾಪಸ್ ಬಂದ ಬೆನ್ನಲ್ಲೇ ಕೊರೋನಾ ಪಾಸಿಟೀವ್ ರಿಪೋರ್ಟ್ ಬಂದಿದೆ.

47

ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ, ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆಡಿದ್ದ ನಿತೀಶ್ ರಾಣಾ ಇದೀಗ ಐಸೋಲೇಶನ್‌ಗೆ ಒಳಗಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

57

ನಿತೀಶ್ ರಾಣಾ ಕೆಕೆಆರ್ ತಂಡದಿಂದ ದೂರ ಉಳಿದಿದ್ದು, ಮುಂಬೈನ ಖಾಸಗಿ ಹೊಟೆಲ್‌ನಲ್ಲಿ ಐಸೋಲೇಶನ್‌ಗೆ  ಒಳಗಾಗಿದ್ದಾರೆ. ಇನ್ನು ವೈದ್ಯರ ತಂಡ ರಾಣಾಗೆ ಚಿಕಿತ್ಸೆ ನೀಡುತ್ತಿದೆ.

67

ಕೆಕೆಆರ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ನಿತೀಶ್ ರಾಣಾ ಕಳೆದ ನಾಲ್ಕು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರತಿ ಆವೃತ್ತಿಯಲ್ಲೂ 300ಕ್ಕಿಂತಲೂ ಹೆಚ್ಚಿನ ರನ್ ಸಿಡಿಸಿದ್ದಾರೆ.

77

2020ರ ಐಪಿಎಲ್ ಟೂರ್ನಿಯಲ್ಲಿ ನಿತೀಶ್ ರಾಣಾ ಹೆಚ್ಚು ಅಬ್ಬರಿಸದಿದ್ದರೂ 352 ರನ್ ಸಿಡಿಸಿದ್ದರು. ಇದೀಗ ನಿತೀಶ್‌ಗೆ ಕೊರೋನಾ ವಕ್ಕರಿಸಿರುವ ಕಾರಣ ನಿತೀಶ್ ಜೊತೆ ಸಂಪರ್ಕದಲ್ಲಿದ್ದ ಇತರರ ಆಟಗಾರರಿಗೂ ಪರೀಕ್ಷೆ ಮಾಡಿಸಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories