ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೇಲೆ ಮುಂಬೈ ಪೊಲೀಸರಿಂದ FIR..! ಕಾಂಬ್ಳಿಗೆ ಮತ್ತಷ್ಟು ಸಂಕಷ್ಟ..!

Published : Feb 05, 2023, 01:47 PM IST

ಮುಂಬೈ(ಫೆ.05): ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಸದಾ ಒಂದಿಲ್ಲೊಂದು ಸುದ್ದಿಗೆ ಗ್ರಾಸವಾಗುತ್ತಲೇ ಇರುತ್ತಾರೆ. ಇದೀಗ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದು, ಮುಂಬೈ ಪೊಲೀಸರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಅಷ್ಟಕ್ಕೂ ಏನಾಯ್ತು? ಕಾಂಬ್ಳಿ ಮೇಲಿರುವ ಆರೋಪವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
16
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೇಲೆ ಮುಂಬೈ ಪೊಲೀಸರಿಂದ FIR..! ಕಾಂಬ್ಳಿಗೆ ಮತ್ತಷ್ಟು ಸಂಕಷ್ಟ..!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಪತ್ನಿ ಆಂಡ್ರಿಯಾ ಹೆವಿಡ್‌, ಪತಿ ಕಾಂಬ್ಳಿ ಮೇಲೆ ಮುಂಬೈ ಪೊಲೀಸರ ಬಳಿ ದೂರು ನೀಡಿದ್ದಾರೆ.
 

26

ಮದ್ಯಪಾನ ಸೇವಿಸಿ ಮನೆಗೆ ಬಂದ ವಿನೋದ್ ಕಾಂಬ್ಳಿ, ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ , ತಲೆಗೆ ಬಾರಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಆಂಡ್ರಿಯಾ ಹೆವಿಟ್ ದೂರು ದಾಖಲಿಸಿದ್ದಾರೆ.

36

ಈ ಘಟನೆಯು ಶುಕ್ರವಾರ ಮಧ್ಯಾಹ್ನ 01ರಿಂದ 1.30ರ ವೇಳೆಯಲ್ಲಿ ನಡೆದಿದ್ದು, ಕಾಂಬ್ಳಿ ಸಂಪೂರ್ಣ ಪಾನಮತ್ತರಾಗಿ ತಮ್ಮ ಪ್ಲಾಟ್‌ಗೆ ಬಂದು ಮದ್ಯದ ನಶೆಯಲ್ಲಿ ಹೀಗೆ ದೌರ್ಜನ್ಯವೆಸಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. 
 

46

ಈ ಸಂದರ್ಭದಲ್ಲಿ ತಮ್ಮ 12 ಮಗನೂ ಜತೆಗಿದ್ದ. ನಮ್ಮ ಜಗಳವನ್ನು ಬಿಡಿಸಲು ಆತನೂ ಮಧ್ಯ ಪ್ರವೇಶ ಮಾಡಿದ. ಆಗ ಅಡುಗೆ ಮನೆಗೆ ಹೋಗಿ, ಮುರಿದು ಹೋಗಿದ್ದ ಪ್ರೈಯಿಂಗ್ ಪ್ಯಾನ್ ತಂದು ತಮ್ಮ ಮೇಲೆ ಎಸೆದರು. ಆಗಲೇ ನನ್ನ ತಲೆಗೆ ಗಾಯವಾಗಿದ್ದು ಎಂದು ಕಾಂಬ್ಳಿ ಪತ್ನಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
 

56

ಇದೀಗ ವಿನೋದ್ ಕಾಂಬ್ಳಿ ವಿರುದ್ದ ಐಪಿಸಿ ಸೆಕ್ಷನ್ 324(ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಹಲ್ಲೆ) ಹಾಗೂ ಐಪಿಸಿ ಸೆಕ್ಷನ್ 504(ಉದ್ದೇಶಪೂರ್ವಕವಾಗಿ ಮಾಡಿದ ಅಪಮಾನ) ಅಡಿ ಕೇಸು ದಾಖಲಿಸಲಾಗಿದೆ.
 

66

ಸದ್ಯ ಬಾಂದ್ರಾ ಪೊಲೀಸರು  ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಆದರೆ ಇದುವರೆಗೂ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಯನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories