IPL 2020 ಆಯೋಜನೆ ಕುರಿತು ಸೌರವ್ ಗಂಗೂಲಿ ಖಡಕ್ ಮಾತು!

First Published | Apr 12, 2020, 2:32 PM IST

ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ.  ಭಾರತ ಲಾಕ್‌ಡೌನ್ ವಿಸ್ತರಿಸಿದರೂ ಕೊರೋನಾ ಹತೋಟಿಗೆ ಬರುತ್ತಿಲ್ಲ. ಮಾರ್ಚ್ 29ರಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ಲಾಕ್‌ಡೌನ್ ಏಪ್ರಿಲ್ 30ರ ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ 2020ರ ಐಪಿಎಲ್ ಕತೆ ಏನು? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ಈ ಗೊಂದಲಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟ ಉತ್ತರ ನೀಡಿದ್ದಾರೆ.
 

ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿ ಲಾಕ್‌ಡೌನ್ ವಿಸ್ತರಿಸಲಾಗಿದೆ
ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿ ಬಹುತೇಕ ಎಲ್ಲಾ ಸೇವೆ ಬಂದ್
Tap to resize

ಮಾ.29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏ.15ಕ್ಕೆ ಮುಂದೂಡಲಾಗಿತ್ತು
ಇದೀಗ ಬಿಸಿಸಿಐ ಹೇಳಿದ ಗಡುವು ಸಮೀಪಿಸುತ್ತಿರುವ ಕಾರಣ ಗೊಂದಲಗಳಿಗೆ ತೆರೆ ಎಳೆದ ಬಿಸಿಸಿಐ ಅಧ್ಯಕ್ಷ
ವಿಶ್ವದಲ್ಲಿ ಯಾವುದೇ ಕ್ರೀಡೆ ನಡೆಯುತ್ತಿಲ್ಲ ಇನ್ನೂ ಐಪಿಎಲ್ ಟೂರ್ನಿ ಆಯೋಜನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದ ಸೌರವ್ ಗಂಗೂಲಿ
ಯಾರೂ ಮನೆಯಿಂದ ಹೊರಗೆ ಬರಬಾರದು ಹೀಗಿರುವಾಗ ನಾವು ಐಪಿಎಲ್ ಆಯೋಜನೆ ಕುರಿತು ಚಿಂತಿಸುವುದು ತಪ್ಪು ಎಂದ ಸೌರವ್
ಕೊರೋನಾ ಸಂಪೂರ್ಣ ಹತೋಟಿಗೆ ಬಂದ ಬಳಿಕವೇ ಕ್ರಿಕೆಟ್ ಕುರಿತು ಚಿಂತಿಸಲಾಗುವುದು ಎಂದ ಗಂಗೂಲಿ
ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಪರಿಹಾರ ನಿಧಿಗೆ 51 ಕೋಟಿ ರೂಪಾಯಿ ದೇಣಿಗೆ ನೀಡಿರುವ ಬಿಸಿಸಿಐ
ನಿರ್ಗತಿಕರಿಗೆ, ಬಡವರಿಗೆ ಆಹಾರ, ನೀರು ಸೇರಿದಂತೆ ಅಗತ್ಯವಸ್ತುಗಳನ್ನು ಪೂರೈಸುತ್ತಿರುವ ಸೌರವ್ ಗಂಗೂಲಿ

Latest Videos

click me!