19 ಸಿಕ್ಸರ್, 34 ಎಸೆತಗಳಲ್ಲಿ ಶತಕ! ಆರ್‌ಸಿಬಿಯಲ್ಲಿ ಬೆಂಚ್ ಕಾಯಿಸಿದ್ದ ಆಟಗಾರನಿಂದ ವಿಸ್ಪೋಟಕ ಇನ್ನಿಂಗ್ಸ್!

Published : Jun 13, 2025, 03:13 PM IST

ಬೆಂಗಳೂರು: ಕೆಲವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ನ್ಯೂಜಿಲೆಂಡ್ ಮೂಲದ ಸ್ಪೋಟಕ ಬ್ಯಾಟರ್, ಇದೀಗ ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಅಳಿಸಿ ಹಾಕಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದಾಗ ಈ ಆಟಗಾರನಿಗೆ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. 

PREV
18

ಒಂದು ಕಾಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಸಹಪಾಠಿಯಾಗಿದ್ದ ಕಿವೀಸ್ ಮೂಲದ ಬ್ಯಾಟರ್, ಇದೀಗ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ದಾಖಲೆ ನುಚ್ಚುನೂರು ಮಾಡಿದ್ದಾರೆ. ಆದರೆ ಈ ಆಟಗಾರನಿಗೆ ಆರ್‌ಸಿಬಿ ತಂಡದಲ್ಲಿ ಆಡಲು ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ.

28

ಹೌದು, ನಾವು ಹೇಳುತ್ತಿರುವುದು ಫಿನ್ ಅಲೆನ್ ಅವರ ಬಗ್ಗೆ. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಕೇವಲ 80 ಲಕ್ಷ ರುಪಾಯಿ ನೀಡಿ ಫಿನ್ ಅಲೆನ್ ಅವರನ್ನು ಖರೀದಿಸಿತ್ತು. 

48

ಇದೀಗ ಫಿನ್ ಅಲೆನ್‌ ಎಂಎಲ್‌ಸಿ 2025 ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು, ವಾಷಿಂಗ್ಟನ್ ಫ್ರೀಡಂ ತಂಡದ ಎದುರು ಮೊದಲ ಪಂದ್ಯದಲ್ಲೇ ವಿಸ್ಪೋಟಕ 151 ರನ್ ಸಿಡಿಸಿ ಗಮನ ಸೆಳೆದಿದ್ದಾರೆ.

58

ವಾಷಿಂಗ್ಟನ್ ತಂಡದ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಫಿನ್ ಅಲೆನ್, ಟಿ20 ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ಕ್ರಿಸ್ ಗೇಲ್ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.

68

ಕ್ರಿಸ್ ಗೇಲ್ ಹಾಗೂ ಈಸ್ಟೋನಿಯಾದ ಸಾಹಿಲ್ ಚೌಹ್ಹಾಣ್ ಟಿ20 ಇನ್ನಿಂಗ್ಸ್‌ನಲ್ಲಿ 18 ಸಿಕ್ಸರ್ ಸಿಡಿಸಿದ್ದರು. ಇದೀಗ ಅಲೆನ್ 19 ಸಿಕ್ಸರ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

78

ಕಿವೀಸ್ ಪರ ಅತಿವೇಗದ ಶತಕ ಸಾಧಕ ಅಲೆನ್:

ಫಿನ್ ಅಲೆನ್ ಇದೀಗ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕಿವೀಸ್‌ನ ಅತಿವೇಗದ ಶತಕ ಸಾಧಕ ಎನಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಎಂಎಲ್‌ಸಿ ಟೂರ್ನಿ ಇತಿಹಾಸದಲ್ಲೂ ಇದು ಅತಿವೇಗದ ಶತಕ ಎನಿಸಿಕೊಂಡಿದೆ. ಇದಕ್ಕೂ ಮೊದಲು ಮಾರ್ಟಿನ್ ಗುಪ್ಟಿಲ್ 35 ಎಸತಗಳಲ್ಲಿ ಶತಕ ಸಿಡಿಸಿದ್ದರು.

88

ವಾಷಿಂಗ್ಟನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಫಿನ್ ಅಲೆನ್, 51 ಎಸೆತಗಳನ್ನು ಎದುರಿಸಿ 19 ಸಿಕ್ಸರ್, 5 ಬೌಂಡರಿ ಸಹಿತ 296.08ರ ಸ್ಟ್ರೈಕ್‌ರೇಟ್‌ನಲ್ಲಿ 151 ರನ್ ಸಿಡಿಸಿದರು.

Read more Photos on
click me!

Recommended Stories