ಕೃನಾಲ್‌ ಪಾಂಡ್ಯ ಬಗ್ಗೆ ನಿಮಗೆ ಗೊತ್ತಿರದ ಟಾಪ್‌ 10 ಕುತೂಹಲಕಾರಿ ಸಂಗತಿಗಳಿವು..!

Suvarna News   | Asianet News
Published : Mar 24, 2021, 02:16 PM IST

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್‌ ಕೃನಾಲ್ ಪಾಂಡ್ಯ ಮಾರ್ಚ್‌ 24, 2021ರಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೃನಾಲ್‌ ಹುಟ್ಟುಹಬ್ಬಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.  ಕಡುಬಡತನದಲ್ಲಿ ಹುಟ್ಟಿ ಬೆಳೆದ ಪಾಂಡ್ಯ ಬ್ರದರ್ಸ್‌ ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್‌ ವಿರುದ್ದ ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಒನ್‌ಡೇ ಪಾದಾರ್ಪಣೆ ಮಾಡಿ ವಿಶ್ವದಾಖಲೆಯ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಕುರಿತಾದ 10 ಇಂಟ್ರೆಸ್ಟಿಂಗ್‌ ಸಂಗತಿಗಳು ಏಷ್ಯಾನೆಟ್‌ ಸುವರ್ಣನ್ಯೂಸ್‌.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.  

PREV
110
ಕೃನಾಲ್‌ ಪಾಂಡ್ಯ ಬಗ್ಗೆ ನಿಮಗೆ ಗೊತ್ತಿರದ ಟಾಪ್‌ 10 ಕುತೂಹಲಕಾರಿ ಸಂಗತಿಗಳಿವು..!

ಕೃನಾಲ್ ಪಾಂಡ್ಯ ಮಾರ್ಚ್‌ 24, 1991ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದರು. ಮಕ್ಕಳ ಕ್ರಿಕೆಟ್‌ ವೃತ್ತಿಜೀವನಕ್ಕೆ ನೆರವಾಗಲು ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ 1999ರಲ್ಲಿ ವಡೋದರಕ್ಕೆ ಬಂದರು. ಸದ್ಯ ಪಾಂಡ್ಯ ಬ್ರದರ್ಸ್‌ ಬರೋಡದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

210

ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಎಡಗೈ ಆರ್ಥಡಾಕ್ಸ್‌ ಸ್ಪಿನ್ನರ್ ಆಗಿರುವ ಕೃನಾಲ್ ಪಾಂಡ್ಯ ನವೆಂಬರ್‌ 8, 2014ರಲ್ಲಿ ಗುಜರಾತ್‌ ವಿರುದ್ದ ವಿಜಯ್‌ ಹಜಾರೆ ಟೂರ್ನಿಯಲ್ಲಿ 'ಲಿಸ್ಟ್‌ ಎ' ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 

310

ಇದಕ್ಕೂ ಮೊದಲು ಮಾರ್ಚ್‌ 26, 2013ರಲ್ಲಿ ಇಂದೋರ್‌ನಲ್ಲಿ ಬೆಂಗಾಲ್‌ ವಿರುದ್ದ ಸಯ್ಯದ್‌ ಮುಷ್ತಾಕ್ ಅಲಿ ಟೂರ್ನಿ ಮೂಲಕ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

410

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಿರಣ್‌ ಮೋರೆ ಹಾಗೂ ಜಿತೇಂದರ್ ಸಿಂಗ್‌ ಮಾರ್ಗದರ್ಶನದಲ್ಲಿ ಕೃನಾಲ್‌ ಪಾಂಡ್ಯ ಕ್ರಿಕೆಟ್‌ ಅಭ್ಯಾಸ ಆರಂಭಿಸಿದ್ದರು. ಕಿರಣ್ ಮೋರೆ ಕ್ರಿಕೆಟ್‌ ಅಕಾಡಮಿಯಲ್ಲಿ ಪಾಂಡ್ಯ ಬ್ರದರ್ಸ್ ಕೋಚಿಂಗ್ ಪಡೆದಿದ್ದರು.

510

ಕೇವಲ 10 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಕೃನಾಲ್ ಪಾಂಡ್ಯರನ್ನು 2016ರ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. 

610

2016ರ ಐಪಿಎಲ್‌ನಲ್ಲಿ ಗುಜರಾತ್‌ ಲಯನ್ಸ್‌ ವಿರುದ್ದ ಮೊದಲ ಪಂದ್ಯವನ್ನಾಡಿದ ಕೃನಾಲ್ ಪಾಂಡ್ಯ, ದಿನೇಶ್‌ ಕಾರ್ತಿಕ್‌ರನ್ನು ಮೊದಲ ವಿಕೆಟ್‌ ರೂಪದಲ್ಲಿ ಬಲಿ ಪಡೆದಿದ್ದರು. ಜತೆಗೆ ಬ್ಯಾಟಿಂಗ್‌ನಲ್ಲಿ ಕೇವಲ 11 ಎಸೆತಗಳಲ್ಲಿ 3 ಬೌಂಡರಿ ಸಹಿತ 20 ರನ್‌ ಚಚ್ಚಿದ್ದರು.

710

2017ರ ಐಪಿಎಲ್ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಕೃನಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

810

2017ರಲ್ಲಿ ಕೃನಾಲ್‌ ಪಾಂಡ್ಯ ಪಂಕುರಿ ಶರ್ಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 

910

2018ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ದ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಕೇವಲ 9 ಎಸೆತಗಳಲ್ಲಿ ಅಜೇಯ 21 ರನ್‌ ಹಾಗೂ ಒಂದು ವಿಕೆಟ್‌ ಕಬಳಿಸಿ ಮಿಂಚಿದ್ದ ಕೃನಾಲ್‌, ಏಕದಿನ ಕ್ರಿಕೆಟ್‌ ಪಾದಾರ್ಪಣೆ ಪಂದ್ಯದಲ್ಲಿ ಅತಿವೇಗದ ಅರ್ಧಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ. 

1010

ಇಂಗ್ಲೆಂಡ್‌ ವಿರುದ್ದ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಪಾದಾರ್ಪಣೆ ಪಂದ್ಯದಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆ ಕೃನಾಲ್ ಪಾಲಾಗಿದೆ.

click me!

Recommended Stories