ಜಲಂಧರ್(ಏ.06): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು ಹೆಚ್ಚು ಪರದಾಡುವಂತಾಗಿದೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಮನೆಯಲ್ಲಿ ಆಹಾರವಿಲ್ಲ. ಇದೀಗ ಇಂತರವರ ನೆರವಿಗೆ ಉದ್ಯಮಿಗಳು, ಸೆಲೆಬ್ರೆಟಿಗಳು ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಜಲಂಧರ್‌ನ 5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ್ದಾರೆ.