IPL 2021: ಕೊನೆ ಕ್ಷಣದಲ್ಲಿ ಕೆಕೆಆರ್‌ ತಂಡ ಕೂಡಿಕೊಂಡ ಆರ್‌ಸಿಬಿ ಮಾಜಿ ಕ್ರಿಕೆಟಿಗ..!

First Published Apr 4, 2021, 12:55 PM IST

ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್‌ ಆರಂಭವಾಗಿದ್ದು, ಎಲ್ಲಾ 8 ತಂಡಗಳು ಪ್ರಶಸ್ತಿ ಗೆಲ್ಲಲು ಚಿತ್ತ ನೆಟ್ಟಿವೆ. ಕೊರೋನಾ ಭೀತಿಯ ನಡುವೆಯೇ 2021ನೇ ಸಾಲಿನ ಐಪಿಎಲ್‌ ಟೂರ್ನಿಯು ಏಪ್ರಿಲ್‌ 09ರಿಂದ ಆರಂಭವಾಗಲಿದೆ. ಎರಡು ಬಾರಿಯ ಐಪಿಎಲ್‌ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್ ಹೊಸ ಹುರುಪಿನೊಂದಿಗೆ ಐಪಿಎಲ್‌ ಟೂರ್ನಿಗೆ ಸಜ್ಜಾಗಿದ್ದು, ಆರ್‌ಸಿಬಿ ಮಾಜಿ ಕ್ರಿಕೆಟಿಗ ಇದೀಗ ಕೊನೆ ಕ್ಷಣದಲ್ಲಿ ಕೆಕೆಆರ್‌ ತಂಡ ಕೂಡಿಕೊಂಡಿದ್ದಾರೆ.
 

2 ಬಾರಿಯ ಐಪಿಎಲ್‌ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಕಲ ರೀತಿಯಿಂದ ಸಜ್ಜಾಗಿದೆ.
undefined
ಇಯಾನ್‌ ಮಾರ್ಗನ್‌ ನೇತೃತ್ವದ ಕೆಕೆಆರ್‌ ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾಗಿತ್ತು. ಆದರೆ ಇದೀಗ ಹೊಸ ಹುರುಪಿನೊಂದಿಗೆ 14ನೇ ಆವೃತ್ತಿಯ ಆಡಲು ಸಜ್ಜಾಗಿದೆ.
undefined
ಹೀಗಿರುವಾಗಲೇ ಕಾಲಿನ ಗಾಯದ ಸಮಸ್ಯೆಯಿಂದಾಗಿ ರಿಂಕು ಸಿಂಗ್‌ ತಂಡದಿಂದ ಹೊರಬಿದ್ದಿದ್ದಾರೆ.
undefined
ರಿಂಕು ಸಿಂಗ್‌ 2017ರಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು 13ನೇ ಆವೃತ್ತಿಯ ಐಪಿಎಲ್‌ನಲ್ಲಿ ರಿಂಕು ಕೆಕೆಆರ್ ಪರ ಕೇವಲ ಒಂದು ಪಂದ್ಯವನ್ನಾಡಿದ್ದರು.
undefined
ಇದೀಗ ರಿಂಕು ಸಿಂಗ್ ಬದಲಿಗೆ ಆರ್‌ಸಿಬಿ ಮಾಜಿ ಕ್ರಿಕೆಟಿಗ ಗುರುಕೀರತ್‌ ಮನ್‌ ಕೆಕೆಆರ್‌ ತಂಡ ಕೂಡಿಕೊಂಡಿದ್ದಾರೆ. ಗುರುಕೀರತ್ ಸಿಂಗ್‌ 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.
undefined
14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಗುರುಕೀರತ್‌ ಮನ್‌ರನ್ನು ತಂಡದಿಂದ ರಿಲೀಸ್‌ ಮಾಡಿತ್ತು. ಇನ್ನು ಹರಾಜಿನಲ್ಲಿ ಮನ್‌ರನ್ನು ಯಾವೊಬ್ಬ ಫ್ರಾಂಚೈಸಿಯೂ ಖರೀದಿಸುವ ಮನಸು ಮಾಡಿರಲಿಲ್ಲ.
undefined
ಗುರುಕೀರತ್ ಮನ್‌ 2012ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು, ಇದುವರೆಗೂ 41 ಐಪಿಎಲ್‌ ಪಂದ್ಯಗಳನ್ನಾಡಿ 511 ರನ್‌ ಬಾರಿಸಿದ್ದಾರೆ.
undefined
ಇನ್ನು ಗುರುಕೀರತ್ ಮನ್‌ 2016ರಲ್ಲಿ ಆಸ್ಟ್ರೇಲಿಯಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಇದುವರೆಗೂ ಭಾರತ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ.
undefined
click me!