15 ನಿಮಿಷದಲ್ಲಿ ಆರ್‌ಸಿಬಿ ಉದ್ಘಟನಾ ಪಂದ್ಯದ ಟಿಕೆಟ್ ಸೋಲ್ಡ್ ಔಟ್, ಅಭಿಮಾನಿಗಳ ಆಕ್ರೋಶ

Published : Mar 25, 2026, 07:47 AM IST

15 ನಿಮಿಷದಲ್ಲಿ ಆರ್‌ಸಿಬಿ ಉದ್ಘಟನಾ ಪಂದ್ಯದ ಟಿಕೆಟ್ ಸೋಲ್ಡ್ ಔಟ್, ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದಾರೆ. ನೆಚ್ಚಿನ ತಂಡದ ಪಂದ್ಯ ನೋಡಲು ಕಾತರಗೊಂಡಿದ್ದ ಸಾವಿರಾರು ಅಭಿಮಾನಿಗಳಿಗೆ ಟಿಕೆಟ್ ಸಿಕ್ಕಿಲ್ಲ. 

PREV
16
ಆರ್‌ಸಿಬಿ ಉದ್ಘಟನಾ ಪಂದ್ಯ

ಐಪಿಎಲ್ 2026 ಟೂರ್ನಿಗೆ ಕೆಲವೇ ದಿನ ಮಾತ್ರ ಬಾಕಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸದಲ್ಲಿ ನಿರತವಾಗಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಉದ್ಘಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ದ ಹೋರಾಟ ನಡೆಸಲಿದೆ. ಉದ್ಘಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ.

26
15 ನಿಮಿಷದಲ್ಲಿ ಟಿಕೆಟ್ ಖಾಲಿ ಖಾಲಿ

2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರಗೊಂಡಿದ್ದಾರೆ. ನಿನ್ನೆ (ಮಾ.24) ಆರ್‌ಸಿಬಿ ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಆದರೆ ಟಿಕೆಟ್ ಬಿಡುಗಡೆಗೊಂಡ ಕೇವಲ 15 ನಿಮಿಷದಲ್ಲಿ ಎಲ್ಲಾ ಟಿಕೆಟ್ ಮಾರಾಟವಾಗಿದೆ. ಹೀಗಾಗಿ ಕಳೆದೊಂದು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಇಷ್ಟೇ ಅಲ್ಲ ಆಕ್ರೋಶ ಹೊರಹಾಕಿದ್ದಾರೆ.

36
ಆರ್‌ಸಿಬಿ ಟಿಕೆಟ್ ಕನಿಷ್ಠ ದರ ಎಷ್ಟು?

ಇತರ ಎಲ್ಲಾ ತಂಡಗಳ ಪಂದ್ಯದ ಟಿಕೆಟ್ ದರಕ್ಕೆ ಹೋಲಿಸಿದರೆ ಆರ್‌ಸಿಬಿ ಟಿಕೆಟ್ ದರ ದುಬಾರಿ. ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯದ ಟಿಕೆಟ್ ಕನಿಷ್ಠ 3750 ರೂಪಾಯಿ, ಗರಿಷ್ಠ ದರ 47,000 ರೂಪಾಯಿ. ಈ ಟಿಕೆಟ್‌ಗಳು ನಿನ್ನೆ ಬಿಡುಗಡೆಯಾಗಿತ್ತು. ಆದರೆ ಈ ಟಿಕೆಟ್‌ಗಳು ಅಷ್ಟೇ ವೇಗದಲ್ಲಿ ಮಾರಾಟವಾಗಿದೆ.

46
11 ಸೀಟು ರಿಸರ್ವ್

ಆರ್‌ಸಿಬಿ ಮೊದಲ ಪಂದ್ಯದ ಟಿಕೆಟ್ ಮಾರಾಟವಾಗಿದೆ. ಆದರೆ 11 ಸೀಟಗಳ ಟಿಕೆಟ್ ರಿಸರ್ವ್ ಮಾಡಲಾಗಿದೆ. ಕಳೆದ ಬಾರಿ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ 11 ಅಭಿಮಾನಿಗಳು ಮೃತಪಟ್ಟಿದ್ದರು. ಇವರ ನೆನಪು ಹಾಗೂ ಗೌರವ ನಮನಕ್ಕಾಗಿ ಆರ್‌ಸಿಬಿ ಪ್ರತಿ ಪಂದ್ಯದಲ್ಲಿ 11 ಟಿಕೆಟ್ ಕಾಯ್ದಿರಿಸಲಿದೆ. ಈ ಆಸನದಲ್ಲಿ ಅಭಿಮಾನಿಗಳು ಹೆಸರು ಬರೆದು ಖಾಲಿ ಇಡಲಾಗುತ್ತದೆ.

56
ಉದ್ಘಾಟನಾ ಪಂದ್ಯದಲ್ಲಿ ಮೌನಾಚರಣೆ

ಉದ್ಘಟನಾ ಪಂದ್ಯದಲ್ಲಿ ಆರ್‌ಸಿಬಿ ಮೃತ ಅಭಿಮಾನಿಗಳಿಗೆ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಿದೆ. ಇಷ್ಟೇ ಅಲ್ಲ ಅಭ್ಯಾಸದ ವೇಳೆ ಆರ್‌ಸಿಬಿ ಆಟಗಾರರು 11 ನಂಬರ್ ಜರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಆರ್‌ಸಿಬಿ ಕ್ರಿಕೆಚಿಗರು ಮೃತ ಅಭಿಮಾನಿಗಳಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

66
ಮಾರ್ಚ್ 28ಕ್ಕೆ ಐಪಿಎಲ್ 2026 ಆರಂಭ

ಮಾರ್ಚ್ 28 ರಂದು ಈ ಬಾರಿಯ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೋರಾಟ ನಡೆಸಲಿದೆ. ಈ ಪಂದ್ಯದ ಟಿಕೆಟ್ ಸೋಲ್ಟ್ ಔಟ್ ಆಗಿದೆ.

ಮಾರ್ಚ್ 28ಕ್ಕೆ ಐಪಿಎಲ್ 2026 ಆರಂಭ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories