Published : Jun 17, 2025, 12:36 PM ISTUpdated : Jun 17, 2025, 12:50 PM IST
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾದ ಹಲವು ಆಟಗಾರರು ಅಪರೂಪದ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಹೊಂದಿದ್ದರೂ, ಈ ಸರಣಿ ವಿಶೇಷ. ಹಲವು ಭಾರತೀಯ ಆಟಗಾರರು ಮೈಲಿಗಲ್ಲುಗಳನ್ನು ತಲುಪಲಿದ್ದಾರೆ. ಜೂನ್ ನಿಂದ ಆಗಸ್ಟ್ 2025 ರವರೆಗೆ ನಡೆಯುವ ಈ ಸರಣಿಯ ಪಂದ್ಯಗಳು ಹೆಡಿಂಗ್ಲಿ, ಎಡ್ಜ್ಬಾಸ್ಟನ್, ಲಾರ್ಡ್ಸ್, ಓವಲ್ ಮತ್ತು ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯಲಿವೆ.
26
ಗಿಲ್, ಜೈಸ್ವಾಲ್ 2000 ರನ್ಸ್
ಶುಭ್‌ಮನ್ ಗಿಲ್ ಗೆ 2000 ಟೆಸ್ಟ್ ರನ್ ಪೂರೈಸಲು ಇನ್ನೂ 107 ರನ್ ಬೇಕು. ಜೈಸ್ವಾಲ್ ಗೆ 2000 ಟೆಸ್ಟ್ ರನ್ ಗಳಿಗೆ 202 ರನ್ ಬೇಕು. ಇಂಗ್ಲೆಂಡ್ ನಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಈ ಸರಣಿಯಲ್ಲಿ ಕ್ಯಾಪ್ಟನ್ ಗಿಲ್ ಮೇಲೆ ಎಲ್ಲರ ಚಿತ್ತವಿದೆ.
36
ಜೈಸ್ವಾಲ್ ಚಾಲೆಂಜ್
ಜೈಸ್ವಾಲ್ ಇಂಗ್ಲೆಂಡ್ ಬೌಲರ್ ಗಳಿಗೆ ಸವಾಲೊಡ್ಡಲಿದ್ದಾರೆ. ಅವರಿಗೆ 3,000 ಅಂತಾರಾಷ್ಟ್ರೀಯ ರನ್ ಗಳಿಗೆ 464 ರನ್ ಬೇಕು.