ಕೊನೆಯ ಕ್ಷಣದಲ್ಲಿ ಪ್ಲೈ ಅಫ್ ಸ್ಥಾನ ಗಿಟ್ಟಿಸಿಕೊಂಡ ಮುಂಬೈ, ಇತಿಹಾಸ ಮರಕಳಿಸುತ್ತಾ?

Published : May 21, 2025, 11:47 PM IST

ಪ್ಲೇ ಆಫ್‌ನಲ್ಲಿ ಉಳಿದಿದ್ದ ಒಂದು ಸ್ಥಾನಕ್ಕೆ 3 ತಂಡಗಳು ಹೋರಾಟ ನಡೆಸಿತ್ತು. ಇದೀಗ ಭಾರಿ ಲೆಕ್ಕಾಚಾರ ಹಾಕುವ ಮೊದಲೇ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಮತ್ತೆರೆಡು ತಂಡ ಟೂರ್ನಿಯಿಂದ ಹೊರಬಿದ್ದಿದೆ.

PREV
16
ಕೊನೆಯ ಕ್ಷಣದಲ್ಲಿ ಪ್ಲೈ ಅಫ್ ಸ್ಥಾನ ಗಿಟ್ಟಿಸಿಕೊಂಡ ಮುಂಬೈ, ಇತಿಹಾಸ ಮರಕಳಿಸುತ್ತಾ?

 ಗುಜರಾತ್, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡ ಬಳಿಕ 1 ಸ್ಥಾನಕ್ಕೆ ಮೂರು ತಂಡಗಳು ಹೋರಾಟ ಆರಂಭಿಸಿತ್ತು. ಈ ಪೈಕಿ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್. ಡೆಲ್ಲಿ ಹಾಗೂ ಮುಂಬೈ ನಡುವಿನ ಪಂದ್ಯದ ವೇಳೆ ಲೆಕ್ಕಾಚಾರ ಜೋರಾಗಿತ್ತು. ಆದರೆ ಎಲ್ಲಾ ಲೆಕ್ಕಾಚಾರಕ್ಕೆ ಮುಂಬೈ ಇಂಡಿಯನ್ಸ್ ಫುಲ್ ಸ್ಟಾಪ್ ಇಟ್ಟಿದೆ. ಭರ್ಜರಿ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. 

26

ಮುಂಬೈ ಇಂಡಿಯನ್ಸ್ 181 ರನ್ ಟಾರ್ಗೆಟ್ ನೀಡಿದ್ದರೆ,ಡೆಲ್ಲಿ ಕ್ಯಾಪಿಟಲ್ಸ್ 121 ರನ್ ಸಿಡಿಸಿ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ 59 ರನ್ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಈ ಗೆಲುವು ಮುಂಬೈ ತಂಡವನ್ನು ಪ್ಲೇ ಆಫ್ ಸ್ಥಾನಕ್ಕೇರಿಸಿದೆ. ಇದೀಗ ಪ್ಲೇ ಆಫ್ ಭರ್ತಿಯಾಗಿದೆ. ಆದರೆ ಅಭಿಮಾನಿಗಳ ಲೆಕ್ಕಾಚಾರ, ಇತಿಹಾಸ ನೋಡಿ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ.

36

ಯಾವಗೆಲ್ಲೂ ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯ ಸೋತು, ಇನ್ನೇನು ಟೂರ್ನಿಯಿಂದ ಹೊರಬೀಳುತ್ತೆ ಅನ್ನೋವಾಗ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದೆಯೋ ಅವಾಗೆಲ್ಲಾ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿಯೂ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶ ಕೊನೆಯ ಕ್ಷಣದಲ್ಲಿ ಆಗಿದೆ. ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಈ ಬಾರಿ ಟ್ರೋಫಿ ಗೆದ್ದರೂ ಅಚ್ಚರಿಯಿಲ್ಲ ಎಂದು ಹಲವರು ಐಪಿಎಲ್ ಇತಿಹಾಸ ಕೆದಕಿ ಭವಿಷ್ಯ ನುಡಿದಿದ್ದಾರೆ.

46

ಲಖನೌ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ 6 ತಂಡಗಳು ಹೊರಬಿದ್ದರೆ, ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಈ ಪೈಕಿ ಮುಂಬೈಗೆ ಇನ್ನೊಂದು ಪಂದ್ಯ ಬಾಕಿದ್ದರೆ, ಇನ್ನುಳಿದ ತಂಡಗಳಿಗೆ ತಲಾ ಎರಡೆರಡು ಪಂದ್ಯ ಬಾಕಿ ಇದೆ. ಹೀಗಾಗಿ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ ಆದರೂ ಅಚ್ಚರಿಯಿಲ್ಲ. 

56

ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಆರ್‌ಸಿಬಿ ಮುಂಚೂಣಿಯಲ್ಲಿದೆ. ತಂಡದ ಪ್ರದರ್ಶನ ಟ್ರೋಫಿ ಗೆಲ್ಲಲು ಅರ್ಹವಾಗಿದೆ. ಇತ್ತ ಆರ್‌ಸಿಬಿ ಅಭಿಮಾನಿಗಳು ಪ್ರತಿ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಈ ಸಲ ಕಪ್ ನಮ್ದೆ ಎಂದಿದ್ದಾರೆ. ಆದರೆ ಈ ಸಲ ನಿಜವಾಗಿಯೂ ಕಪ್ ನಮ್ದೆ ಆಗಿಬಿಡುವ ಸಾಧ್ಯತೆಗಳಿವೆ. ಅದಕ್ಕೆ ತಕ್ಕಂತೆ ಆರ್‌ಸಿಬಿ ಪರ್ಫಾಮೆನ್ಸ್ ನೀಡಿದೆ.

66

ಪ್ಲೇ ಆಫ್ ಹಂತದಲ್ಲಿ ಮೊದಲ ಕ್ವಾಲಿಫೈಯರ್, ಎಲಿಮಿನೇಟರ್, 2ನೇ ಕ್ವಾಲಿಫೈಯರ್ ಯಾರು ಆಡಲಿದ್ದಾರೆ ಅನ್ನೋದು ನಿರ್ಧಾರವಾಗಿಲ್ಲ. ಕಾರಣ ಇನ್ನು ಪ್ಲೇ ಆಫ್ ತಂಡಗಳ ಲೀಗ್ ಹಂತದ ಪಂದ್ಯಗಳು ಬಾಕಿ ಇದೆ. ಮಾರ್ಚ್ 29 ರಿಂದ ಪ್ಲೇ ಆಪ್ ಪಂದ್ಯಗಳು ಆರಂಭಗೊಳ್ಳುತ್ತಿದೆ. ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ.

Read more Photos on
click me!

Recommended Stories