Cricketer Passed Away: ಛೇ.. ಎಂಥ ದುರಂತ! ಮೆಡಿಕಲ್‌ ಸಹಾಯ ಸಿಗದೆ ರೈಲಿನಲ್ಲೇ ಪ್ರಾಣಬಿಟ್ಟ‌ ಭಾರತೀಯ ಕ್ರಿಕೆಟರ್

Published : Jun 07, 2025, 06:00 AM IST

ಅಂಗಚೇತನ ಕ್ರಿಕೆಟ್ ಆಟಗಾರೊಬ್ಬರು ಚತ್ತೀಸ್‌ಗಢ ಎಕ್ಸ್‌ಪ್ರೆಸ್‌ನಲ್ಲಿ ಹೋಗುವಾಗ ದುರಂತವಾಗಿ ಸಾವನ್ನಪ್ಪಿದ್ದಾರೆ.

PREV
16

ವಿಕ್ರಮ ಸಿಂಗ್ ಎಂಬ ಪಂಜಾಬ್ ಮೂಲದ ವೀಳ್ಯದ 38 ವರ್ಷದ ಕ್ರಿಕೆಟರ್‌, ದೆಹಲಿಯಿಂದ ಗ್ವಾಲಿಯರ್‌ಗೆ ಹೋಗುತ್ತಿದ್ದಾಗ, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

26

ರೈಲ್ವೆ ಹಿಲ್ಪ್ ಲೈನ್‌ಗೆ ಹಲವಾರು ಬಾರಿ ಕರೆ ಮಾಡಲಾದರೂ, ವೈದ್ಯಕೀಯ ತಂಡ ಬಂದೇ ಇಲ್ಲ. ಸಿಂಗ್ ಅವರು ರೈಲು ಹೋಗುತ್ತಿದ್ದಾಗಲೇ ನಿಧನರಾಗಿದ್ದಾರೆ. ಮಥುರಾ ನಿಲ್ದಾಣಕ್ಕೆ ಹೋಗುತ್ತಿರುವಾಗಲೇ ವಿಕ್ರಮ್‌ ಆರೋಗ್ಯ ಹದಗೆಟ್ಟಿದೆ.

36

ಬೆಳಗ್ಗೆ 4.58ಕ್ಕೆ ರೈಲ್ವೆ ಹೆಲ್ಪ್‌ಲೈನ್‌ಗೆ ಫೋನ್‌ ಮಾಡಿದರೂ ಕೂಡ ಯಾರೂ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಎಷ್ಟೇ ಬಾರಿ ಫೋನ್‌ ಮಾಡಿದರೂ ಕೂಡ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

46

ಹಜ್ರತ್ ನಿಜಾಮುದ್ದೀನ್ ನಿಲ್ದಾಣದಿಂದ ಇತ್ತೀಚೆಗೆ ರಾತ್ರಿ ಜಾಮ್‌ನಲ್ಲಿ ಚಲಿಸಿದ ಚತ್ತೀಸ್‌ಘಡ ಎಕ್ಸ್‌ಪ್ರೆಸ್‌ನಲ್ಲಿ ಸಿಂಗ್‌ ಅವರು ಏಕಾಂಗಿಯಾಗಿ ಹೋಗಿದ್ದರು.

56

ಮಥುರಾ ಸ್ಟೇಶನ್‌ ತಲುಪುವ ಮುನ್ನವೇ ಟ್ರೇನ್‌ 1.5 ಗಂಟೆಗಳ ಕಾಲ ತಂಗಿತ್ತು. ಬೆಳಿಗ್ಗೆ 8.10ಕ್ಕೆ ಪ್ಲಾಟ್‌ಫಾರ್ಮ್‌ನಲ್ಲಿತ್ತು. ಎಷ್ಟೇ ಸಹಾಯಕ್ಕೆ ಅಂಗಲಾಚಿದರೂ ಕೂಡ ಯಾರೂ ಬಂದಿರಲಿಲ್ಲ. ನಮ್ಮ ಕಣ್ಣು ಮುಂದೆ ವಿಕ್ರಮ್‌ ಸಾವಾಯ್ತು ಎಂದು ತಂಡದಲ್ಲಿದ್ದವರು ಹೇಳಿದ್ದಾರೆ.

66

ಮಥುರಾ ನಿಲ್ದಾಣಕ್ಕೆ ಬರುತ್ತಿದ್ದಂತೆ ದೇಹವನ್ನು ರೈಲಿನಿಂದ ಹೊರಗಡೆ ತಂದು, ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ.

ಭಾರತೀಯ ರೈಲ್ವೆಯಲ್ಲಿ ಎಮರ್ಜೆನ್ಸಿ ಇದ್ದಾಗಲೂ ಈ ರೀತಿ ಮಾಡುತ್ತಾರಾ ಎಂದು ಚರ್ಚೆ ಶುರು ಆಗಿದೆ. ಇದು ಕೇವಲ ದುರಂತ ಒಂದೇ ಅಲ್ಲದೆ ಭಾರತೀಯ ರೈಲ್ವೆಯಲ್ಲಿ ಮೆಡಿಕಲ್‌ ಕಂಡೀಶನ್‌ ಹೇಗಿದೆ ಎಂದು ತಿಳಿಸಿಕೊಡುವ ಉದಾಹರಣೆಯೂ ಆಗಿದೆ. ವಿಶೇಷ ಚೇತನ ಸಂಸ್ಥೆಗಳು ಈ ಬಗ್ಗೆ ಪ್ರಶ್ನೆ ಮಾಡುತ್ತಿವೆ.

Read more Photos on
click me!

Recommended Stories