ಇಂಗ್ಲೆಂಡ್ ತಂಡದವರು ಬೌಲಿಂಗ್‌ನಲ್ಲಿ ಎಕ್ಸ್‌ಟ್ರಾ ರೂಪದಲ್ಲಿ 38 ರನ್‌ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ 16 ವೈಡ್, 4 ನೋ ಬಾಲ್‌ಗಳು ಸೇರಿವೆ. ಬೈಸ್ ರೂಪದಲ್ಲಿ 12 ರನ್‌ಗಳು ಸೇರಿವೆ. ಇಂಗ್ಲೆಂಡ್ ಆಟಗಾರ ಜೋಸ್ ಟಂಗ್ 4 ವೈಡ್‌ಗಳನ್ನು ಸೇರಿದಂತೆ ಹೆಚ್ಚು ರನ್‌ಗಳನ್ನು ನೀಡಿದರು. ಇಲ್ಲಿ ಗಮನಾರ್ಹ ವಿಷಯವೆಂದರೆ ಭಾರತ ತಂಡದಲ್ಲಿ 2ನೇ ಅತಿ ಹೆಚ್ಚು ರನ್ ಎಕ್ಸ್‌ಟ್ರಾ. ಕರುಣ್ ನಾಯರ್ 56 ರನ್ ಮತ್ತು ಸಾಯಿ ಸುದರ್ಶನ್ 38 ರನ್ ಗಳಿಸಿದ್ದರು. ಇದರ ನಂತರ ಎಕ್ಸ್‌ಟ್ರಾ ರೂಪದಲ್ಲಿ 38 ರನ್‌ಗಳು ಬಂದಿವೆ.