ಅಕ್ಟೋಬರ್ 24: ಮೊದಲ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ
ಅಕ್ಟೋಬರ್ 24ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಸೆಣಸಾಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತರರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ. ಈ ಪಂದ್ಯವು ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ.
ಅಕ್ಟೋಬರ್ 31: ಎರಡನೇ ಪಂದ್ಯದಲ್ಲಿ ಕಿವೀಸ್ ಎದುರಾಳಿ
ಭಾರತ ತಂಡವು ತನ್ನ ಎರಡನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡದ ಎದುರು ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೂ ದುಬೈನ ಅಂತರರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದ್ದು, ಮತ್ತೊಂದು ಜಿದ್ದಾಜಿದ್ದಿನ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಈ ಪಂದ್ಯ ಕೂಡಾ ಸಂಜೆ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ.
ನವೆಂಬರ್ 03: ಮೂರನೇ ಪಂದ್ಯದಲ್ಲಿ ಭಾರತಕ್ಕೆ ಆಫ್ಘಾನ್ ಸವಾಲು
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನವೆಂಬರ್ 03ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಎದುರಿಸಲಿದೆ. ಅಬುಧಾಬಿಯಲ್ಲಿ ಸಂಜೆ 6 ಗಂಟೆಗೆ ಈ ಪಂದ್ಯವು ಆರಂಭವಾಗಲಿದೆ.
ನವೆಂಬರ್ 05: ಅರ್ಹತಾ ಸುತ್ತಿನ 'ಬಿ' ಗುಂಪಿನ ಅಗ್ರಸ್ಥಾನಿಯೊಂದಿಗೆ ಫೈಟ್
ಸೂಪರ್ 12ಗೂ ಮುನ್ನ ಅರ್ಹತಾ ಸುತ್ತಿನ ಪಂದ್ಯ ನಡೆಯಲಿದ್ದು, ಈ ಪೈಕಿ 'ಬಿ' ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡದೊಂದಿಗೆ ಟೀಂ ಇಂಡಿಯಾ ಸೆಣಸಾಟ ನಡೆಸಲಿದೆ. ಸಂಜೆ ಆರು ಗಂಟೆಗೆ ಆರಂಭವಾಗಲಿರುವ ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ. 'ಬಿ' ಗುಂಪಿನಲ್ಲಿ ಬಾಂಗ್ಲಾದೇಶ, ಪಪುವಾ ನ್ಯೂಗಿನಿ, ಓಮನ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಸ್ಥಾನ ಪಡೆದಿದ್ದು, ಈ ತಂಡಗಳ ಪೈಕಿ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಭಾರತಕ್ಕೆ ಸವಾಲೊಡ್ಡಲಿದೆ.
ನವೆಂಬರ್ 08: ಅರ್ಹತಾ ಸುತ್ತಿನ 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಫೈಟ್
ಟೀಂ ಇಂಡಿಯಾ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಟೀಂ ಇಂಡಿಯಾ ಕಾದಾಟ ನಡೆಸಲಿದೆ. ಸಂಜೆ ಆರು ಗಂಟೆಗೆ ಆರಂಭವಾಗಲಿರುವ ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ. 'ಎ' ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ ಹಾಗೂ ನಮೀಬಿಯಾ ತಂಡಗಳು ಸ್ಥಾನವನ್ನು ಪಡೆದಿವೆ.