ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮಾದರಿಯಲ್ಲಿ ಅವರು ಹಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅಲ್ಲದೆ, ಹಣ ಗಳಿಕೆಯಲ್ಲೂ ಯಾರಿಗೂ ಕಡಿಮೆಯಿಲ್ಲ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅನಿರೀಕ್ಷಿತವಾಗಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
27
ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ಪರ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 201* ರನ್ ಗಳಿಸಿದ್ದರು. ಇದರಿಂದ ಆಸ್ಟ್ರೇಲಿಯಾ ವಿಶ್ವಕಪ 2023ರ ಫೈನಲ್ ತಲುಪಿ ಪ್ರಶಸ್ತಿ ಗೆದ್ದುಕೊಂಡಿತು.
37
ಕ್ರಿಕೆಟ್ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಖ್ಯಾತರಾಗಿರುವ ಮ್ಯಾಕ್ಸ್‌ವೆಲ್ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಐಪಿಎಲ್‌ನಿಂದಲೇ ಕೋಟಿಗಟ್ಟಲೆ ಹಣ ಗಳಿಸಿದ್ದಾರೆ.
ವರದಿಗಳ ಪ್ರಕಾರ, 2012 ರಿಂದ 2025 ರವರೆಗೆ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಒಟ್ಟು 100 ಕೋಟಿ 64 ಲಕ್ಷ ರೂ. ಗಳಿಸಿದ್ದಾರೆ. ಹಲವು ತಂಡಗಳಿಗೆ ಆಡಿದ್ದಾರೆ.
57
ಮ್ಯಾಕ್ಸ್‌ವೆಲ್ ಮೊದಲ ಬಾರಿಗೆ 2012 ರಲ್ಲಿ ಐಪಿಎಲ್ ಆಡಿದರು. ದೆಹಲಿ ಡೇರ್‌ಡೆವಿಲ್ಸ್ ಅವರಿಗೆ 1.05 ಕೋಟಿ ರೂ. ನೀಡಿತ್ತು. ನಂತರ ಪಂಜಾಬ್‌ಗೆ ದುಬಾರಿ ಮೊತ್ತಕ್ಕೆ ಆಡಿದರು. ಆರ್‌ಸಿಬಿ 14.25 ಕೋಟಿ ರೂ. ನೀಡಿ ಖರೀದಿಸಿತು.
67
ವರದಿಗಳ ಪ್ರಕಾರ, ಮ್ಯಾಕ್ಸ್‌ವೆಲ್ ವಾರ್ಷಿಕ ಗಳಿಕೆ ಸುಮಾರು 18 ಕೋಟಿ ರೂ. ಹಲವು ದೊಡ್ಡ ಬ್ರ್ಯಾಂಡ್‌ಗಳ ಜಾಹೀರಾತಿನಿಂದಲೂ ಕೋಟಿಗಟ್ಟಲೆ ಗಳಿಸುತ್ತಾರೆ.
77
ಕ್ರಿಕೆಟ್ ಜೊತೆಗೆ ಮ್ಯಾಕ್ಸ್‌ವೆಲ್ ಬೇರೆ ಬೇರೆ ಮೂಲಗಳಿಂದಲೂ ಗಳಿಸುತ್ತಾರೆ. ಐಪಿಎಲ್ ಫ್ರಾಂಚೈಸಿಗಳಿಂದ ಕೋಟಿಗಟ್ಟಲೆ ಪಡೆಯುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಜಾಹೀರಾತಿನಿಂದಲೂ ಗಳಿಕೆ.