ಸಿಎಸ್‌ಕೆ ಪ್ಲೇಯಿಂಗ್ XI
ಇವರ ಬದಲಿಗೆ ಆಂಡ್ರೆ ಸಿದ್ದಾರ್ಥ್ ಅವರನ್ನು ತಂಡಕ್ಕೆ ತೆಗೆದುಕೊಳ್ಳಲಾಗುವುದು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಚಿನ್ ರವೀಂದ್ರ, ಡೆವಾನ್ ಕಾನ್ವೇ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇಬ್ಬರಿಗೂ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದೆ. ನಂತರ ವಿಜಯ್ ಶಂಕರ್ ಕಣಕ್ಕಿಳಿಯಲಿದ್ದಾರೆ. ಇವರ ನಂತರ ಯುವ ಆಟಗಾರ ಆಂಡ್ರೆ ಸಿದ್ದಾರ್ಥ್ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರ ಶೇಕ್ ರಶೀದ್, ಶಿವಂ ದುಬೆ ಆಡಲಿದ್ದಾರೆ. ಹಿಂಬಾಲಕರಲ್ಲಿ ಜಡೇಜಾ, ಧೋನಿ ಬ್ಯಾಟಿಂಗ್ ಮಾಡಲಿದ್ದಾರೆ.
ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್, ಪತಿರನಾ, ಖಲೀಲ್ ಅಹ್ಮದ್ ವೇಗದ ಬೌಲಿಂಗ್‌ನಲ್ಲೂ, ನೂರ್ ಅಹ್ಮದ್, ಜಡೇಜಾ, ಅಗತ್ಯವಿದ್ದರೆ ರಚಿನ್ ರವೀಂದ್ರ ಸ್ಪಿನ್ ಬೌಲಿಂಗ್‌ನಲ್ಲೂ ಬಲ ತುಂಬಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಪ್ಲೇಯಿಂಗ್ XI: ಮಹೇಂದ್ರ ಸಿಂಗ್ ಧೋನಿ (ನಾಯಕ), ರಚಿನ್ ರವೀಂದ್ರ, ಡೆವಾನ್ ಕಾನ್ವೇ, ವಿಜಯ್ ಶಂಕರ್, ಆಂಡ್ರೆ ಸಿದ್ದಾರ್ಥ್, ಶಿವಂ ದುಬೆ, ರವೀಂದ್ರ ಜಡೇಜಾ, ಅನ್ಶುಲ್ ಕಾಂಬೋಜ್, ಮತೀಶ ಪತಿರನಾ, ಖಲೀಲ್ ಅಹ್ಮದ್, ನೂರ್ ಅಹ್ಮದ್.