IPL Breaking: ಬ್ಯಾನ್ ಆಗುವ ಭೀತಿಯಲ್ಲಿದ್ದಾರೆ ಈ ಐವರು ಕ್ರಿಕೆಟಿಗರು...!

First Published May 4, 2024, 1:59 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ 51 ಪಂದ್ಯಗಳು ಯಶಸ್ವಿಯಾಗಿ ಜರುಗಿವೆ. ಹೀಗಿರುವಾಗಲೇ ಕೆಲವು ಆಟಗಾರರು ಐಪಿಎಲ್‌ನಿಂದ ನಿಷೇಧಕ್ಕೆ ಒಳಗಾಗುವ ಭೀತಿಗೆ ಸಿಲುಕಿದ್ದಾರೆ. ಯಾರು ಆ ಕ್ರಿಕೆಟಿಗರು? ಏನು ವಿಚಾರ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
 

ಹರ್ಷಿತ್ ರಾಣಾ ಈಗಾಗಲೇ ಒಂದು ಪಂದ್ಯದ ಮಟ್ಟಿಗೆ ಬ್ಯಾನ್

ಕೋಲ್ಕತಾ ನೈಟ್ ರೈಡರ್ಸ್ ತಂಡದ ಯುವ ವೇಗಿ ಹರ್ಷಿತ್ ರಾಣಾ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿಷೇಧಕ್ಕೆ ಗುರಿಯಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
 

ಬಿಸಿ ಮುಟ್ಟಿಸಿದ ಬಿಸಿಸಿಐ:

ವಿಕೆಟ್ ಕಬಳಿಸಿದ ಬಳಿಕ ಅತಿಯಾದ ಸಂಭ್ರಮಾಚರಣೆ ಮಾಡಿ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಕೆಕೆಆರ್ ವೇಗಿ ಹರ್ಷಿತ್ ರಾಣಾಗೆ ಪಂದ್ಯದ ಸಂಭಾವನೆಯ 100% ದಂಡ ಹಾಗೂ ಒಂದು ಐಪಿಎಲ್‌ ಪಂದ್ಯದ ಬ್ಯಾನ್ ಮಾಡಲಾಗಿದೆ.

ಇನ್ನೂ ಹಲವು ಕ್ರಿಕೆಟಿಗರಿಗೆ ನಿಷೇಧದ ಭೀತಿ:

ಹರ್ಷಿತ್ ರಾಣಾ ಮಾತ್ರವಲ್ಲದೇ ಇನ್ನು ಕೆಲವು ಕ್ರಿಕೆಟಿಗರು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೇ ಒಂದು ಪಂದ್ಯದ ಮಟ್ಟಿಗೆ ಬ್ಯಾನ್ ಆಗುವ ಭೀತಿಗೆ ಸಿಲುಕಿದ್ದಾರೆ.

ಯಾಕೆ ಬ್ಯಾನ್ ಭೀತಿ?

ಐಪಿಎಲ್ ಕಾನೂನಿನ ಪ್ರಕಾರ, ತಂಡವೊಂದು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಿ ಮುಗಿಸದೇ ಇದ್ದಲ್ಲಿ ಮೊದಲ ಬಾರಿಯ ತಪ್ಪಿಗೆ ಆ ತಂಡದ ನಾಯಕನಿಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಅದೇ ತಪ್ಪು ಮಾಡಿದರೆ ನಾಯಕನಿಗೆ 24 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಇದೇ ತಪ್ಪು ಮೂರನೇ ಬಾರಿ ಮಾಡಿದರೆ ಒಂದು ಪಂದ್ಯದ ಮಟ್ಟಿಗೆ ಆ ನಾಯಕ ಬ್ಯಾನ್ ಶಿಕ್ಷೆ ಅನುಭವಿಸಬೇಕಾಗುತ್ತದೆ.

1. ರಿಷಭ್ ಪಂತ್:

ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಈ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎರಡು ಬಾರಿ ನಿಧಾನಗತಿಯ ಬೌಲಿಂಗ್ ನಡೆಸಿ ದಂಡ ತೆತ್ತಿದೆ. ಈ ಆವೃತ್ತಿಯಲ್ಲಿ ಡೆಲ್ಲಿ ತಂಡವು ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿದರೆ, ಮುಂದಿನ ಒಂದು ಪಂದ್ಯದ ಮಟ್ಟಿಗೆ ನಾಯಕ ಪಂತ್ ನಿಷೇಧಕ್ಕೆ ಒಳಗಾಗಲಿದ್ದಾರೆ.
 

2. ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ ಎರಡು ಬಾರಿ ತಮ್ಮ ತಂಡವನ್ನು ನಿಧಾನಗತಿಯಲ್ಲಿ ಮುನ್ನಡೆಸಿ ಭಾರೀ ದಂಡ ತೆತ್ತಿದ್ದಾರೆ. ಈ ಆವೃತ್ತಿಯಲ್ಲಿ ಪಾಂಡ್ಯ ಪಡೆ ಇನ್ನೊಮ್ಮೆ ಇದೇ ತಪ್ಪ ಮಾಡಿದರೆ, ಒಂದು ಪಂದ್ಯದ ಮಟ್ಟಿಗೆ ಹಾರ್ದಿಕ್ ಪಾಂಡ್ಯ ಬ್ಯಾನ್ ಆಗೋದು ಗ್ಯಾರಂಟಿ.
 

3. ಸಂಜು ಸ್ಯಾಮ್ಸನ್:

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ತಮ್ಮ ತಂಡವು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕಾಗಿ 12 ಲಕ್ಷ ರುಪಾಯಿ ದಂಡ ತೆತ್ತಿದ್ದಾರೆ. ಒಂದು ವೇಳೆ ಇನ್ನೆರಡು ಬಾರಿ ಸಂಜು ಪಡೆ ಇದೇ ತಪ್ಪು ಮರುಕಳಿಸಿದರೆ ಬ್ಯಾನ್ ಆಗೋದು ಪಕ್ಕಾ.
 

4. ಋತುರಾಜ್ ಗಾಯಕ್ವಾಡ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ತಮ್ಮ ತಂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕಾಗಿ 12 ಲಕ್ಷ ರುಪಾಯಿ ದಂಡ ತೆತ್ತಿದ್ದಾರೆ. ಇನ್ನೆರಡು ಬಾರಿ ಸಿಎಸ್‌ಕೆ ತಂಡ ಇದೇ ತಪ್ಪು ಮಾಡಿದರೆ ಗಾಯಕ್ವಾಡ್ ಒಂದು ಪಂದ್ಯದ ಮಟ್ಟಿಗೆ ಹೊರಗುಳಿಯಬೇಕಾಗುತ್ತದೆ.
 

5. ಕೆ ಎಲ್ ರಾಹುಲ್:

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಕೂಡಾ ನಿಷೇಧದ ಭೀತಿಗೆ ಸಿಲುಕಿದ್ದಾರೆ. ಸಿಎಸ್‌ಕೆ ಎದುರಿನ ಪಂದ್ಯದ ವೇಳೆಯಲ್ಲಿ ರಾಹುಲ್ ಪಡೆ ಕೂಡಾ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿತ್ತು. ಹೀಗಾಗಿ ರಾಹುಲ್ ಕೂಡಾ 12 ಲಕ್ಷ ರುಪಾಯಿ ದಂಡ ತೆತ್ತಿದ್ದಾರೆ. ಇನ್ನೆರಡು ತಪ್ಪು ಕೆ ಎಲ್ ರಾಹುಲ್ ಅವರನ್ನು ಒಂದು ಐಪಿಎಲ್ ಪಂದ್ಯದಿಂದ ಹೊರಗುಳಿಯುವಂತೆ ಮಾಡಲಿದೆ.
 

click me!