T20 World Cup: Aus vs Pak ಪಾಕಿಸ್ತಾನದ ಕನಸು ನುಚ್ಚುನೂರು ಮಾಡಿದ ಮ್ಯಾಥ್ಯೂ ವೇಡ್‌ರಿಂದ ಅಚ್ಚರಿಯ ಹೇಳಿಕೆ..!

Suvarna News   | Asianet News
Published : Nov 13, 2021, 10:18 AM ISTUpdated : Nov 13, 2021, 10:20 AM IST

ದುಬೈ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ (Pakistan Cricket Team) ಸೋಲುಣಿಸಿ ಅಸ್ಟ್ರೇಲಿಯಾ ತಂಡವು ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಪಾಕ್‌ ವಿರುದ್ದದ ಗೆಲುವಿನ ನಿಜವಾದ ಹೀರೋವೆಂದರೆ ಅದು ಆಸೀಸ್‌ ವಿಕೆಟ್‌ ಕೀಪರ್ ಬ್ಯಾಟರ್‌ ಮ್ಯಾಥ್ಯೂ ವೇಡ್‌ (Matthew Wade). ಪಾಕ್‌ ವಿರುದ್ದದ ಪಂದ್ಯದ ಗೆಲುವಿನ ಬಳಿಕ ವೇಡ್‌ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ವೇಡ್ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
18
T20 World Cup: Aus vs Pak ಪಾಕಿಸ್ತಾನದ ಕನಸು ನುಚ್ಚುನೂರು ಮಾಡಿದ ಮ್ಯಾಥ್ಯೂ ವೇಡ್‌ರಿಂದ ಅಚ್ಚರಿಯ ಹೇಳಿಕೆ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.

28

ಅದರಲ್ಲೂ ಕೊನೆಯ 4 ಓವರ್‌ಗಳಲ್ಲಿ ಆಸೀಸ್‌ ಗೆಲ್ಲಲು ಬರೋಬ್ಬರಿ 50 ರನ್‌ಗಳ ಅಗತ್ಯವಿತ್ತು. ಪಾಕಿಸ್ತಾನ ತಂಡವು ಆಸೀಸ್‌ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿತ್ತು. ಹೀಗಿದ್ದೂ ಪಂದ್ಯದ 19ನೇ ಓವರ್‌ನಲ್ಲಿ ಶಾಹೀನ್‌ ಅಫ್ರಿದಿ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದ ಮ್ಯಾಥ್ಯೂ ವೇಡ್‌ ರೋಚಕವಾಗಿ ಆಸೀಸ್‌ಗೆ ಗೆಲುವು ತಂದು ಕೊಟ್ಟಿದ್ದರು

38

ಇದೀಗ ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ ಮ್ಯಾಥ್ಯೂ ವೇಡ್‌, ತಮ್ಮ ಭವಿಷ್ಯದ ಕುರಿತಂತೆ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

48

ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸ್ಫೋಟಕ ಆಟವಾಡಿ ಆಸ್ಪ್ರೇಲಿಯಾವನ್ನು ಫೈನಲ್‌ಗೇರಿಸಿದ ವಿಕೆಟ್‌ ಕೀಪರ್‌ ಬ್ಯಾಟರ್‌ ಮ್ಯಾಥ್ಯೂ ವೇಡ್‌ ತಮಗೆ ಅದು ತಂಡದ ಪರ ಆಡಲು ಸಿಗುವ ಕೊನೆ ಅವಕಾಶ ಆಗಬಹುದು ಎನ್ನುವ ಆತಂಕದಲ್ಲೇ ಆಡಿದ್ದಾಗಿ ಹೇಳಿಕೊಂಡಿದ್ದಾರೆ. 

58

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈದಾನಕ್ಕಿಳಿಯುವಾಗ ಗಾಬರಿಯಲ್ಲಿದ್ದೆ. ಇದು ನನಗೆ ಸಿಗುತ್ತಿರುವ ಕೊನೆಯ ಅವಕಾಶವಾಗಿರಬಹುದು ಎನ್ನುವ ಆತಂಕವೂ ಇತ್ತು. ಉತ್ತಮ ಆಟವಾಡಿ ತಂಡವನ್ನು ಗೆಲ್ಲಿಸಬೇಕು ಎನ್ನುವ ಗುರಿ ನನ್ನಲ್ಲಿತ್ತು. ಫೈನಲ್‌ ಪಂದ್ಯ ನನ್ನ ಅಂತಾರಾಷ್ಟ್ರೀಯ ವೃತ್ತಿಬದುಕಿನ ಅಂತಿಮ ಪಂದ್ಯವಾಗಬಹುದು. ಅದಕ್ಕೆ ನಾನು ಸಿದ್ಧನಿದ್ದೇನೆ’ ಎಂದಿದ್ದಾರೆ. 

68

2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮ್ಯಾಥ್ಯೂ ವೇಡ್, ಆಸ್ಟ್ರೇಲಿಯಾ ತಂಡದಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ವಿಫಲವಾಗುತ್ತಲೇ ಬಂದಿದ್ದಾರೆ. ಅಲೆಕ್ಸ್ ಕ್ಯಾರಿ ಹಾಗೂ ಟಿಮ್ ಪೈನ್ ತಂಡ ಕೂಡಿಕೊಂಡ ಬಳಿಕ ವೇಡ್‌ ತಮ್ಮ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

78

ಮ್ಯಾಥ್ಯೂ ವೇಡ್‌ಗೆ ಒಂದು ಸ್ಥಿರ ಬ್ಯಾಟಿಂಗ್ ಕ್ರಮಾಂಕ ಎನ್ನುವುದೇ ಇಲ್ಲ. ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವೇಡ್‌ ಅವರನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಇದೀಗ ಟಿ20 ವಿಶ್ವಕಪ್‌ನಲ್ಲಿ ವೇಡ್‌ಗೆ ಫಿನಿಶರ್ ಪಾತ್ರ ನೀಡಲಾಗಿದೆ.

88

ಬಹುಶಃ ಆಸ್ಟ್ರೇಲಿಯಾ ತಂಡದಿಂದ ಅತಿಹೆಚ್ಚು ಬಾರಿ ಹೊರಬಿದ್ದ ಆಟಗಾರನೆಂದರೆ ಅದು ನಾನೇ ಇರಬಹುದು. ಭವಿಷ್ಯತ್ತಿನಲ್ಲೂ ನಾನು ನೆಲೆ ಕಂಡುಕೊಳ್ಳುತ್ತೇನೆ ಎನ್ನಲು ನನಗೇನು 23 ವರ್ಷವಲ್ಲ ಎಂದು 33 ವರ್ಷದ ವೇಡ್‌ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

click me!

Recommended Stories